Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೊಮ್ಯಾಂಟಿಕ್ ಸೀನ್ ಚೆನ್ನಾಗಿ ಮೂಡಿಬರಲು ರವಿಕೆ ಟೈಟ್ ಮಾಡಿಸಿಕೊಂಡಿದ್ದ ಸ್ಟಾರ್ ನಟಿ

ರವಿ ಚೋಪ್ರಾ ನಿರ್ದೇಶನದ ‘ಬಾಘ್​ಬಾನ್’ ಚಿತ್ರದಲ್ಲಿ ಹೇಮಾ ಮಾಲಿನಿ ಅವರು ನಟಿಸಿದ್ದರು. ಒಂದು ರೊಮ್ಯಾಂಟಿಕ್ ದೃಶ್ಯಕ್ಕಾಗಿ ತಮ್ಮ ರವಿಕೆಯನ್ನು ಬಿಗಿಯಾಗಿ ಹೊಲಿಸಿಕೊಂಡಿದ್ದರು. ಈ ವಿಚಾರವನ್ನು ರೇಣು ಚೋಪ್ರಾ ಬಹಿರಂಗಪಡಿಸಿದ್ದಾರೆ. ಈ ತಂತ್ರವು ಅಮಿತಾಭ್ ಬಚ್ಚನ್ ಜೊತೆಗಿನ ದೃಶ್ಯಕ್ಕೆ ನೈಜತೆಯನ್ನು ತಂದಿತ್ತು .

ರೊಮ್ಯಾಂಟಿಕ್ ಸೀನ್ ಚೆನ್ನಾಗಿ ಮೂಡಿಬರಲು ರವಿಕೆ ಟೈಟ್ ಮಾಡಿಸಿಕೊಂಡಿದ್ದ ಸ್ಟಾರ್ ನಟಿ
ರೊಮ್ಯಾಂಟಿಕ್ ಸೀನ್ ಚೆನ್ನಾಗಿ ಮೂಡಿಬರಲು ರವಿಕೆ ಟೈಟ್ ಮಾಡಿಸಿಕೊಂಡಿದ್ದ ಸ್ಟಾರ್ ನಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 26, 2025 | 2:22 PM

ಸಿನಿಮಾ ದೃಶ್ಯಗಳು ಚೆನ್ನಾಗಿ ಮೂಡಿಬರಬೇಕು ಎನ್ನುವ ಕಾರಣಕ್ಕೆ ಅನೇಕರು ನಾನಾ ರೀತಿಯ ಪ್ರಯತ್ನ ಮಾಡುತ್ತಾರೆ. ಅದೇ ರೀತಿ 2003ರಲ್ಲಿ ರಿಲೀಸ್ ಆದ ರವಿ ಚೋಪ್ರಾ ನಿರ್ದೇಶನದ ‘ಬಾಘ್​ಬಾನ್’ ಚಿತ್ರದಲ್ಲಿನ ರೊಮ್ಯಾಂಟಿಕ್ ದೃಶ್ಯಕ್ಕಾಗಿ ಹೇಮಾ ಮಾಲಿನಿ ಅವರು ರವಿಕೆಯನ್ನು ಟೈಟ್ ಆಗಿ ಹೊಲಿಸಿಕೊಂಡಿದ್ದರು. ಈ ತಂತ್ರ ನಿಜಕ್ಕೂ ಚೆನ್ನಾಗಿ ಮೂಡಿ ಬಂದಿತ್ತು. ಈ ಬಗ್ಗೆ ರವಿ ಚೋಪ್ರಾ ಅವರ ಪತ್ನಿ ರೇಣು ಚೋಪ್ರಾ ಅವರು ಮಾಹಿತಿ ರಿವೀಲ್ ಮಾಡಿದ್ದಾರೆ.

