AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ‘ರಾಧೆ ಶ್ಯಾಮ್’ ಸೋಲಿನ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪ್ರಭಾಸ್; ‘ಬಾಹುಬಲಿ’ ನಟನಿಗೆ ಏನಾಯ್ತು?

Radhe Shyam: ಪ್ರಭಾಸ್​​ ‘ಸಲಾರ್’ ಚಿತ್ರದ ಬಗ್ಗೆ ವಿಶೇಷ ಆಸ್ಥೆ ವಹಿಸಿದ್ದಾರೆ. ಆದರೆ ಚಿತ್ರೀಕರಣದ ಸಂದರ್ಭದಲ್ಲಿ ಅವರಿಗೆ ಸಣ್ಣ ಗಾಯವಾಗಿತ್ತು. ಅದಕ್ಕೆ ನಟ ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ ಪ್ರಸ್ತುತ ಪ್ರಭಾಸ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದೇಕೆ? ಇಲ್ಲಿದೆ ಮಾಹಿತಿ.

Prabhas: ‘ರಾಧೆ ಶ್ಯಾಮ್’ ಸೋಲಿನ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪ್ರಭಾಸ್; ‘ಬಾಹುಬಲಿ’ ನಟನಿಗೆ ಏನಾಯ್ತು?
ಪ್ರಭಾಸ್
TV9 Web
| Edited By: |

Updated on: Mar 19, 2022 | 7:56 AM

Share

ಟಾಲಿವುಡ್ ನಟ ಪ್ರಭಾಸ್ ‘ಬಾಹುಬಲಿ’ (Bahubali) ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಅಪಾರ ಜನಪ್ರಿಯತೆ ಪಡೆದವರು. ಅವರ ಅಭಿಮಾನಿ ಬಳಗ ಏರಿದ್ದಲ್ಲದೇ ನಟ ಪ್ಯಾನ್‌ ಇಂಡಿಯಾ ಸ್ಟಾರ್ ಆದರು. ಇದೇ ಕಾರಣದಿಂದ ಅವರ ಮುಂದಿನ ಚಿತ್ರಗಳು ಕೂಡ ‘ಬಾಹುಬಲಿ’ಯಂತೆ ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿವೆ. ನಂತರದಲ್ಲಿ ತೆರೆಕಂಡ ‘ಸಾಹೊ’ ಹಾಗೂ ‘ರಾಧೆ ಶ್ಯಾಮ್’ (Radhe Shyam) ಎರಡೂ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ತೀರಾ ನಷ್ಟ ಮಾಡಿಕೊಂಡಿಲ್ಲ. ಹಾಗಂತ ಉತ್ತಮ ಪ್ರತಿಕ್ರಿಯೆಯನ್ನೂ ಪಡೆದಿಲ್ಲ. ಒಂದರ್ಥದಲ್ಲಿ ‘ಬಾಹುಬಲಿ’ಯ ಯಶಸ್ಸು ಪ್ರಭಾಸ್ ಅವರ ಈಗಿನ ಚಿತ್ರಗಳಿಗೆ ಹೊಡೆತವನ್ನೇ ನೀಡುತ್ತಿದೆ ಎಂದರೆ ತಪ್ಪಿಲ್ಲ. ಇದೇ ಕಾರಣಕ್ಕೆ ಪ್ರಭಾಸ್ (Prabhas) ‘ಎಲ್ಲಾ ಚಿತ್ರಗಳು ಬಾಹುಬಲಿಯಾಗುವುದಿಲ್ಲ. ಮ್ಯಾಜಿಕ್ ಒಮ್ಮೊಮ್ಮೆ ಮಾತ್ರ ಆಗುತ್ತದೆ’ ಎಂದು ಹೇಳಿದ್ದು. ಆದರೆ ಇದನ್ನು ಒಪ್ಪಲು ಫ್ಯಾನ್ಸ್ ತಯಾರಿಲ್ಲ. ತಮ್ಮ ನೆಚ್ಚಿನ ನಟನನ್ನು ತೆರೆಯ ಮೇಲೆ ಅದ್ಭುತವಾಗಿ, ಮಾಸ್ ಅವತಾರದಲ್ಲಿ ಕಣ್ತುಂಬಿಕೊಳ್ಳಬೇಕು ಎನ್ನುವುದು ಅವರ ಅಪೇಕ್ಷೆ. ಇದೀಗ ಪ್ರಭಾಸ್ ಅಭಿಮಾನಿಗಳ ಮುಂದೆ ದೊಡ್ಡ ಭರವಸೆಯಂತೆ ಇರುವುದು ಪ್ರಶಾಂತ್ ನೀಲ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಲಾರ್’.

