AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಗೆಟಿವ್ ಟ್ರೋಲ್ ಮಾಡುವವರ ವಿರುದ್ಧ ‘ಪೆದ್ದಿ’ ಕಾನೂನು ಕ್ರಮ

Peddi Movie: ಸಿನಿಮಾಗಳಿಗೆ ಉದ್ದೇಶಪೂರ್ವಕವಾಗಿ ನೆಗೆಟಿವ್ ರಿವ್ಯೂ ನೀಡುವುದು, ಕೆಟ್ಟದಾಗಿ ಟ್ರೋಲ್ ಮಾಡುವುದು, ಬುಕ್​​ಮೈಶೋ ಇನ್ನಿತರೆ ಕಡೆಗಳಲ್ಲಿ ಕಡಿಮೆ ಸ್ಟಾರ್ಸ್ ನೀಡುವುದು, ಕೆಟ್ಟ ರಿವ್ಯೂ ಕಮೆಂಟ್ ಹಾಕುವುದು ಇನ್ನಿತರೆ ಚಾಲ್ತಿಯಲ್ಲಿದೆ. ಇವುಗಳನ್ನು ಇದೀಗ ಚಿತ್ರತಂಡಗಳು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಿವೆ. ಇದೀಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಸಹ ಇಂಥಹದ್ದೊಂದು ನಿರ್ಣಯ ಕೈಗೊಂಡಿದೆ.

ನೆಗೆಟಿವ್ ಟ್ರೋಲ್ ಮಾಡುವವರ ವಿರುದ್ಧ ‘ಪೆದ್ದಿ’ ಕಾನೂನು ಕ್ರಮ
Peddi Movie
ಮಂಜುನಾಥ ಸಿ.
|

Updated on: May 29, 2026 | 4:53 PM

Share

ಇತ್ತೀಚೆಗೆ ಸಿನಿಮಾಗಳ (Cinema) ವಿರುದ್ಧ ಉದ್ದೇಶಪೂರ್ವಕ ನೆಗೆಟಿವ್ ವಿಮರ್ಶೆ, ಸುಳ್ಳು ಸುದ್ದಿ, ಸುಳ್ಳು ವಿಮರ್ಶೆಗಳನ್ನು ನೀಡುವ ಸಂಪ್ರದಾಯ ಹೆಚ್ಚಾಗಿದೆ. ಒಬ್ಬ ಸ್ಟಾರ್ ಹೀರೋ ಸಿನಿಮಾಕ್ಕೆ ಆತನ ಪ್ರತಿಸ್ಪರ್ಧಿ ನಾಯಕನ ಅಭಿಮಾನಿಗಳು ಉದ್ದೇಶಪೂರ್ವಕವಾಗಿ ನೆಗೆಟಿವ್ ರಿವ್ಯೂ ನೀಡುವುದು, ಕೆಟ್ಟದಾಗಿ ಟ್ರೋಲ್ ಮಾಡುವುದು, ಬುಕ್​​ಮೈಶೋ ಇನ್ನಿತರೆ ಕಡೆಗಳಲ್ಲಿ ಕಡಿಮೆ ಸ್ಟಾರ್ಸ್ ನೀಡುವುದು, ಕೆಟ್ಟ ರಿವ್ಯೂ ಕಮೆಂಟ್ ಹಾಕುವುದು ಇನ್ನಿತರೆ ಚಾಲ್ತಿಯಲ್ಲಿದೆ. ಇವುಗಳನ್ನು ಇದೀಗ ಚಿತ್ರತಂಡಗಳು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಿವೆ. ಇದೀಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಸಹ ಇಂಥಹದ್ದೊಂದು ನಿರ್ಣಯ ಕೈಗೊಂಡಿದೆ.

‘ಪೆದ್ದಿ’ ಸಿನಿಮಾ ರಾಮ್ ಚರಣ್ ಪಾಲಿಗೆ ಮತ್ತು ಮೈತ್ರಿ ಮೂವಿ ಮೇಕರ್ಸ್ ಪಾಲಿಗೆ ಮಹತ್ವದ ಪ್ರಾಜೆಕ್ಟ್ ಆಗಿದ್ದು, ಸಿನಿಮಾದ ಪ್ರಚಾರವನ್ನು ಬಲು ಆಸ್ತೆಯಿಂದ ಅದ್ಧೂರಿಯಾಗಿ ಚಿತ್ರತಂಡ ಮಾಡಿದೆ. ಒಟ್ಟಾರೆ ಸಿನಿಮಾದ ಬಗ್ಗೆ ಒಂದು ಪಾಸಿಟಿವ್ ಅಭಿಪ್ರಾಯವನ್ನು ಮೂಡಿಸಲು ಚಿತ್ರತಂಡ ಯಶಸ್ವಿಯಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ಆದ ಮೇಲೆ ಸುಳ್ಳು ಸುದ್ದಿಗೆ, ನೆಗೆಟಿವ್ ಟ್ರೋಲ್​​ಗಳಿಗೆ ಸಿನಿಮಾ ಬಲಿ ಆಗಬಾರದು, ಟ್ರೋಲರ್​​ಗಳ ಹಾವಳಿ ತಮ್ಮ ಸಿನಿಮಾಕ್ಕೆ ಇರಬಾರದೆಂದು ‘ಪೆದ್ದಿ’ ಚಿತ್ರತಂಡ ಮುಂಜಾಗೃತೆ ತೆಗೆದುಕೊಳ್ಳುತ್ತಿದೆ.

