‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕಲ್ಯಾಣ್ ಚಿತ್ರಕ್ಕೆ ಕುಂಟುವುದೊಂದೇ ಆಯ್ಕೆ

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ನಾಲ್ಕು ದಿನಗಳಲ್ಲಿ ಕೇವಲ 75 ಕೋಟಿ ರೂಪಾಯಿ ಗಳಿಕೆ ಮಾತ್ರ. ಚಿತ್ರದ ವಿಳಂಬ, ನಿರ್ದೇಶಕರ ಬದಲಾವಣೆ ಮತ್ತು ಕಥಾವಸ್ತುವಿನಲ್ಲಿನ ಅಸಮಂಜಸತೆಗಳು ಚಿತ್ರದ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎಂದು ಹೇಳಲಾಗುತ್ತಿದೆ.

‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕಲ್ಯಾಣ್ ಚಿತ್ರಕ್ಕೆ ಕುಂಟುವುದೊಂದೇ ಆಯ್ಕೆ
ಪವನ್

Updated on: Jul 28, 2025 | 8:57 AM

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ (Hari Hara Veera Mallu) ಬಾಕ್ಸ್ ಆಫೀಸ್​ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಚಿತ್ರ ನಾಲ್ಕು ದಿನಕ್ಕೆ ಗಳಿಕೆ ಮಾಡಿದ್ದು ಕೇವಲ 75 ಕೋಟಿ ರೂಪಾಯಿ. ಈ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಒದ್ದಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ 75 ಕೋಟಿ ರೂಪಾಯಿ ದೊಡ್ಡ ಮೊತ್ತವೇ. ಆದರೆ, ಪವನ್ ಕಲ್ಯಾಣ್​ಗೆ ಇರುವ ಚಾರ್ಮ್ ಹಾಗೂ ಸಿನಿಮಾದ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಗಳಿಕೆ ದೊಡ್ಡದಲ್ಲ.

ಪವನ್ ಕಲ್ಯಾಣ್ ಅವರು ‘ಹರಿ ಹರ ವೀರ ಮಲ್ಲು’ ಚಿತ್ರವನ್ನು ಐದು ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದರು. ರಾಜಕೀಯದಲ್ಲಿ ಹಾಗೂ ಪಕ್ಷ ಬಲ ಪಡಿಸುವಲ್ಲಿ ಅವರು ಬ್ಯುಸಿ ಆಗಿದ್ದರಿಂದ ಅವರಿಗೆ ಸಿನಿಮಾಗೆ ಟೈಮ್ ನೀಡೋಕೆ ಸಾಧ್ಯವೇ ಆಗಿಲ್ಲ. ಹೀಗಾಗಿ, ಸಿನಿಮಾ ವಿಳಂಬ ಆಗಿದ್ದು ಮಾತ್ರವಲ್ಲ ಚಿತ್ರದ ನಿರ್ದೇಶಕರು ಕೂಡ ಬದಲಾದರು. ಜೊತೆಗೆ ಸಾಕಷ್ಟು ಗ್ಯಾಪ್ ತೆಗೆದುಕೊಂಡು ಶೂಟ್ ಮಾಡಿದ್ದರಿಂದ ಸಿನಿಮಾಗೆ ಕಂಟ್ಯೂನಿಟಿ ಇರಲೇ ಇಲ್ಲ.

‘ಹರಿ ಹರ ವೀರ ಮಲ್ಲು’ ಸಿನಿಮಾ ಓಪನಿಂಗ್ ದಿನ (ಪ್ರೀಮಿಯರ್ ಶೋ ಗಳಿಕೆಯೂ ಸೇರಿ) 47 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಶುಕ್ರವಾರ 8 ಕೋಟಿ ರೂಪಾಯಿ, ಶನಿವಾರ 9 ಕೋಟಿ ರೂಪಾಯಿ, ಭಾನುವಾರ ಕೇವಲ 11 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲು ಸಾಕಷ್ಟು ಕಷ್ಟಪಡುತ್ತಿದೆ. ಅದಕ್ಕೆ ಇನ್ನೂ ಒಂದು ವಾರ ಬೇಕಾಗಬಹುದು.

ಇದನ್ನೂ ಓದಿ
ಶಾರುಖ್ ಖಾನ್ ಈ ಮೂಢನಂಬಿಕೆಯನ್ನು ತುಂಬಾನೇ ನಂಬುತ್ತಾರೆ
‘ಭರ್ಜರಿ ಬ್ಯಾಚುಲರ್ಸ್ 2’ ವಿನ್ನರ್ ಸುನೀಲ್​; ಸಿಕ್ಕಿದ್ದು ಇಷ್ಟೊಂದು ಹಣವಾ
‘ಸು ಫ್ರಮ್ ಸೋ’ ಬ್ಲಾಕ್​ಬಸ್ಟರ್ ಕಲೆಕ್ಷನ್; ‘ಎಕ್ಕ’ ದಾಖಲೆ ಉಡೀಸ್
Exclusive: ಅಳಿಯ ಚಂದು ಚಿತ್ರಕ್ಕೆ ವಿಲನ್ ಆದ ದರ್ಶನ್; ದಿನಕರ್ ನಿರ್ದೇಶನ

ಪವನ್ ಕಲ್ಯಾಣ್ ಅವರ ಕಂಬ್ಯಾಕ್ ಸಿನಿಮಾ ಇದು. ಈ ಕಾರಣಕ್ಕೆ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಇನ್ನು, ಚಿತ್ರದ ಬಜೆಟ್ 250 ಕೋಟಿ ರೂಪಾಯಿ. ಹೀಗಾಗಿ, ಸಿನಿಮಾ ಲಾಭ ಕಾಣಬೇಕು ಎಂದರೆ ಸಾಕಷ್ಟು ಹಣ ಗಳಿಕೆ ಮಾಡಬೇಕಿತ್ತು. ಆದರೆ, ಸಿನಿಮಾ ಅಂದುಕೊಂಡ ರೀತಿಯಲ್ಲಿ ಗಳಿಕೆ ಮಾಡುತ್ತಿಲ್ಲ.

ಇದನ್ನೂ ಓದಿ: ಬುಕಿಂಗ್​ನಲ್ಲಿ ಪವನ್ ಕಲ್ಯಾಣ್ ಚಿತ್ರವನ್ನೂ ಬೀಟ್ ಮಾಡಿದ ‘ಸು ಫ್ರಮ್ ಸೋ’

ಕರ್ನಾಟಕದಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಗೆಲುವು ಕಂಡಿದೆ. ಈ ಚಿತ್ರದ ಗೆಲುವು ‘ಹರಿ ಹರ ವೀರ ಮಲ್ಲು’ ಚಿತ್ರದ ಮೇಲೆ ಪ್ರಭಾವ ಬೀರಿದೆ. ಪವನ್ ಸಿನಿಮಾ ಶೋ ತೆಗೆದು ‘ಸು ಫ್ರಮ್ ಸೋ’ ಪ್ರದರ್ಶಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.