AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೆದ್ದಿ’ ಪ್ರೀಮಿಯರ್ ಶೋಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ: ಕಾರಣ?

Peddi Movie premier show: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ನಾಳೆ (ಜೂನ್ 4) ಅಧಿಕೃತವಾಗಿ ಬಿಡುಗಡೆ ಆಗುತ್ತಿದೆ. ಆದರೆ ಇಂದೇ (ಜೂನ್ 3) ಹಲವೆಡೆ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಆದರೆ ಬೆಂಗಳೂರಿನ ಪ್ರೀಮಿಯರ್ ಶೋಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರೀಮಿಯರ್ ಶೋ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಹಲವೆಡೆ ಟಿಕೆಟ್ ಬಿಕರಿ ಆಗಿಲ್ಲ.

‘ಪೆದ್ದಿ’ ಪ್ರೀಮಿಯರ್ ಶೋಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ: ಕಾರಣ?
Peddi Ticket
ಮಂಜುನಾಥ ಸಿ.
|

Updated on: Jun 03, 2026 | 6:24 PM

Share

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ನಾಳೆ (ಜೂನ್ 4) ಅಧಿಕೃತವಾಗಿ ಬಿಡುಗಡೆ ಆಗುತ್ತಿದೆ. ಆದರೆ ಇಂದೇ (ಜೂನ್ 3) ಹಲವೆಡೆ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಆದರೆ ಬೆಂಗಳೂರಿನ ಪ್ರೀಮಿಯರ್ ಶೋಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರೀಮಿಯರ್ ಶೋ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಹಲವೆಡೆ ಟಿಕೆಟ್ ಬಿಕರಿ ಆಗಿಲ್ಲ.

‘ಪೆದ್ದಿ’ ಸಿನಿಮಾದ ಪ್ರೀಮಿಯರ್ ಶೋ ಇಂದು ರಾತ್ರಿ 8 ಗಂಟೆಗೆ ಆರಂಭವಾಗುತ್ತಿದೆ. ನಗರದ ಹಲವು ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್​​ಗಳಲ್ಲಿ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದೆ. ಆದರೆ ಬುಕ್ ಮೈ ಶೋ ಮಾಹಿತಿ ಪ್ರಕಾರ ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಸೂಕ್ತವಾಗಿ ಬಿಕರಿ ಆಗಿಲ್ಲ. ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರೀಮಿಯರ್ ಶೋನ ಬುಕಿಂಗ್ ಅನ್ನು ಬಹು ತಡವಾಗಿ ಆರಂಭಿಸಿದ್ದು, ಈ ನೀರಸ ಪ್ರತಿಕ್ರಿಯೆಗೆ ಮುಖ್ಯ ಕಾರಣ. ಮೊದಲಿಗೆ ಜೂನ್ 4 ರ ಶೋನ ಟಿಕೆಟ್​​ಗಳ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿತ್ತು. ಹಾಗಾಗಿ ಹೆಚ್ಚಿನ ಅಭಿಮಾನಿಗಳು ಜೂನ್ 4 ರ ಮುಂಜಾನೆಯ ಶೋ ಅಂದರೆ 6:30 ಶೋಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಅದಾದ ಬಳಿಕ ಬಹಳ ತಡವಾಗಿ ಇಂದು (ಜೂನ್ 3) ರಾತ್ರಿಯ ಪ್ರೀಮಿಯರ್ ಶೋಗೆ ಅಡ್ವಾನ್ಸ್ ಬುಕಿಂಗ್ ತೆರೆಯಲಾಗಿದೆ. ಜೂನ್ 4 ರ ಶೋಗೆ ಹೆಚ್ಚಿನ ಜನ ಬುಕಿಂಗ್ ಮಾಡಿಕೊಂಡಿರುವ ಕಾರಣ ಇಂದು ರಾತ್ರಿಯ ಶೋಗಳಿಗೆ ಹೆಚ್ಚು ಬುಕಿಂಗ್ ಆಗಿಲ್ಲ.

ಇದನ್ನೂ ಓದಿ:ರಾಮ್ ಚರಣ್ ಬಾಡಿಗಾರ್ಡ್ ಸಾಮಾನ್ಯ ಮನುಷ್ಯ ಅಲ್ಲ

ಅದು ಮಾತ್ರವೇ ಅಲ್ಲದೆ, ಇಂದು ರಾತ್ರಿಯ ಶೋಗೆ ಭಾರಿ ಮೊತ್ತದ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಇಂದು ರಾತ್ರಿಯ ಶೋಗಳಿಗೆ ಸಿಂಗಲ್ ಸ್ಕ್ರೀನ್​​ನಲ್ಲಿ 500 ರಿಂದ 300 ಹಾಗೂ ಮಲ್ಟಿಪ್ಲೆಕ್ಸ್​​ನಗಳಲ್ಲಿ 600 ರಿಂದ 1200 ರೂ ವರೆಗೆ ಟಿಕೆಟ್ ನಿಗದಿಪಡಿಸಲಾಗಿದೆ. ಅದೇ ನಾಳೆಯ ಅಂದರೆ ಜೂನ್ 4 ರ ಬೆಳಿಗಿನ ಶೋಗಳಿಗೆ ಇದರ ಅರ್ಧದಷ್ಟು ಟಿಕೆಟ್ ಬೆಲೆ ಇದೆ. ಹಾಗಾಗಿ ಹೆಚ್ಚಿನ ಜನ ಜೂನ್ 4 ರಂದೇ ಸಿನಿಮಾಕ್ಕೆ ಟಿಕೆಟ್​​ಗಳನ್ನು ಮುಂಗಡವಾಗಿ ಬುಕ್ ಮಾಡಿಕೊಂಡಿದ್ದು, ಸಿನಿಮಾ ನೋಡಲು ಕಾತರರಾಗಿದ್ದಾರೆ. ಒಟ್ಟಾರೆಯಾಗಿ ಕೆಟ್ಟ ಪ್ಲಾನಿಂಗ್​​ ಇಂದಾಗಿ ಇಂದಿನ ಪ್ರೀಮಿಯರ್ ಶೋಗೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಪಡೆಯಲು ‘ಪೆದ್ದಿ’ ವಿಫಲವಾಗಿದೆ.

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್ ಸಹ ನಟಿಸಿದ್ದು, ಕರ್ನಾಟಕದಲ್ಲಿಯೂ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದಾರೆ. ಎಆರ್ ರೆಹಮಾನ್ ಸಂಗೀತವಿದೆ. ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us