ತಮ್ಮದೇ ಸಿನಿಮಾ ಸೀನ್ ವಿವರಿಸಿದ ಪವನ್ ಕಲ್ಯಾಣ್, ನಕ್ಕು ಸುಸ್ತಾದ ಸಚಿವರು
Pawan Kalyan: ನಟ ಪವನ್ ಕಲ್ಯಾಣ್ ರಾಜಕೀಯಕ್ಕೆ ಇಳಿದ ಬಳಿಕ ಸಿನಿಮಾಗಳಿಂದ ದೂರವಾಗಿದ್ದಾರೆ. ಆದರೆ ಸಿನಿಮಾ ಅವರಿಂದ ದೂರಾಗಿಲ್ಲ. ಅವರ ರಾಜಕೀಯ ಭಾಷಣಗಳಲ್ಲಿಯೂ ಸಿನಿಮಾಗಳು ಆಗಾಗ್ಗೆ ಇಣುಕುತ್ತಿರುತ್ತವೆ. ಇತ್ತೀಚೆಗೆ ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆಯಲ್ಲಿ ಮಾತನಾಡಿದರು. ಈ ವೇಳೆ ಅವರದ್ದೇ ಸಿನಿಮಾದ ದೃಶ್ಯವೊಂದನ್ನು ವಿವರಿಸಿದರು. ಪವನ್ ವಿವರಣೆ ಕೇಳಿ ಇಡೀ ವಿಧಾನಸಭೆಯೇ ನಗೆಗಡಲಲ್ಲಿ ತೇಲಿತು.

ಪವನ್ ಕಲ್ಯಾಣ್, ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಸಿನಿಮಾ ಅನ್ನು ಪೂರ್ಣವಾಗಿ ತ್ಯಜಿಸಿಲ್ಲ. ಅವರ ರಾಜಕೀಯ ಭಾಷಗಳಲ್ಲೂ ಸಿನಿಮಾ ಇಣುಕುತ್ತಲೇ ಇರುತ್ತದೆ. ಕೆಲ ತಿಂಗಳ ಹಿಂದೆ ಅವರು ಬೆಂಗಳೂರಿಗೆ ಬಂದಾಗಲೂ ಕನ್ನಡ ಸಿನಿಮಾ, ತೆಲುಗು ಸಿನಿಮಾಗಳ ಬಗ್ಗೆ ಮಾತನಾಡಿದ್ದರು. ಚುನಾವಣಾ ಪ್ರಚಾರ ಭಾಷಗಳಲ್ಲಿಯೂ ಅವರು ಸಿನಿಮಾಗಳ ಬಗ್ಗೆ ಮಾತನಾಡಿದ್ದರು. ಈಗ ಗೆದ್ದು ಆಂಧ್ರದ ಉಪ ಮುಖ್ಯಮಂತ್ರಿ ಆದ ಬಳಿಕ ವಿಧಾನಸಭೆಯಲ್ಲೂ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಪವನ್ ಮಾತು ಕೇಳಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಇಡೀ ಅಸೆಂಬ್ಲಿಯೇ ನಗೆ ಗಡಲಲ್ಲಿ ತೇಲಿದೆ.
ಆಂಧ್ರ ವಿಧಾನಸಭೆ ಅಧಿವೇಶನ ಚಾಲ್ತಿಯಲ್ಲಿದ್ದು, ಇತ್ತೀಚೆಗೆ ಅಸೆಂಬ್ಲಿಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ತಮ್ಮದೇ ಸಿನಿಮಾ ಒಂದರ ಹಾಸ್ಯ ದೃಶ್ಯವನ್ನು ವಿವರಿಸಿದ್ದಾರೆ. ಪವನ್ ವಿವರಿಸಿದ ರೀತಿ ಕೇಳಿ ಇಡೀ ಅಸೆಂಬ್ಲಿಯೇ ನಗೆಗಡಲಲ್ಲಿ ತೇಲಿದೆ. ಪವನ್ ಕಲ್ಯಾಣ್, ‘ಜಲ್ಸಾ’ ಹೆಸರಿನ ಸಿನಿಮಾ ಒಂದರಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಬ್ರಹ್ಮಾನಂದಂ ಸಹ ಇದ್ದರು. ಸಿನಿಮಾದ ಹಾಸ್ಯ ದೃಶ್ಯಗಳು ಬಹಳ ಫೇಮಸ್ ಆಗಿದ್ದವು.
