AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸಲ್ಲಿ ತಮಗಿಂತ ಹಿರಿಯ ನಟಿಯ ಜೊತೆ ಸೈಫ್ ಮಗ ಡೇಟಿಂಗ್

ಇಬ್ರಾಹಿಂ ಅಲಿ ಖಾನ್ ಅವರು ಸುತ್ತಾಟ ನಡೆಸುತ್ತಿರುವುದು ಪಲಕ್ ತಿವಾರಿ ಜೊತೆ. ಇಬ್ಬರೂ ಮಾಲ್ಡೀವ್ಸ್​​ನ ರೆಸಾರ್ಟ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಲಕ್ ಅವರು ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಮಗಳು. ಇಬ್ಬರೂ ಒಟ್ಟಾಗಿ ಸುತ್ತಾಡುತ್ತಿದ್ದಾರೆ.

ವಯಸ್ಸಲ್ಲಿ ತಮಗಿಂತ ಹಿರಿಯ ನಟಿಯ ಜೊತೆ ಸೈಫ್ ಮಗ ಡೇಟಿಂಗ್
ಇಬ್ರಾಹಿಂ ಅಲಿ ಖಾನ್-ಪಲಕ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 17, 2024 | 6:30 AM

Share

ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಆಗಾಗ ಸುದ್ದಿ ಆಗುತ್ತಾರೆ. ಸ್ಟಾರ್ ಹೀರೋನ ಮಗ ಎನ್ನುವ ಕಾರಣಕ್ಕೆ ಅವರ ಹೆಸರು ಆಗಾಗ ಚರ್ಚೆಗೆ ಬರುತ್ತದೆ. ಅವರು ಕಂಡಾಗ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಈಗ ಅವರ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ನಟಿಯೊಬ್ಬರ ಜೊತೆ ಸುತ್ತಾಟ ನಡೆಸುತ್ತಾ ಇದ್ದಾರೆ. ಇವರು ಈ ವಿಚಾರವನ್ನು ಮುಚ್ಚಿಡುತ್ತಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

ಇಬ್ರಾಹಿಂ ಅಲಿ ಖಾನ್ ಅವರು ಸುತ್ತಾಟ ನಡೆಸುತ್ತಿರುವುದು ಪಲಕ್ ತಿವಾರಿ ಜೊತೆ. ಇಬ್ಬರೂ ಮಾಲ್ಡೀವ್ಸ್​​ನ ರೆಸಾರ್ಟ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಲಕ್ ಅವರು ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಮಗಳು. ಇಬ್ಬರೂ ಒಟ್ಟಾಗಿ ಇರುವ ವಿಡಿಯೋಗಳನ್ನು ಹಂಚಿಕೊಂಡಿಲ್ಲ. ಆದರೆ, ಇವರ ಹಿನ್ನೆಲೆ ನೋಡಿ ಫ್ಯಾನ್ಸ್ ಈ ರೀತಿಯಲ್ಲಿ ಊಹೆಗಳನ್ನು ಮಾಡುತ್ತಾ ಇದ್ದಾರೆ.

ಪಲಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಪಲಕ್ ಅವರು ನೀರಿನಿಂದ ಎದ್ದು ಬರುತ್ತಿರುವ ವಿಡಿಯೋಗಳು ಇವೆ. ಇದನ್ನು ಶೂಟ್ ಮಾಡಿದ್ದು ಇಬ್ರಾಹಿಂ ಅಲಿ ಖಾನ್ ಎನ್ನಲಾಗಿದೆ. ಇವರು ಸದ್ಯಕ್ಕಂತೂ ಈ ಬಗ್ಗೆ ಘೋಷಣೆ ಮಾಡೋದು ಅನುಮಾನವೇ.

