ದುಲ್ಕರ್ ಸಲ್ಮಾನ್ ಚಿತ್ರದಿಂದ ಪೂಜಾ ಹೆಗ್ಡೆ ಹೊರಕ್ಕೆ; ಮೂಢನಂಬಿಕೆಯೇ ಕಾರಣ?

ಪೂಜಾ ಹೆಗ್ಡೆ ಅವರ ವೃತ್ತಿಜೀವನ ಇತ್ತೀಚೆಗೆ ಇಳಿಮುಖ ಕಾಣುತ್ತಿದೆ. ಅವರ ಹಲವಾರು ಚಿತ್ರಗಳು ವಿಫಲವಾಗಿವೆ. ದುಲ್ಖರ್ ಸಲ್ಮಾನ್ ಚಿತ್ರದಿಂದಲೂ ಅವರನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ. ಪೂಜಾ ಹೆಗ್ಡೆ ಅವರಿಗೆ ಇತ್ತೀಚೆಗೆ ಗೆಲುವಿನ ಹಾದಿ ಕಂಡುಕೊಳ್ಳುವುದು ಕಷ್ಟ ಎನಿಸಿದೆ. ಅವರು ಮಾಡಿದ ಚಿತ್ರಗಳೆಲ್ಲವೂ ಸೋಲುತ್ತಿವೆ.

ದುಲ್ಕರ್ ಸಲ್ಮಾನ್ ಚಿತ್ರದಿಂದ ಪೂಜಾ ಹೆಗ್ಡೆ ಹೊರಕ್ಕೆ; ಮೂಢನಂಬಿಕೆಯೇ ಕಾರಣ?
ಪೂಜಾ

Updated on: Aug 21, 2025 | 12:48 PM

ನಟಿ ಪೂಜಾ ಹೆಗ್ಡೆ ಅವರು ವೃತ್ತಿ ಜೀವನ ಇಳಿಮುಖವಾಗಿ ಸಾಗುತ್ತಿದೆ. ಅವರಿಗೆ ಒಳ್ಳೆಯ ಪ್ರಾಜೆಕ್ಟ್​ಗಳೇ ಸಿಗುತ್ತಿವೆ. ಆದರೆ, ಯಾವುದೂ ಯಶಸ್ಸಿನ ಹಾದಿ ಹಿಡಿಯುತ್ತಿಲ್ಲ. ‘ಕೆಟ್ಟದಕ್ಕೆಲ್ಲ ಶನೀಶ್ವರನೇ ಕಾರಣ’ ಎಂಬಂತೆ, ಸಿನಿಮಾ ಸೋಲಿನ ಹೊಣೆಯನ್ನು ಪೂಜಾ ಹೆಗ್ಡೆ ಮೇಲೆ ಹೊರಿಸಲಾಗುತ್ತಿದೆ. ಹೀಗಿರುವಾಗಲೇ ದುಲ್ಕರ್ ಸಲ್ಮಾನ್ ಚಿತ್ರದಿಂದ ಪೂಜಾ ಹೆಗ್ಡೆಯನ್ನು (Pooja Hegde) ಹೊರಕ್ಕೆ ಇಡಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ವಿಚಾರ ಕೇಳಿ ಅನೇಕರಿಗೆ ಶಾಕ್ ಆಗಿದೆ.

ಪೂಜಾ ಹೆಗ್ಡೆ ಅವರು ಕೊನೆಯದಾಗಿ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದು 2022ರ ‘ಆಚಾರ್ಯ’ ಚಿತ್ರದಲ್ಲಿ. ಇದಾದ ಬಳಿಕ ಅವರ ಯಾವುದೇ ತೆಲುಗು ಸಿನಿಮಾ ರಿಲೀಸ್ ಆಗಿಲ್ಲ. ಇತ್ತೀಚೆಗೆ ತಮಿಳಿನ ‘ರೆಟ್ರೋ’ ಸಿನಿಮಾ ಪ್ರಚಾರದ ವೇಳೆ ಶೀಘ್ರವೇ ತೆಲುಗು ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡೋದಾಗಿ ಅವರು ಹೇಳಿದ್ದರು. ಲವ್​​ ಸ್ಟೋರಿ ಸಿನಿಮಾನ ಅವರು ಸಹಿ ಮಾಡಿದ್ದಾರೆ ಎನ್ನಲಾಗಿತ್ತು.

