ತಮಿಳು ಚಿತ್ರರಂಗದಿಂದ ಮೇಲಿಂದ ಮೇಲೆ ಕಹಿ ಸುದ್ದಿಗಳು ಕೇಳಿಬರುತ್ತಿವೆ. ಕಾಲಿವುಡ್ನ ಖ್ಯಾತ ನಿರ್ದೇಶಕ ಜಿಎನ್ ರಂಗರಾಜನ್ ನಿಧನರಾಗಿದ್ದಾರೆ. ಹಲವು ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ (ಜೂ.3) ಅಸುನೀಗಿದ್ದಾರೆ. ರಂಗರಾಜನ್ ಅವರಿಗೆ 90 ವರ್ಷ ವಯಸ್ಸಾಗಿದೆ. ಅವರ ನಿಧನದ ಸುದ್ದಿಯನ್ನು ಪುತ್ರ ಜಿಎನ್ಆರ್ ಕುಮಾರವೇಲನ್ ಖಚಿತಪಡಿಸಿದ್ದಾರೆ.
‘ನನ್ನ ತಂದೆ, ನನ್ನ ಗುರು, ನನ್ನ ಪ್ರೀತಿ.. ಇಂದು ಬೆಳಗ್ಗೆ 8.45ಕ್ಕೆ ನಿಧನರಾದರು. ಅವರಿಗೆ ನಿಮ್ಮೆಲ್ಲರ ಪ್ರಾರ್ಥನೆ ಇರಲಿ’ ಎಂದು ಜಿಎನ್ಆರ್ ಕುಮಾರವೇಲನ್ ಟ್ವೀಟ್ ಮಾಡಿದ್ದಾರೆ. ರಂಗರಾಜನ್ ಅವರ ಅಂತ್ಯಕ್ರಿಯೆಯು ಇಂದು ಚೆನ್ನೈನಲ್ಲಿ ನಡೆಯಲಿದೆ. ಕಮಲ್ ಹಾಸನ್, ಶ್ರೀದೇವಿ ನಟನೆಯ ‘ಮೀಂದುಂ ಕೋಕಿಲಾ’, ಕಲ್ಯಾಣರಾಮನ್, ಮಹಾರಸನ್ ಮುಂತಾದ ಸಿನಿಮಾಗಳಿಗೆ ರಂಗರಾಜನ್ ನಿರ್ದೇಶನ ಮಾಡಿದ್ದರು. ಕಳೆದ ವರ್ಷ ಡಿಸೆಂಬರ್ನಲ್ಲಿ ಅವರು 90ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು.
My Father, my mentor , my love … passed away today morning around 8.45 am. Need all your prayers to keep my family in strength ? pic.twitter.com/tpTfvjG474
— Gnr.kumaravelan (@gnr_kumaravelan) June 3, 2021
ರಂಗರಾಜನ್ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಸಂಪಾತ ಸೂಚಿಸುತ್ತಿದ್ದಾರೆ. ತಮಿಳು ಚಿತ್ರರಂಗದ ಅನೇಕರು ಈ ವರ್ಷ ಸಾವಿನ ಮನೆಯ ದಾರಿ ಹಿಡಿದಿರುವುದು ಬೇಸರದ ಸಂಗತಿ. ಖ್ಯಾತ ನಟ ವಿವೇಕ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆ.ವಿ. ಆನಂದ್, ಹಾಸ್ಯ ನಟ ಪಾಂಡು, ಅಸುರನ್ ಖ್ಯಾತಿಯ ನಟ ನಿತೀಶ್ ವೀರಾ ಸೇರಿದಂತೆ ಅನೇಕರನ್ನು ಇತ್ತೀಚಿನ ದಿನಗಳಲ್ಲಿ ಕಾಲಿವುಡ್ ಕಳೆದುಕೊಂಡಿದೆ. ಈಗ ರಂಗರಾಜನ್ ಅಸುನೀಗಿದ್ದಾರೆ.
ಇದನ್ನೂ ಓದಿ:
ಕೊರೊನಾ ವೈರಸ್ನಿಂದ ಕಾಲಿವುಡ್ನ ಜನಪ್ರಿಯ ಹಾಸ್ಯ ನಟ ಪಾಂಡು ನಿಧನ
Nitish Veera Death: ‘ಅಸುರನ್’ ಚಿತ್ರದ ನಟ ನಿತೀಶ್ ವೀರಾ ಕೊರೊನಾ ವೈರಸ್ಗೆ ಬಲಿ