ವಯಸ್ಸಿನ ಅಂತರದ ಬಗ್ಗೆಯೂ ಇಲ್ಲಿ  ನಾವು ನಿಮಗೆ ಹೇಳಲೇ ಬೇಕು. ಇಬ್ರಾಹಿಂ ಅಲಿ ಖಾನ್​ಗೆ ಈಗ 23 ವರ್ಷ. ಅದೇ ಪಲಕ್​ಗೆ 24 ವರ್ಷ. ವಯಸ್ಸಿನಲ್ಲಿ ಪಲಕ್ ಅವರು ಒಂದು ವರ್ಷ ಹಿರಿಯವರು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಇಬ್ರಾಹಿಂ ಅಲಿ ಖಾನ್ ಅವರು ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗ. ಬಾಲಿವುಡ್​ ಯುವ ನಟಿ ಸಾರಾ ಅಲಿ ಖಾನ್ ಅವರ ಸಹೋದರ ಕೂಡ ಹೌದು. ಈಗ ಇಬ್ರಾಹಿಂ ಡೇಟಿಂಗ್ ವಿಚಾರಕ್ಕೆ ಸುದ್ದಿ ಆಗಿದ್ದಾರೆ.

ಇದನ್ನೂ ಓದಿ: ಸಲ್ಮಾನ್, ಶಾರುಖ್​ ಖಾನ್ ಮಾತ್ರವಲ್ಲ ಸೈಫ್ ಅಲಿ ಖಾನ್​ಗೂ ಬಂದಿತ್ತು ಬೆದರಿಕೆ 

ಬಾಲಿವುಡ್​ನಲ್ಲಿ ಇಬ್ರಾಹಿಂ ಹಾಗೂ ಪಲಕ್ ಬ್ಯುಸಿ ಆಗಲಿದ್ದಾರೆ. ಪಲಕ್ ಅವರು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಇಬ್ರಾಹಿಂ ಅಲಿ ಖಾನ್ ಶೀಘ್ರವೇ ಚಿತ್ರರಂಗಕ್ಕೆ ಕಾಲಿಡೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಕಾಳಸಂತೆಯಲ್ಲಿ ಸಿಲಿಂಡರ್ ಸೇಲ್ ! ಗ್ಯಾಸ್​ ದಂಧೆಕೋರರ ವಿರುದ್ಧ 3 ಎಫ್​ಐಆರ್
ಕಾಳಸಂತೆಯಲ್ಲಿ ಸಿಲಿಂಡರ್ ಸೇಲ್ ! ಗ್ಯಾಸ್​ ದಂಧೆಕೋರರ ವಿರುದ್ಧ 3 ಎಫ್​ಐಆರ್
ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ
ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ
ಜೀ5 ಅಲ್ಲಿ ಬರ್ತಿದೆ ಹೊಸ ವೆಬ್ ಸರಣಿ; ಡಾಲಿ ನಿರ್ಮಾಣ
ಜೀ5 ಅಲ್ಲಿ ಬರ್ತಿದೆ ಹೊಸ ವೆಬ್ ಸರಣಿ; ಡಾಲಿ ನಿರ್ಮಾಣ
ವೀಕೆಂಡ್​ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂದು ಬಾರದ ಜನ
ವೀಕೆಂಡ್​ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂದು ಬಾರದ ಜನ
ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ಇತಿಹಾಸ ಬರೆದ ಬಾಂಗ್ಲಾದೇಶ್
ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ಇತಿಹಾಸ ಬರೆದ ಬಾಂಗ್ಲಾದೇಶ್
ಚಿಕ್ಕಮಗಳೂರು, ಬೀದರ್, ಬೆಳಗಾವಿ, ಮಡಿಕೇರಿ ಸೇರಿ ಕರ್ನಾಟಕದ ಹಲವೆಡೆ ಮಳೆ
ಚಿಕ್ಕಮಗಳೂರು, ಬೀದರ್, ಬೆಳಗಾವಿ, ಮಡಿಕೇರಿ ಸೇರಿ ಕರ್ನಾಟಕದ ಹಲವೆಡೆ ಮಳೆ