ಈ ಮೊದಲು ಅವರು ‘ಗುಂಟೂರು ಕಾರಂ’ ಚಿತ್ರಕ್ಕೆ ನಾಯಕಿ ಆಗಬೇಕಿತ್ತು. ಆದರೆ, ಅವರು ಚಿತ್ರದಿಂದ ಹೊರ ನಡೆದರು. ಈಗ ಸೆಟ್ಟೇರಿರುವ ದುಲ್ಕರ್ ಸಲ್ಮಾನ್ ಚಿತ್ರಕ್ಕೆ ಪೂಜಾ ನಾಯಕಿ ಎನ್ನಲಾಗಿತ್ತು. ಆದರೆ, ಪೂಜಾ ಹೆಗ್ಡೆ ಬದಲು ಈ ಜಾಗಕ್ಕೆ ಶ್ರುತಿ ಹಾಸನ್ ಎಂಟ್ರಿ ಆಗಿದೆ. ಈ ವಿಚಾರವನ್ನು ಶ್ರುತಿ ಅವರೇ ಖಚಿತಪಡಿಸಿದ್ದಾರೆ. ಈ ಮೂಲಕ ಪೂಜಾ ಸ್ಥಾನವನ್ನು ಇವರು ರಿಪ್ಲೇಸ್ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ

ಇದನ್ನೂ ಓದಿ
ಬಾಲಿವುಡ್​ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?
ಸ್ವರಾ​ಗೆ ಸಂಸದೆ ಮೇಲೆ ಕ್ರಶ್; ಲೈಂಗಿಕ ಆಸಕ್ತಿ ರಿವೀಲ್ ಮಾಡಿ ಟ್ರೋಲ್
ಒಂದೇ ವಾರಕ್ಕೆ ಸುಸ್ತಾದ ‘ಕೂಲಿ’; ಹೀನಾಯ ಕಲೆಕ್ಷನ್​​​ ಆರಂಭಿಸಿದ ಸಿನಿಮಾ
‘ಕ್ವಾಟ್ಲೆ ಕಿಚನ್’ ಶೋ​ನಿಂದ ದಿಢೀರ್​ ಹೊರ ನಡೆದ ಕೆಂಪಮ್ಮ; ಇಲ್ಲಿದೆ ವಿವರ

ಪೂಜಾ ಹೆಗ್ಡೆ ಅವರಿಗೆ ಇತ್ತೀಚೆಗೆ ಗೆಲುವಿನ ಹಾದಿ ಕಂಡುಕೊಳ್ಳುವುದು ಕಷ್ಟ ಎನಿಸಿದೆ. ಅವರು ಮಾಡಿದ ಚಿತ್ರಗಳೆಲ್ಲವೂ ಸೋಲುತ್ತಿವೆ. ಈ ಚಿತ್ರಗಳ ಸೋಲಿಗೆ ವಿವಿಧ ಕಾರಣಗಳಿವೆ. ಆದರೆ, ಅದನ್ನು ಕೊನೆಯದಾಗಿ ಪೂಜಾ ಹೆಗ್ಡೆ ತಲೆಗೆ ಕಟ್ಟಲಾಗುತ್ತಿದೆ. ಈಗ ದುಲ್ಕರ್ ಸಲ್ಮಾನ್ ನಿರ್ಮಾಪಕರು ಕೂಡ ಇದೇ ರೀತಿ ಮೂಢನಂಬಿಕೆಯ ಮೇಲೆ ನಂಬಿಕೆ ಇಟ್ಟರೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಇದನ್ನೂ ಓದಿ: ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲವೂ ಕಬ್ಬಿಣ; ಕೈ ಕೊಟ್ಟ ಅದೃಷ್ಟ

ದುಲ್ಕರ್ ಚಿತ್ರವನ್ನು ನವ ನಿರ್ದೇಶಕ ರವಿ ನೆಲಕುಡಿತಿ ನಿರ್ದೇಶನ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಸಿನಿಮಾ ಸೆಟ್ಟೇರಿದೆ. ‘ದಸರಾ’ ಹೆಸರಿನ ಬಿಗ್ ಬಜೆಟ್ ಮಾಡಿದ ಸುಧಾಕರ್ ಚೆರುಕುರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆಗೆ ಅವಕಾಶ ನೀಡಬೇಕು ಎಂದು ಅವರ ಅಭಿಮಾನಿಗಳು ಸದ್ಯ ಆಗ್ರಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.