ಪ್ರಭಾಸ್ ಸ್ಪೇನ್​ಗೆ ತೆರಳಿದ್ದೇಕೆ? ನಟನಿಗೆ ಏನಾಯ್ತು?

‘ಸಲಾರ್’ ಚಿತ್ರಕ್ಕೆ ಪ್ರಭಾಸ್ ಕೂಡ ವಿಶೇಷ ಆಸ್ಥೆ ವಹಿಸಿದ್ದಾರೆ. ಆದರೆ ಕೆಲವು ಸಮಯದ ಹಿಂದೆ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗ ಗಾಯಕ್ಕೆ ತುತ್ತಾಗಿದ್ದರು.‌ ಅದಕ್ಕೆ ಚಿಕಿತ್ಸೆಯನ್ನೂ ನಟ ಪಡೆದಿದ್ದರು. ಆದರೆ ಇದೀಗ ಅವರು ಆ ಗಾಯಕ್ಕೆ ಸಂಪೂರ್ಣ ಚಿಕಿತ್ಸೆ ಪಡೆಯುವ ಸಲುವಾಗಿ ಸ್ಪೇನ್ ಗೆ ತೆರಳಿದ್ದಾರೆ ಎನ್ನಲಾಗಿದೆ. ಬಾರ್ಸಿಲೋನಾದಲ್ಲಿ‌ ಪ್ರಭಾಸ್ ಸಣ್ಣ ಸರ್ಜರಿಗೆ ಒಳಗಾಗಿದ್ದಾರೆ ಎಂದು ಇಟೈಮ್ಸ್ ವರದಿ ಮಾಡಿದೆ.

ಸರ್ಜರಿ ಸಣ್ಣದಾದರೂ ಪ್ರಭಾಸ್​ಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ‘ರಾಧೆ ಶ್ಯಾಮ್’ ರಿಲೀಸ್ ನಂತರ ಪ್ರಭಾಸ್ ಅಷ್ಟಾಗಿ ಮಾಧ್ಯಮದ ಮುಂದೆ ಕಾಣಿಸಿಕೊಂಡಿಲ್ಲ. ಚಿತ್ರದ ಬಗ್ಗೆ ಬಂದ ಪ್ರತಿಕ್ರಿಯೆಗಳೂ ಅದಕ್ಕೆ ಕಾರಣವಿರಬಹುದು. ಆದರೆ ನಟ ವಿದೇಶಕ್ಕೆ ತೆರಳಿ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ನಂತರ ಗಾಯ ಹಾಗೂ ಸರ್ಜರಿಯ ಸಮಾಚಾರ ಬಂದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಪ್ರಭಾಸ್ ಬೇಗ ಗುಣಮುಖರಾಗಿ‌ ಮತ್ತೆ ಮಾಸ್ ಅವತಾರ ತೊಟ್ಟು ತೆರೆಯ ಮೇಲೆ ಮಿಂಚಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಸಂದೇಶ ಹಂಚಿಕೊಳ್ಳುತ್ತಿದ್ದಾರೆ.

ಪ್ರಭಾಸ್ ಬತ್ತಳಿಕೆಯಲ್ಲಿ ವಿಭಿನ್ನ ಬಗೆಯ ಚಿತ್ರಗಳಿವೆ. ‘ಸಲಾರ್’ನಲ್ಲಿ ನಟ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ‘ಆದಿಪುರುಷ್’ನಲ್ಲಿ ರಾಮನ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ‘ಪ್ರಾಜೆಕ್ಟ್ ಕೆ’, ‘ಸ್ಪಿರಿಟ್’, ‘ಮಾರುತಿ’ ಚಿತ್ರಗಳಲ್ಲಿ ನಟ ಬಣ್ಣಹಚ್ಚಲಿದ್ದಾರೆ.

ಇದನ್ನೂ ಓದಿ:

ಹಿಂದಿ ಚಿತ್ರರಂಗದಲ್ಲಿ ಧೂಳಿಪಟವಾಯ್ತು ಪ್ರಭಾಸ್ ಹೆಸರು; ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಭಾಸ್​?

‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​

Follow Us
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