‘ಸಿನಿಮಾ ಸೌಂಡ್ ಕಡಿಮೆ ಮಾಡಿ’; ಥಿಯೇಟರ್ ಮಾಲೀಕರ ಬಳಿ ‘ಕಂಗುವ’ ನಿರ್ಮಾಪಕನ ಮನವಿ

|

Updated on: Nov 16, 2024 | 12:54 PM

‘ಕಂಗುವ’ ಸಿನಿಮಾದ ಮೊದಲ 20 ನಿಮಿಷ ಸಾಕಷ್ಟು ಕಷ್ಟವಾಗಿತ್ತು ಎಂದು ಅನೇಕರು ಹೇಳಿಕೊಂಡಿದ್ದು ಇದೆ. ಅಲ್ಲದೆ, ಸಿನಿಮಾದ ಸೌಂಡ್​ನಿಂದಾಗಿ ತಲೆನೋವು ಬಂದಿದೆ ಎಂದು ಕೂಡ ಕೆಲವರು ಟೀಕೆ ಮಾಡಿದ್ದರು. ಹೀಗಾಗಿ, ನಿರ್ಮಾಪಕರು ಹೊಸ ಬೇಡಿಕೆ ಇಟ್ಟಿದ್ದಾರೆ.

‘ಸಿನಿಮಾ ಸೌಂಡ್ ಕಡಿಮೆ ಮಾಡಿ’; ಥಿಯೇಟರ್ ಮಾಲೀಕರ ಬಳಿ ‘ಕಂಗುವ’ ನಿರ್ಮಾಪಕನ ಮನವಿ
ಕಂಗುವ
Follow us on

ಸೂರ್ಯ ನಟನೆಯ ‘ಕಂಗುವ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಚಿತ್ರ ಡಿಸಾಸ್ಟರ್ ಎನಿಸಿಕೊಂಡಿದೆ. ಈ ಚಿತ್ರ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಹೀಗಿರುವಾಗಲೇ ‘ಕಂಗುವ’ ನಿರ್ಮಾಪಕರು ಥಿಯೇಟರ್ ಮಾಲೀಕರ ಬಳಿ ವಿಶೇಷ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಾಣುವಾಗ ಕಡಿಮೆ ವಾಲ್ಯೂಮ್ ಇಡಲು ಅವರು ಕೋರಿದ್ದಾರೆ.

‘ಕಂಗುವ’ ಚಿತ್ರ ನವೆಂಬರ್ 14ರಂದು ರಿಲೀಸ್ ಆಯಿತು. ಈ ಚಿತ್ರ ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಸಿನಿಮಾ ಅಂದುಕೊಂಡ ರೀತಿಯಲ್ಲಿ ಮೂಡಿ ಬಂದಿಲ್ಲ. ‘ಸೂರ್ಯ ವೃತ್ತಿ ಜೀವನದಲ್ಲೇ ಇದು ಅತಿ ಕಳಪೆ ಸಿನಿಮಾ’ ಎಂಬ ಅಪಕೀರ್ತಿ ಈ ಚಿತ್ರಕ್ಕೆ ಸಿಕ್ಕಿದೆ. ಸಿನಿಮಾದ ಬಿಜಿಎಂಗೂ ಕೆಲವರು ಟೀಕೆ ಹೊರಹಾಕಿದ್ದರು. ಸಂಗೀತ ಸಂಯೋಜಕ ದೇವಿಶ್ರೀ ಪ್ರಸಾದ್ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇದಕ್ಕೆ ನಿರ್ಮಾಪಕ ಜ್ಞಾನವೇಲ್ ರಾಜು ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು, ‘ನಾವು ಪ್ರದರ್ಶಕರ ಬಳಿ ಈ ಬಗ್ಗೆ ಮನವಿ ಮಾಡಿದ್ದೇವೆ. ಥಿಯೇಟರ್​ನಲ್ಲಿ ಸೌಂಡ್​ನ ಎರಡು ಪಾಯಿಂಟ್ ಕಡಿಮೆ ಇಡುವಂತೆ ಕೇಳಿದ್ದೇವೆ. ಸೌಂಡ್ ತುಂಬಾನೇ ಕರ್ಕಶವಾಗಿದೆ ಎಂದು ಕೆಲವರು ದೂರಿದ್ದಾರೆ. ಹೀಗಾಗಿ, ಈ ಕೋರಿಕೆ ಇಟ್ಟಿದ್ದೇವೆ’ ಎಂದು ಅವರು ಹೇಳಿದ್ದೇವೆ’ ಎಂದಿದ್ದಾರೆ ಅವರು.

ಹಾಗಾದರೆ ಇದು ಸಂಗೀತ ಸಂಯೋಜಕರ ತಪ್ಪಾ? ಅಲ್ಲ ಎನ್ನುತ್ತಾರೆ ಜ್ಞಾನವೇಲ್ ರಾಜು. ‘ಇದರಲ್ಲಿ ದೇವಿಶ್ರೀ ಪ್ರಸಾದ್ ಅವರ ತಪ್ಪಿಲ್ಲ. ತೊಂದರೆ ಆಗಿರೋದು ಸೌಂಡ್ ಮಿಕ್ಸಿಂಗ್​ನಲ್ಲಿ. ಅದನ್ನು ಶೀಘ್ರವೇ ಸರಿ ಮಾಡುತ್ತೇವೆ’ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಭೈರತಿ’, ‘ಅಮರನ್’ ಹೊಡೆತಕ್ಕೆ ತತ್ತರಿಸಿದ ‘ಕಂಗುವ’; ಒಂದಂಕಿಗೆ ಬಂದ ಕಲೆಕ್ಷನ್

ಸಿನಿಮಾದ ಮೊದಲ 20 ನಿಮಿಷ ಸಾಕಷ್ಟು ಕಷ್ಟವಾಗಿತ್ತು ಎಂದು ಅನೇಕರು ಹೇಳಿಕೊಂಡಿದ್ದು ಇದೆ. ಅಲ್ಲದೆ, ಸಿನಿಮಾದ ಸೌಂಡ್​ನಿಂದಾಗಿ ತಲೆನೋವು ಬಂದಿದೆ ಎಂದು ಕೂಡ ಕೆಲವರು ಟೀಕೆ ಮಾಡಿದ್ದರು. ಪರಭಾಷೆಯವರು ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಹೊರಹಾಕಿದ್ದರು. ಇದು ಚಿತ್ರಕ್ಕೆ ಸಮಸ್ಯೆ ಉಂಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.