Ponniyin Selvan: ಮಣಿರತ್ನಂ ಸಿನಿಮಾ ಜತೆ ಕೈ ಜೋಡಿಸಿದ ಪಿ.ವಿ. ಸಿಂಧು; ಕನ್ನಡದಲ್ಲೂ ಕಾದಿದೆ ಸರ್ಪ್ರೈಸ್
Ponniyin Selvan First Single: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕ್ರಿಕೆಟರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಸಂಜು ಸ್ಯಾಮ್ಸನ್ ಅವರು ‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಲೋಕದ ತಾರೆಯರಿಗೂ, ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳಿಗೂ ಒಂದು ನಂಟು ಇದೆ. ಸಿನಿಮಾಗಳ ಪ್ರಚಾರದ ವೇಳೆ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಈಗ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾದ ಪ್ರಮೋಷನ್ನಲ್ಲಿ ಸ್ಪೋರ್ಟ್ಸ್ ಲೋಕದ ಸಾಧಕರು ಕೈ ಜೋಡಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಸಖತ್ ನಿರೀಕ್ಷೆ ಇದೆ. ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರ ಸಿನಿಮಾ ಎಂಬ ಕಾರಣಕ್ಕೆ ಹೈಪ್ ಹೆಚ್ಚಿದೆ. ಅಷ್ಟೇ ಅಲ್ಲದೇ, ಅನೇಕ ಘಟಾನುಘಟಿ ಕಲಾವಿದರು ನಟಿಸಿರುವುದರಿಂದ ಕುತೂಹಲ ಮೂಡಿದೆ. ಈಗ ಈ ಚಿತ್ರತಂಡಕ್ಕೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು (PV Sindhu), ಕ್ರಿಕೆಟರ್ ಸಂಜು ಸ್ಯಾಮ್ಸನ್, ರವಿಚಂದ್ರನ್ ಅಶ್ವಿನ್ ಮುಂತಾದವರು ಸಾಥ್ ನೀಡುತ್ತಿದ್ದಾರೆ. ಈ ಚಿತ್ರದ ಹಾಡು ರಿಲೀಸ್ ಮಾಡಲು ಇವರೆಲ್ಲರೂ ಮುಂದೆ ಬಂದಿದ್ದಾರೆ. ಇಂದು (ಜುಲೈ 31) ಚೆನ್ನೈನಲ್ಲಿ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ.
‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರ ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಚೆನ್ನೈನಲ್ಲಿ ಅದ್ದೂರಿಯಾಗಿ ಆಡಿಯೋ ರಿಲೀಸ್ ಆಗಲಿದೆ. ಮೊದಲ ಸಾಂಗ್ ‘ಪೊನ್ನಿ ನದಿ..’ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ತೆಲುಗು ಅವತರಣಿಕೆಯ ಹಾಡನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ರಿಲೀಸ್ ಮಾಡಲಿದ್ದಾರೆ.
ಕ್ರಿಕೆಟರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಸಂಜು ಸ್ಯಾಮ್ಸನ್ ಅವರು ಅನುಕ್ರಮವಾಗಿ ತಮಿಳು ಮತ್ತು ಮಲಯಾಳಂ ವರ್ಷನ್ ಗೀತೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಖಾತೆ ಮೂಲಕ ‘ಪೊನ್ನಿಯಿನ್ ಸೆಲ್ವನ್’ ಚಿತ್ರತಂಡ ತಿಳಿಸಿದೆ. ಕನ್ನಡದಲ್ಲಿ ಯಾರು ರಿಲೀಸ್ ಮಾಡಲಿದ್ದಾರೆ ಎಂಬುದು ಸರ್ಪ್ರೈಸ್ ಆಗಿ ಉಳಿದುಕೊಂಡಿದೆ. ‘ಪೊನ್ನಿ ನದಿ..’ ಕನ್ನಡ ವರ್ಷನ್ ಗೀತೆಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.
Thank you, @Pvsindhu1! #PS1FirstSingle out tomorrow at 6pm! ⚔️?
Music & Vocal: @arrahman Lyricist: @IananthaSriram#ManiRatnam #ARRahman #PS1 #PonniyinSelvan @LycaProductions @tipsofficial @tipsmusicsouth @primevideoin pic.twitter.com/kwTMFGPXA8
— Madras Talkies (@MadrasTalkies_) July 30, 2022
ಐತಿಹಾಸಿಕ ಕಥಾಹಂದರ ಇರುವ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಷಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ‘ಮದ್ರಾಸ್ ಟಾಕೀಸ್’ ಮತ್ತು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಗಳು ಬಂಡವಾಳ ಹೂಡಿವೆ. ಈ ಚಿತ್ರ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಲಿದೆ.








