
ಜಿಟಿಎ 6 ವಿಶ್ವದಾದ್ಯಂತ ಹವಾ ಎಬ್ಬಿಸಿದೆ. ಕೋಟ್ಯಂತರ ಮಂದಿ ಹಣ ನೀಡಿ ಜಿಟಿಎ 6 ಗೇಮ್ ಆಡುತ್ತಿದ್ದಾರೆ. ಭಾರತದಲ್ಲೂ ಈ ಗೇಮಿನ ಹವಾ ಬಲು ಜೋರಾಗಿದೆ. ಭಾರಿ ಮೊತ್ತದ ಹಣ ನೀಡಿ, 200 ಜಿಬಿಗೂ ಹೆಚ್ಚು ಡಾಟಾ ಖರ್ಚು ಮಾಡಿ, ರಾತ್ರಿಯೆಲ್ಲ ನಿದ್ದೆಗೆಟ್ಟು ಜಿಟಿಎ 6 ಆಡಿದ್ದಾರೆ, ಆಡುತ್ತಿದ್ದಾರೆ. ಗೇಮರ್ಗಳು, ಗೇಮ್ ಪ್ರಿಯರು ಮಾತ್ರವಲ್ಲ ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟರುಗಳು ಸಹ ಗೇಮ್ ಆಡುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಪೂಜಾ ಹೆಗ್ಡೆ, ತಾವು ಜಿಟಿಎ 6 ಆಡಿದ್ದಾಗಿ, ಅದರ ಸ್ಕ್ರೀನ್ ಶಾಟ್ ಒಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೊಕ್ಕೆ ನಾನಾ ರೀತಿಯ ಕಮೆಂಟುಗಳು ಬಂದಿದ್ದವು.
ಪೂಜಾ ಹೆಗ್ಡೆ, ಜಿಟಿಎ 6 ಪಾತ್ರದ ಸ್ಕ್ರೀನ್ ಶಾಟ್ ಹಂಚಿಕೊಂಡು, ‘ರೀಲ್ ಪ್ರಪಂಚದಲ್ಲಿ ಕಾಫಿ ಮಾಡಿದೆ’ ಎಂದು ಬರೆದುಕೊಂಡಿದ್ದರು. ಗೇಮ್ನಲ್ಲಿ ಅವರು ಗೇಮಿನ ಮುಖ್ಯ ಪಾತ್ರಧಾರಿ ಜೇಸನ್‌ನಿಂದ ಕಾಫಿ ಮಾಡಿಸಿದ್ದರು. ಗೇಮಿನಲ್ಲಿ ಪಾತ್ರಧಾರಿ ಜೇಸನ್ ಕೈಯಿಂದ ದಿನನಿತ್ಯದ ಕೆಲಸಗಳನ್ನು ಮಾಡಿಸಬಹುದು. ಫೈಟಿಂಗ್ ಮಾಡಿಸಬಹುದು, ಕಾರು ಓಡಿಸಬಹುದು ಇನ್ನೂ ಹಲವು ಕೆಲಸಗಳನ್ನು ಮಾಡಿಸಬಹುದು. ಇದೇ ಕಾರಣಕ್ಕೆ ಈ ಗೇಮ್ ಬಹಳ ಜನಪ್ರಿಯ. ಪೂಜಾ ಹೆಗ್ಡೆ ಸಹ ಅದನ್ನೇ ಮಾಡಿದ್ದರು.
ಆದರೆ ನೆಟ್ಟಿಗರು ಈ ಬಗ್ಗೆ ನಾನಾ ರೀತಿಯ ಕಮೆಂಟುಗಳನ್ನು ಮಾಡಿದ್ದರು. ಕೆಲವರಂತೂ, ನಟಿ ಸುಮ್ಮನೆ ‘ಫ್ಲೆಕ್ಸ್’ ಮಾಡಲು ಚಿತ್ರ ಹಂಚಿಕೊಂಡಿದ್ದಾರೆ, ಈಕೆ ನಿಜವಾದ ‘ಗೇಮರ್’ ಅಲ್ಲ ಎಂದೆಲ್ಲ ಏನೇನೋ ಕಮೆಂಟುಗಳನ್ನು ಮಾಡಿದ್ದರು. ಇನ್ನು ಕೆಲವರು ಪೂಜಾ ಹೆಗ್ಡೆ ಪರವಾಗಿಯೂ ಕಮೆಂಟ್ ಮಾಡಿ, ಜಿಟಿಎ 6 ಆಡಬೇಕು ಎಂದರೆ ಗೇಮರ್ ಆಗಿರಲೇಬೇಕು ಎಂದೇನಿಲ್ಲ. ಯಾರು ಬೇಕಾದರೂ ಅದನ್ನು ಆಡಬಹುದು. ಅಜ್ಜಿಯೂ ಸಹ ಆಡುವಂತಹ ಸರಳವಾದ ಆಟ ಅದು. ಕೇವಲ ಪುರುಷರೇ ಗೇಮಿಂಗ್ ಮಾಡಬೇಕು ಎಂದೇನೂ ಇಲ್ಲ ಎಂದೆಲ್ಲ ಕಮೆಂಟ್ ಮಾಡಿದ್ದರು. ಒಟ್ಟಾರೆ ಪೂಜಾ ಹೆಗ್ಡೆಯ ಗೇಮಿಂಗ್ ಸ್ಕ್ರೀನ್ಶಾಟ್ ಲಿಂಗ ತಾರತಮ್ಯದ ಚರ್ಚೆಯನ್ನೂ ಸಹ ಹುಟ್ಟುಹಾಕಿತ್ತು.
ಇದನ್ನೂ ಓದಿ:ಜಿಟಿಎ 6 ಕಮಾಲ್, ಒಂದೇ ದಿನಕ್ಕೆ ಹಾಲಿವುಡ್ನ ಎಲ್ಲ ದಾಖಲೆಗಳು ಉಡೀಸ್
ಪೂಜಾ ಹೆಗ್ಡೆ ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ ಆಗಿದ್ದು, ಪ್ರಸ್ತುತ ಅವರು ದುಲ್ಕರ್ ಸಲ್ಮಾನ್ ನಟನೆಯ ತೆಲುಗು ಸಿನಿಮಾ ‘ಶ್ರೀ ಶ್ರೀ’ ಮತ್ತು ತಮಿಳಿನಲ್ಲಿ ‘ಕಾಂಚನಾ 4’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಿಂದಿಯ ಒಂದು ಹೊಸ ಸಿನಿಮಾ ಹಾಗೂ ತೆಲುಗಿನಲ್ಲೂ ಹೆಸರಿಡದ ಒಂದು ಹೊಸ ಸಿನಿಮಾದಲ್ಲಿ ಪೂಜಾ ನಟನೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