ಸಿನಿಮಾದ ವಿರುದ್ಧ ಉದ್ದೇಶಪೂರ್ವಕ ನೆಗೆಟಿವ್ ಟ್ರೋಲ್ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಚಿತ್ರತಂಡ ಮುಂದಾಗಿದೆ. ಈ ಬಗ್ಗೆ ಮುಂಚಿತವಾಗಿ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿನಿಮಾದ ವಿರುದ್ಧ ಸುಳ್ಳು ಸುದ್ದಿ ಹಬ್ಬುವವರು, ಸಿನಿಮಾದ ಪೈರಸಿ ಮಾಡುವವರು, ಸಿನಿಮಾದ ಬಗ್ಗೆ ನೆಗೆಟಿವ್ ಟ್ರೋಲ್ ಮಾಡುವವರನ್ನು ಹತ್ತಿಕ್ಕಲು ರೆಡಿಯಾಗಿದೆ. ಬುಕ್​​ಮೈ ಶೋನಲ್ಲಿ ಸಹ ರೇಟಿಂಗ್ ಆಪ್ಷನ್ ಅನ್ನು ತೆಗೆಸಲಿದೆ ‘ಪೆದ್ದಿ’ ಚಿತ್ರತಂಡ.

ಇದನ್ನೂ ಓದಿ:ಅಮೆರಿಕನಲ್ಲಿ ‘ಪೆದ್ದಿ’ ಟಿಕೆಟ್ ದರ ಹಾಲಿವುಡ್ ಸಿನಿಮಾಗಳಿಗೂ ಹೆಚ್ಚು: ಅಭಿಮಾನಿಗಳ ಬೇಸರ

ರಾಮ್ ಚರಣ್ ಅವರ ಈ ಹಿಂದಿನ ‘ಗೇಮ್ ಚೇಂಜರ್’ ಸಿನಿಮಾ ಆನ್​​ಲೈನ್ ನಲ್ಲಿ ಬಹಳಷ್ಟು ಟ್ರೋಲ್​​ಗೆ ಒಳಗಾಗಿತ್ತು. ಸಿನಿಮಾ ಸಹ ಅಷ್ಟೇನೂ ಚೆನ್ನಾಗಿ ಇಲ್ಲದ ಕಾರಣ ಚಿತ್ರತಂಡ ಆ ಬಗ್ಗೆ ಹೆಚ್ಚು ಗಮನ ವಹಿಸಿರಲಿಲ್ಲ. ಆದರೆ ‘ಪೆದ್ದಿ’ ಸಿನಿಮಾದ ಮೇಲೆ ಚಿತ್ರತಂಡಕ್ಕೆ ಹೆಚ್ಚಿನ ಭರವಸೆ ಇರುವ ಕಾರಣ, ಅನವಶ್ಯಕ ಕಾರಣಗಳಗೆ ಸಿನಿಮಾದ ಬಗ್ಗೆ ನೆಗೆಟಿವಿಟಿ ಹಬ್ಬಬಾರದೆಂದು ಈ ನಿರ್ಣಯವನ್ನು ಚಿತ್ರತಂಡ ತೆಗೆದುಕೊಂಡಿದೆ.

‘ಪೆದ್ದಿ’ ಸಿನಿಮಾವು ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಜಾನ್ಹವಿ ಕಪೂರ್ ನಾಯಕಿ. ಸಿನಿಮಾನಲ್ಲಿ ಬಾಲಿವುಡ್ ನಟರಾದ ದಿವ್ಯೇಂದು, ಬೊಮನ್ ಇರಾನಿ, ತೆಲುಗಿನ ಜಗಪತಿ ಬಾಬು ಇನ್ನೂ ಹಲವರಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ. ನಿರ್ಮಾಣ ಮೈತ್ರಿ ಮೂವಿ ಮೇಕರ್ಸ್ ಅವರದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ
ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ
ಸಚಿವರ ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ: ಯತೀಂದ್ರ ಕೊಟ್ರು ಕಾರಣ
ಸಚಿವರ ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ: ಯತೀಂದ್ರ ಕೊಟ್ರು ಕಾರಣ
ಮೃತ ಕೋತಿಗೆ ವೈಕುಂಠ ಸಮಾರಾಧನೆ: ನೂರಾರು ಜನರಿಗೆ ಅನ್ನಸಂತರ್ಪಣೆ
ಮೃತ ಕೋತಿಗೆ ವೈಕುಂಠ ಸಮಾರಾಧನೆ: ನೂರಾರು ಜನರಿಗೆ ಅನ್ನಸಂತರ್ಪಣೆ
‘ಅಮೆರಿಕಾ ಅಮೆರಿಕಾ’ ಸೀಕ್ವೆಲ್​ನಲ್ಲಿ ಮನೋಮೂರ್ತಿ ಸಂಯೋಜನೆಯಲ್ಲಿ ಐದು ಹಾಡು
‘ಅಮೆರಿಕಾ ಅಮೆರಿಕಾ’ ಸೀಕ್ವೆಲ್​ನಲ್ಲಿ ಮನೋಮೂರ್ತಿ ಸಂಯೋಜನೆಯಲ್ಲಿ ಐದು ಹಾಡು