ಪವನ್ ಕಲ್ಯಾಣ್ ಗೆದ್ದ ಬೆನ್ನಲ್ಲೆ ಹಳೆಯ ಸಿನಿಮಾ ಮರು ಬಿಡುಗಡೆ

ಪವನ್ ಕಲ್ಯಾಣ್ ಪೀಠಾಪುರಂ ಕ್ಷೇತ್ರದಿಂದ ಗೆದ್ದು ಶಾಸಕರಾದ ಬೆನ್ನಲ್ಲೆ ಪವನ್ ಕಲ್ಯಾಣ್​ರ ಹಳೆಯ ಸೂಪರ್ ಹಿಟ್ ಸಿನಿಮಾ ಮರು ಬಿಡುಗಡೆ ಆಗಲಿದೆ. 1999 ರಲ್ಲಿ ಬಿಡುಗಡೆ ಆಗಿದ್ದ ‘ತಮ್ಮುಡು’ ಸಿನಿಮಾ ಮರು ಬಿಡುಗಡೆ ಆಗಲಿದೆ.

ಪವನ್ ಕಲ್ಯಾಣ್ ಗೆದ್ದ ಬೆನ್ನಲ್ಲೆ ಹಳೆಯ ಸಿನಿಮಾ ಮರು ಬಿಡುಗಡೆ
Follow us
|

Updated on: Jun 08, 2024 | 9:54 PM

ಆಂಧ್ರ ಪ್ರದೇಶ (Andhra Pradesh) ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ (Pawan Kalyan) ಭರ್ಜರಿ ಜಯ ಸಾಧಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯವೆಲ್ಲ ಸುತ್ತಾಡಿ, ರಸ್ತೆಗಿಳಿದು ಸರ್ಕಾರದ ವಿರುದ್ಧ ಹೋರಾಡಿ ಕೊನೆಗೂ ತಮ್ಮ ಗುರಿ ಸಾಧಿಸಿದ್ದಾರೆ. ಟಿಡಿಪಿ, ಬಿಜೆಪಿ ಜೊತೆ ಸೇರಿಕೊಂಡು ಆಂಧ್ರದ ಆಡಳಿತ ಪಕ್ಷವಾದ ವೈಸಿಪಿಯನ್ನು ಸೋಲಿಸಿ ಜಗನ್ ಅನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಚಿತ್ರರಂಗವಂತೂ ಪವನ್​ರ ಜನಸೇನಾ ಹಾಗೂ ಟಿಡಿಪಿ ಅಧಿಕಾರಕ್ಕೆ ಬಂದಿರುವುದನ್ನು ಸಂಭ್ರಮಿಸುತ್ತಿದೆ. ಇದರ ನಡುವೆ ಇದೀಗ ಪವನ್​ರ ಹಳೆಯ ಸಿನಿಮಾ ಒಂದು ಮರುಬಿಡುಗಡೆಗೆ ಮಾಡಲಾಗುತ್ತಿದೆ.

1999 ರಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದ್ದ ‘ತಮ್ಮುಡು’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾ 1999 ರ ಜೂನ್ 9 ರಂದು ಬಿಡುಗಡೆ ಆಗಿತ್ತು. ಈ ವರ್ಷ ಜೂನ್ 9 ಕ್ಕೆ ಸಿನಿಮಾ ಬಿಡುಗಡೆ ಆಗಿ 25 ವರ್ಷ ಪೂರ್ಣಗೊಳಿಸುತ್ತಿರುವ ಕಾರಣ, ಇದೀಗ ಈ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಚುನಾವಣೆ ಬಳಿಕ ಪವನ್​ರ ಜನಪ್ರಿಯತೆ ದುಪ್ಪಟ್ಟಾಗಿದ್ದು, ‘ತಮ್ಮುಡು’ ಸಿನಿಮಾ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಭರ್ಜರಿ ಕಲೆಕ್ಷನ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಪ್ರತಿಯೊಬ್ಬ ಭಾರತೀಯನಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಿದ್ದಾರೆ: ಪವನ್ ಕಲ್ಯಾಣ್