‘ಬಾಘ್​ಬಾನ್​’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ಸಲ್ಮಾನ್ ಖಾನ್, ಮಹಿಮಾ ಚೌಧರಿ  ಮೊದಲಾದವರು ನಟಿಸಿದ್ದರು. ಈ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಯಶಸ್ಸು ಕಂಡಿತ್ತು. ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ ಕೆಮಿಸ್ಟ್ರಿ ಕೆಲಸ ಮಾಡಿತ್ತು. ಈ ಚಿತ್ರದ ಬಗೆಗಿನ ಅಚ್ಚರಿ ವಿಚಾರ ಈಗ ರಿವೀಲ್ ಆಗಿದೆ.

‘ಕಥಾ ನಾಯಕಿ ಕನ್ನಡಿಯ ಮುಂದೆ ನಿಂತು ಅಲಂಕಾರ ಮಾಡಿಕೊಳ್ಳುವ ದೃಶ್ಯವಿತ್ತು. ಆ ಸಮಯದಲ್ಲಿ ಕಥಾ ನಾಯಕ ಬಂದು ‘ವಾವ್’ ಎನ್ನುತ್ತಾನೆ. ಆಗ ಹೇಮಾ ಅವರು ತಮ್ಮ ರವಿಕೆಯನ್ನು ಟೈಟ್​ ಆಗಿ ಹೊಲಿಸಿಕೊಂಡಿದ್ದರು. ಇದರಿಂದ ಅಮಿತಾಭ್ ಬಂದು ಹಗ್ ಮಾಡಿದಾಗ ನೈಜವಾದ ಎಕ್ಸ್​ಪ್ರೆಷನ್ ಹೊರ ಬರುತ್ತದೆ ಎಂದು ಅವರು ನನಗೆ ತಿಳಿಸಿದ್ದರು. ನಿಜಕ್ಕೂ ಹೇಮಾ ರೊಮ್ಯಾಂಟಿಕ್ ವ್ಯಕ್ತಿ’ ಎಂದಿದ್ದರು ರೇಣು.

ಈ ಚಿತ್ರದ ಕಥೆ ಹೇಮಾ ಮಾಲಿನಿಗೆ ಬಂದಾಗ ಅವರು ಮಾಡಲು ಸಿದ್ಧ ಇರಲಿಲ್ಲ. ಆದರೆ, ತಾಯಿ ಸೂಚನೆಯಂತೆ ಅವರು ಸಿನಿಮಾ ಮಾಡಿದರು. ‘ಕಥೆ ಬರೆಹಗಾರ ಬಿಆರ್​ ಚೋಪ್ರಾ ಅವರು ಬಂದು ಕಥೆ ಹೇಳಿದರು. ಆದರೆ, ನನಗೆ ಮಾಡುವ ಉದ್ದೇಶ ಇರಲಿಲ್ಲ. ಕಥೆ ಕೇಳುವಾಗ ನನ್ನ ತಾಯಿ ಜೊತೆಯಲ್ಲೇ ಇದ್ದರು. ಅವರು ಸಿನಿಮಾ ಮಾಡುವಂತೆ ಕೋರಿದರು. ಇದರಿಂದ ನಾನು ಸಿನಿಮಾ ಮಾಡಿದೆ’ ಎಂದು ಹೇಮಾ ಮಾಲಿನಿ ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ: ಜಿತೇಂದ್ರನ ಮದುವೆ ಆಗಬೇಕಿದ್ದ ಹೇಮಾ ಮಾಲಿನಿ: ಕೊನೆಗೂ ಪ್ರೀತಿಸಿದವನನ್ನೇ ಕೈ ಹಿಡಿದ ನಟಿ

10 ಕೋಟಿ ರೂಪಾಯಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗಿತ್ತು. ವಿಶೇಷ ಎಂದರೆ ಆಗಿನ ಕಾಲಕ್ಕೆ ಚಿತ್ರ 43.11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಈಗಲೂ ಅನೇಕರ ಫೇವರಿಟ್ ಚಿತ್ರ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:18 pm, Wed, 26 February 25

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