ತಮ್ಮದೇ ಸಾವಿನ ಬಗ್ಗೆ ಸುಳ್ಳು ಹೇಳಿದ್ದ ಪೂನಂ ಪಾಂಡೆಗೆ ಬರ್ತ್ಡೇ ಸಂಭ್ರಮ; ನಟಿಗೆ ಎಷ್ಟು ಈಗ ವರ್ಷ?
ಪೂನಂ ಪಾಂಡೆ ಅವರು ಮರುದಿನ ಸಾವಿನ ವಿಚಾರದಲ್ಲಿ ಸುಳ್ಳು ಹೇಳಿದ್ದಾಗಿ ರಿವೀಲ್ ಮಾಡಿದರು. ‘ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಮಾಡಿದೆ. ಕ್ಷಮೆ ಇರಲಿ’ ಎಂದು ಬರೆದುಕೊಂಡರು. ಪೂನಂ ಪಾಂಡೆ ಅವರು ನಡೆದುಕೊಂಡ ರೀತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಕೆಲವರು ಪೂನಂ ಪಾಂಡೆ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು.

ನಟಿ ಪೂನಂ ಪಾಂಡೆಗೆ (Poonam Pandey) ಇಂದು (ಮಾರ್ಚ್ 11) ಬರ್ತ್ಡೇ ಸಂಭ್ರಮ. ಅಭಿಮಾನಿಗಳು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಈ ವರ್ಷ ಪೂನಂ ಪಾಂಡೆ ಸಖತ್ ಸುದ್ದಿ ಆಗಿದ್ದರು. ಇದಕ್ಕೆ ಕಾರಣ ಆಗಿದ್ದು ಪೂನಂ ಪಾಂಡೆ ಅವರ ಸಾವಿನ ವಿಚಾರ. ಅವರು ತಮ್ಮದೇ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿಕೊಂಡಿದ್ದರು. ಈ ಮೂಲಕ ಸುದ್ದಿ ಆಗಿದ್ದರು.
ಪೂನಂ ಪಾಂಡೆ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಸಾವಿನ ಬಗ್ಗೆ ಪೋಸ್ಟ್ ಹಾಕಿದ್ದರು. ‘ನಮ್ಮ ಪ್ರೀತಿಯ ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್ನಿಂದ ಮೃತಪಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬರೆದುಕೊಂಡಿದ್ದರು. ಇದು ಅನೇಕರಿಗೆ ಶಾಕಿಂಗ್ ಎನಿಸಿತ್ತು. ಅವರ ಆತ್ಮಕ್ಕೆ ಎಲ್ಲರೂ ಶಾಂತಿ ಕೋರಿದರು. ಕೆಲವರು ಅವರು ಡ್ರಗ್ಸ್ ತೆಗೆದುಕೊಂಡ ಬಗ್ಗೆಯೂ ಅನುಮಾನ ಹೊರ ಹಾಕಿದ್ದರು. ಅವರ ಅಂತ್ಯಸಂಸ್ಕಾರ ಅವರ ಹುಟ್ಟೂರಲ್ಲಿ ನಡೆಯಿತು ಎಂದು ಅನೇಕರು ಹೇಳಿದರು.
ಪೂನಂ ಪಾಂಡೆ ಅವರು ಮರುದಿನ ಸಾವಿನ ವಿಚಾರದಲ್ಲಿ ಸುಳ್ಳು ಹೇಳಿದ್ದಾಗಿ ರಿವೀಲ್ ಮಾಡಿದರು. ‘ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಮಾಡಿದೆ. ಕ್ಷಮೆ ಇರಲಿ’ ಎಂದು ಬರೆದುಕೊಂಡರು. ಪೂನಂ ಪಾಂಡೆ ಅವರು ನಡೆದುಕೊಂಡ ರೀತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಕೆಲವರು ಪೂನಂ ಪಾಂಡೆ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅವರು ಒಂದು ಸುಳ್ಳು ಹೇಳಿದ್ದರಿಂದ ಅನೇಕರು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಅನೇಕರಿಗೆ ತಿಳಿಯಿತು. ಈ ಕಾರಣಕ್ಕೆ ಪೂನಂ ಪಾಂಡೆ ಅವರನ್ನು ಎಲ್ಲರೂ ಮೆಚ್ಚಿಕೊಂಡರು. ಅವರ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಕೂಡ ಹೇರಲಾಯಿತು.
ಪೂನಂ ಪಾಂಡೆ ಅವರಿಗೆ ಈಗ 33 ವರ್ಷ ವಯಸ್ಸು. ಸಣ್ಣ ವಯಸ್ಸಿಗೆ ಅವರು 22ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಸಿನಿಮಾ. ಇದಾದ ಬಳಿಕ ಕೆಲವೇ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಅವರಿಗೆ ಹೇಳಿಕೊಳ್ಳುವಂಥ ಗೆಲುವು ಸಿಕ್ಕಿಲ್ಲ. ಇದಲ್ಲದೆ ಅವರು ಕೆಲವು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪೂನಂ ಪಾಂಡೆಗೆ ಹೆಚ್ಚಿದ ಸಂಕಷ್ಟ, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ
‘ಲಾಕ್ ಅಪ್’ ರಿಯಾಲಿಟಿ ಶೋನಲ್ಲಿ ಪೂನಂ ಪಾಂಡೆ ಬಣ್ಣ ಹಚ್ಚಿದ್ದಾರೆ. ಈ ಸೀಸನ್ನಲ್ಲಿ ಅವರು ಅನೇಕ ವಿಚಾರದ ಬಗ್ಗೆ ಮಾಹಿತಿ ನೀಡಿದ್ದರು. ಪೂನಂ ಪಾಂಡೆ ಅವರು ಪ್ರಚಲಿತದಲ್ಲಿರಲು ವಿವಾದ ಮಾಡಿಕೊಂಡಿದ್ದರು ಎಂಬ ವಿಚಾರವನ್ನು ಈ ಮೊದಲು ರಿವೀಲ್ ಮಾಡಿದ್ದರು. ಪೂನಂ ಪಾಂಡೆ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡೋ ಭರವಸೆಯಲ್ಲಿ ಇದ್ದಾರೆ. ಆದರೆ, ಅದು ಈಡೇರುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



