
ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾದ ಶೂಟ್ ಭರದಿಂದ ಸಾಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಬುಚಿ ಬಾಬು ಅವರು ನಿರ್ದೇಶನ ಮಾಡುತ್ತಾ ಇದ್ದಾರೆ. ಈ ಚಿತ್ರದ ಟೀಸರ್ ಈ ಮೊದಲು ರಿಲೀಸ್ ಆಗಿತ್ತು. ಇದರಲ್ಲಿ ರಾಮ್ ಚರಣ್ ಅವರು ಬ್ಯಾಟ್ ಬೀಸುವುದಕ್ಕೂ ಮೊದಲು ಒಂದು ಸ್ಟೈಲ್ನ ಮಾಡುತ್ತಾರೆ. ಈ ಸ್ಟೈಲ್ನ ಡೆಲ್ಲಿ ಕ್ಯಾಪಿಟಲ್ಸ್ನ ಬ್ಯಾಟರ್ ಅಶುತೋಷ್ ಶರ್ಮಾ ಅನುಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
‘ಪೆದ್ದಿ’ ಸಿನಿಮಾ ಹಳ್ಳಿಯಲ್ಲಿ ನಡೆಯೋ ಕಥೆ. ಇದೊಂದು ಸ್ಪೋರ್ಟ್ಸ್ ಡ್ರಾಮಾ ಎನ್ನಲಾಗುತ್ತಿದೆ. ಇದರಲ್ಲಿ ರಾಮ್ ಚರಣ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಈ ಮೊದಲು ರಿಲೀಸ್ ಆಗಿತ್ತು. ಇದರಲ್ಲಿ ರಾಮ್ ಚರಣ್ ಅವರು ಬ್ಯಾಟ್ ಹಿಡಿದು ಎರಡು ಬಾರಿ ನೆಲಕ್ಕೆ ಕುಟ್ಟಿ ಮುಂದಕ್ಕೆ ನುಗ್ಗುತ್ತಾರೆ, ಮತ್ತು ಸಿಕ್ಸ್ ಹೊಡೆಯುತ್ತಾರೆ. ಇದೇ ಸ್ಟೈಲ್ನ ಅಶುತೋಷ್ ಶರ್ಮಾ ಮಾಡಿದ್ದಾರೆ.
ಮೇ 5ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಇತ್ತು. ಆ ಸಂದರ್ಭದಲ್ಲಿ ಫೀಲ್ಡ್ಗೆ ಇಳಿದ ಅಶುತೋಷ್ ಶರ್ಮಾ ಅವರು 26 ಬಾಲ್ಗಳಲ್ಲಿ 41 ರನ್ ಕಲೆ ಹಾಕಿದರು. ಈ ಮೂಲಕ 20 ಓವರ್ಗಳಲ್ಲಿ 131 ರನ್ ಕಲೆ ಹಾಕಲು ಸಹಾಯ ಮಾಡಿದರು. ಆದರೆ, ಮಳೆಯ ಕಾರಣದಿಂದ ಹೈದರಾಬಾದ್ ಬ್ಯಾಟ್ ಮಾಡಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಎರಡೂ ತಂಡಕ್ಕೆ ತಲಾ ಒಂದು ಪಾಯಿಂಟ್ ನೀಡಲಾಗಿದೆ.
ಇದನ್ನೂ ಓದಿ: IPL 2025: ರಿವ್ಯೂ ತೆಗೆದುಕೊಳ್ಳದೇ ಪಂದ್ಯ ಸೋತ ಡೆಲ್ಲಿ ಕ್ಯಾಪಿಟಲ್ಸ್
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಅಶುತೋಷ್ ಶರ್ಮಾ ಮಾಡಿರೋ ಐಕಾನಿಕ್ ಪೋಸ್ನ ಪೋಸ್ಟ್ ಮಾಡಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹೈದರಾಬಾದ್ ಅಂಗಳದಲ್ಲಿ ಪಂದ್ಯ ನಡೆದಿದ್ದರಿಂದ ಅಲ್ಲಿನ ಫ್ಯಾನ್ಸ್ನ ಸೆಳೆಯಲು ಈ ತಂತ್ರ ಮಾಡಲಾಗಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Tue, 6 May 25