ಈ ಹಿಂದೆ ಪವನ್​ರ ‘ಜಲ್ಸ’, ‘ಗಬ್ಬರ್ ಸಿಂಗ್’, ‘ತೊಲಿ ಪ್ರೇಮ’ ಇನ್ನೂ ಕೆಲವು ಸಿನಿಮಾಗಳು ಮರು ಬಿಡುಗಡೆ ಆಗಿ ಒಳ್ಳೆಯ ಕಲೆಕ್ಷನ್ ಮಾಡಿದ್ದವು. ಈಗ ‘ತಮ್ಮುಡು’ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು ಈ ಸಿನಿಮಾ ಸಹ ಒಳ್ಳೆಯ ಕಲೆಕ್ಷನ್ ಮಾಡುವ ಭರವಸೆ ಅಭಿಮಾನಿಗಳಲ್ಲಿದೆ. ‘ತಮ್ಮುಡು’ ಸಿನಿಮಾ ಹಿಂದಿಯ ‘ಜೋ ಜೀತಾ ವಹಿ ಸಿಂಖಧರ್’ ಸಿನಿಮಾದ ರೀಮೇಕ್ ಆಗಿದೆ. ಆದರೆ ಆ ಸಿನಿಮಾದಲ್ಲಿ ನಾಯಕ ಸೈಕಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದರೆ, ‘ತಮ್ಮುಡು’ ಸಿನಿಮಾದಲ್ಲಿ ನಾಯಕ ಬಾಕ್ಸಿಂಗ್ ಮಾಡಿ ಗೆಲ್ಲುತ್ತಾನೆ.

‘ತಮ್ಮುಡು’ ಸಿನಿಮಾವನ್ನು ಅರುಣ್ ಪ್ರಸಾದ್ ನಿರ್ದೇಶನ ಮಾಡಿದ್ದರು, ಸಿನಿಮಾಕ್ಕೆ ರಮಣ್ ಗೋಕುಲ ನೀಡಿದ್ದ ಸಂಗೀತ ದೊಡ್ಡ ಹಿಟ್ ಆಗಿತ್ತು. ಇದೇ ಸಿನಿಮಾವನ್ನು ಕನ್ನಡದಲ್ಲಿ ‘ಯುವರಾಜ’ ಹೆಸರಿನಲ್ಲಿ ಶಿವರಾಜ್ ಕುಮಾರ್ ಸಹ ರೀಮೇಕ್ ಮಾಡಿದ್ದರು. ಆ ಸಿನಿಮಾ ಸಹ ಸೂಪರ್ ಹಿಟ್ ಎನಿಸಿಕೊಂಡಿತ್ತು.

ಪವನ್ ಕಲ್ಯಾಣ್ ಇದೀಗ ಪೀಠಾಪುರಂ ಶಾಸಕರಾಗಿದ್ದು, ಎನ್​ಡಿಎದ ಭಾಗವೂ ಆಗಿದ್ದಾರೆ. ಪವನ್​ಗೆ ಆಂಧ್ರ ಸರ್ಕಾರದಲ್ಲಿ ಪ್ರಮುಖ ಖಾತೆಯೂ ದೊರೆಯಲಿದೆ ಎನ್ನಲಾಗುತ್ತಿದೆ. ರಾಜಕಾರಣದ ನಡುವೆ ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ನಟಿಸುವುದು ಮುಂದುವರೆಸುತ್ತಾರೆಯೇ ಇಲ್ಲವೇ ಎಂಬ ಅನುಮಾನ ಅಭಿಮಾನಿಗಳಿಗಿದೆ. ಪವನ್ ನಟಿಸಿರುವ ‘ಓಜಿ’, ‘ಹರಿಹರ ವೀರಮಲ್ಲು’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಬಿಡುಗಡೆಗೆ ರೆಡಿಯಿದೆ. ಆದಷ್ಟು ಶೀಘ್ರವೇ ಈ ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ
ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ
Daily Horoscope: ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು
Daily Horoscope: ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು
ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ
ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ
ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ..
ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ..
ಅಂತಾರಾಷ್ಟ್ರೀಯ ಯೋಗ ದಿನ; ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು
ಅಂತಾರಾಷ್ಟ್ರೀಯ ಯೋಗ ದಿನ; ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು
ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ಶ್ರೀನಿವಾಸ್​
‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ಶ್ರೀನಿವಾಸ್​
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು