ಪವನ್ ಕಲ್ಯಾಣ್ ಅಭಿಮಾನಿಗಳು ಈ ಸುದ್ದಿ ಓದಿದ್ರೆ ಬೇಸರ ಆಗೋದು ಪಕ್ಕಾ

| Updated By: ರಾಜೇಶ್ ದುಗ್ಗುಮನೆ

Updated on: Mar 04, 2025 | 8:04 AM

ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ರಾಜಕೀಯ ಚಟುವಟಿಕೆಗಳಿಂದಾಗಿ ಚಿತ್ರೀಕರಣದಲ್ಲಿ ವಿಳಂಬ ಉಂಟಾಗಿದೆ. ಮಾರ್ಚ್ 28 ರ ಬಿಡುಗಡೆ ದಿನಾಂಕದ ಬದಲು ಮೇ ನಂತರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಿಂದ ಅಭಿಮಾನಿಗಳಲ್ಲಿ ನಿರಾಶೆ ಮೂಡಿದೆ.

ಪವನ್ ಕಲ್ಯಾಣ್ ಅಭಿಮಾನಿಗಳು ಈ ಸುದ್ದಿ ಓದಿದ್ರೆ ಬೇಸರ ಆಗೋದು ಪಕ್ಕಾ
ಪವನ್ ಕಲ್ಯಾಣ್
Follow us on

ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಡಿಸಿಎಂ ಆಗಿದ್ದಾರೆ. ಇದಾದ ಬಳಿಕ ಅವರ ಅಭಿಮಾನಿಗಳು ಸಾಕಷ್ಟು ಕುತೂಹಲಗೊಂಡಿದ್ದರು. ಅವರು ರಾಜಕೀಯದಲ್ಲಿ ತೊಡಗಿಕೊಂಡರೆ ಸಿನಿಮಾ ಕೆಲಸಗಳನ್ನು ಹೇಗೆ ಮಾಡುತ್ತಾರೆ ಎನ್ನುವ ಪ್ರಶ್ನೆ ಮೂಡಿತ್ತು. ಆದರೆ, ರಾಜಕೀಯ ಸಿನಿಮಾ ಕೆಸಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗೋದಾಗಿ ಅವರು ಹೇಳಿದ್ದರು. ಆದರೆ, ಇದು ಸಾಧ್ಯವಾಗುತ್ತಿಲ್ಲ. ಈಗ ಅವರ ಅಭಿಮಾನಿಗಳಿಗೆ ಬೇಸರದ ವಿಚಾರ ಇದೆ.

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾ ಸೆಟ್ಟೇರಿ ಬಹಳ ಸಮಯವೇ ಕಳೆದಿದೆ. ಆದರೆ, ಪವನ್ ಕಲ್ಯಾಣ್ ಅವರು ಈ ಚಿತ್ರದ ಶೂಟ್​ನ ಅಂದುಕೊಂಡಂತೆ ಮುಗಿಸೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಾರ್ಚ್ 28ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅಂದುಕೊಂಡ ದಿನಾಂಕದಂದು ಚಿತ್ರ ಬರುತ್ತಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಪವನ್ ಕಲ್ಯಾಣ್ ಹೀರೋ ಆಗಿ ನಟಿಸಿದ ಸಿನಿಮಾ ನೋಡಿ ಬಹಳ ವರ್ಷಗಳೇ ಕಳೆದಿವೆ. ಇದು ಕೂಡ ಬೇಸರ ಹೆಚ್ಚಲು ಕಾರಣ.

ಇದನ್ನೂ ಓದಿ
ನಟ ಪೋಸಾನಿ ಕೃಷ್ಣ ಮುರಳಿ ಬಂಧನ, ಪವನ್ ಕಲ್ಯಾಣ್ ಕೈವಾಡ?
ತಮ್ಮದೇ ಸಿನಿಮಾ ಸೀನ್ ವಿವರಿಸಿದ ಪವನ್ ಕಲ್ಯಾಣ್, ನಕ್ಕು ಸುಸ್ತಾದ ಸಚಿವರು
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ

ಹಾಗಾದರೆ ಈ ಸಿನಿಮಾ ಬರೋದು ಯಾವಾಗ? ಸದ್ಯಕ್ಕಂತೂ ಯಾವುದೂ ಫೈನಲ್ ಆಗಿಲ್ಲ. ಇನ್ನೂ ಶೂಟಿಂಗ್ ಪ್ರಗತಿಯಲ್ಲಿ ಇದೆ. ಹೀಗಾಗಿ, ಮೇ ನಂತರ ಸಿನಿಮಾ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಅಲ್ಲಿಯವರೆಗೆ ಕಾಯಲೇಬೇಕಾದ ಅನಿವಾರ್ಯತೆ ಅಭಿಮಾನಿಗಳಿಗೆ ಈಗ ಬಂದೊದಗಿದೆ.

2022ರಲ್ಲಿ ಬಂದ ‘ಭೀಮ್ಲಾ ನಾಯಕ್’ ಚಿತ್ರವೇ ಕೊನೆ. ಇದಾದ ಬಳಿಕ ಪವನ್ ಕಲ್ಯಾಣ್ ಹೀರೋ ಆಗಿ ನಟಿಸಿದ ಸಿನಿಮಾ ರಿಲೀಸ್ ಆಗಿಲ್ಲ. ಈ ಚಿತ್ರ ಕೂಡ ಹಿಟ್ ಆಗಿರಲಿಲ್ಲ. ಸದ್ಯ ಅವರ ನಟನೆಯ ‘ಹರಿ ಹರ ವೀರ ಮಲ್ಲು: ಪಾರ್ಟ್ 1’ ಜೊತೆಗೆ ‘ದೆ ಕಾಲ್​ ಮಿ ಒಜಿ’, ‘ಉಸ್ತಾದ್ ಭಗತ್ ಸಿಂಗ್’ ಕೆಲಸಗಳನ್ನೂ ಮಾಡಬೇಕಿದೆ. ‘ಹರಿ ಹರ ವೀರ ಮಲ್ಲು: ಪಾರ್ಟ್ 2’ ಕೂಡ ಬರಬೇಕಿದೆ.

ಇದನ್ನೂ ಓದಿ: ನಟ ಪೋಸಾನಿ ಕೃಷ್ಣ ಮುರಳಿ ಬಂಧನ, ಪವನ್ ಕಲ್ಯಾಣ್ ಕೈವಾಡ?

ಸದ್ಯ ತಂಡಕ್ಕೆ ಮತ್ತೊಂದು ಭಯ ಉಂಟಾಗಿದೆ. ಸಿನಿಮಾದ ಶೂಟ್ ವಿಳಂಬ ಆಗುತ್ತ ಹೋದಂತೆ ಕಂಟ್ಯೂನಿಟಿ ತಪ್ಪುವ ಭಯ ಇರುತ್ತದೆ. ಇದರಿಂದ ಸಿನಿಮಾ ಫ್ಲಾಪ್ ಆಗಲೂಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.