ತಮ್ಮ ಸರ್ಕಾರದ ಬೊಕ್ಕಸವನ್ನು ಹಿಂದಿನ ಸರ್ಕಾರ ಲೂಟಿ ಮಾಡಿದೆ ಎಂದು ಹೇಳುತ್ತಿದ್ದ ಪವನ್ ಕಲ್ಯಾಣ್ ‘ಜಲ್ಸಾ’ ಸಿನಿಮಾದ ದೃಶ್ಯವನ್ನು ಉದಾಹರಣೆಯಾಗಿ ನೀಡಿದರು. ಆ ಸಿನಿಮಾದ ದೃಶ್ಯದಲ್ಲಿ ಬ್ರಹ್ಮಾನಂದ ಕದ್ದು ಮುಚ್ಚಿ ಪವನ್ ಕಲ್ಯಾಣ್ ಇರುವ ಮನೆಗೆ ಬರುತ್ತಾರೆ. ಬಂದು ಬೀರು ಒಂದರಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಅದನ್ನು ಪವನ್ ಕಲ್ಯಾಣ್ ಮತ್ತು ಅವರ ಗೆಳೆಯರು ನೋಡಿಬಿಡುತ್ತಾರೆ. ಆಗ ಪವನ್ ಕಲ್ಯಾಣ್ರ ಗೆಳೆಯನೊಬ್ಬ ಬಂದು, ಪವನ್ ಬಳಿ ‘ನನಗೆ ಎರಡು ಸಾವಿರ ಹಣ ಬೇಕು’ ಎಂದು ಕೇಳುತ್ತಾರೆ, ಆಗ ಪವನ್, ಬ್ರಹ್ಮಾನಂದಂ ಅಡಗಿಕೊಂಡಿರುವ ಬೀರು ತೋರಿಸಿ ಆ ಬೀರು ನಲ್ಲಿ ಶರ್ಟ್ ಒಂದಿದೆ ಅದರ ಜೇಬಲ್ಲಿ ಇಟ್ಟಿದ್ದೀನಿ ತೆಗೆದುಕೊ’ ಎನ್ನುತ್ತಾರೆ.
ಇದನ್ನೂ ಓದಿ:ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಆದರೆ ಆ ಬೀರುವಿನಲ್ಲಿ ಶರ್ಟ್ ಇರುವುದಿಲ್ಲ ಬದಲಿಗೆ ಬ್ರಹ್ಮಾನಂದಂ ಇರುತ್ತಾರೆ. ಆದರೆ ಬ್ರಹ್ಮಾನಂದಂ ಸಿಕ್ಕಿಹಾಕಿಕೊಳ್ಳಬಾರದು ಎಂದು ತಾನು ತೊಟ್ಟಿರುವ ಶರ್ಟನ್ನೇ ಬೀರು ಒಳಗೆ ನೇತುಹಾಕಿ, ಶರ್ಟ್ನ ಜೇಬಿನಲ್ಲಿ ಎರಡು ಸಾವಿರ ಹಣ ಇಡುತ್ತಾರೆ. ಅದನ್ನು ಪವನ್ನ ಗೆಳೆಯ ತೆಗೆದುಕೊಳ್ಳುತ್ತಾನೆ, ಆ ಬಳಿಕ ಇನ್ನೊಬ್ಬ ಗೆಳೆಯ ಬಂದು ವಾಚ್ ಬೇಕು ಎನ್ನುತ್ತಾನೆ, ಆಗ ಪವನ್ ಬೀರುನಲ್ಲಿರುವ ಶರ್ಟ್ನ ಜೇಬಿನಲ್ಲಿದೆ ಎನ್ನುತ್ತಾರೆ, ಆಗ ಬ್ರಹ್ಮಾನಂದಂ ತನ್ನ ವಾಚ್ ತೆಗೆದು ಶರ್ಟ್ನ ಜೇಬಿಗೆ ಹಾಕುತ್ತಾನೆ, ಹೀಗೆ ಮಾಡುತ್ತಾ ಮಾಡುತ್ತಾ ಬ್ರಹ್ಮಾನಂದಂ ಬಳಿ ಇರುವುದೆಲ್ಲ ಖಾಲಿ ಮಾಡುತ್ತಾರೆ.
ಈ ದೃಶ್ಯವನ್ನು ಉದಾಹರಣೆಯಾಗಿ ನೀಡಿದ ಪವನ್ ಕಲ್ಯಾಣ್, ನಮ್ಮ ಪರಿಸ್ಥಿತಿಯೂ ಹೀಗೆಯೇ ಆಗಿದೆ. ಈ ಹಿಂದೆ ಆಡಳಿತದಲ್ಲಿದ್ದ ಪಕ್ಷದವರು ಖಜಾನೆಯನ್ನು ಲೂಟಿ ಮಾಡಿ ಹೋಗಿದ್ದಾರೆ. ಈಗ ನಾವು ಅಲ್ಲಿ ಹಣ ಇದೆ, ಇಲ್ಲಿ ಹಣ ಇದೆ ಎಂದುಕೊಂಡು ನಾವೇ ಕೈಯಿಂದ ಹಣ ಹಾಕುವ ಪರಿಸ್ಥಿತಿ ಬಂದಿದೆ’ ಎಂದರು. ಪವನ್ರ ಈ ವಿವರಣೆ ಕೇಳಿ ಸಿಎಂ ಚಂದ್ರಬಾಬು ನಾಯ್ಡು ಸಮೇತ ಇಡೀ ವಿಧಾನಸಭೆ ನಗೆಗಡಲಲ್ಲಿ ತೇಲಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