Prabhas: 1 ರೂಪಾಯಿ ಸಂಭಾವನೆ ಕೂಡ ಬೇಡ ಎಂಬ ನಿರ್ಧಾರಕ್ಕೆ ಬಂದ ಪ್ರಭಾಸ್​; ಏನಿದು ಹೊಸ ತಂತ್ರ?

Prabhas Next Movie | Prabhas Remuneration: ‘ರಾಜ ಡಿಲಕ್ಸ್​’ ಚಿತ್ರಕ್ಕೆ ಪ್ರಭಾಸ್​ ಅವರು ಸಂಭಾವನೆ ಪಡೆಯಲು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಹಾಗಂತ ಅವರು ಉಚಿತವಾಗಿ ನಟಿಸುತ್ತಿಲ್ಲ. ಅವರ ತಂತ್ರವೇ ಬೇರೆ ಇದೆ.

Prabhas: 1 ರೂಪಾಯಿ ಸಂಭಾವನೆ ಕೂಡ ಬೇಡ ಎಂಬ ನಿರ್ಧಾರಕ್ಕೆ ಬಂದ ಪ್ರಭಾಸ್​; ಏನಿದು ಹೊಸ ತಂತ್ರ?
ಪ್ರಭಾಸ್

Updated on: Feb 11, 2023 | 8:00 AM

ಪ್ಯಾನ್​ ಇಂಡಿಯಾ ಹೀರೋ ಪ್ರಭಾಸ್​ (Prabhas) ಅವರ ವೃತ್ತಿಜೀವನದಲ್ಲಿ ಸಾಕಷ್ಟು ಏರುಪೇರು ಉಂಟಾಗಿದೆ. ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಭರ್ಜರಿ ಯಶಸ್ಸಿನಿಂದ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು. ಆ ಬಳಿಕ ಅವರು ಮಾಡುವ ಎಲ್ಲ ಸಿನಿಮಾಗಳ ಬಜೆಟ್​ ಹೆಚ್ಚಿತು. ಸಿನಿಮಾ ಬಜೆಟ್​ನಲ್ಲಿನ ಹೆಚ್ಚಿನ ಹಣ ಪ್ರಭಾಸ್​ ಅವರ ಸಂಭಾವನೆಗೆ (Prabhas Remuneration) ಮೀಸಲಾಗತೊಡಗಿತು. ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಪ್ರಭಾಸ್​ ಕೂಡ ಮುಂಚೂಣಿಯಲ್ಲಿದ್ದಾರೆ. ಆದರೆ ಈಗ ಒಂದು ಅಚ್ಚರಿಯ ಸುದ್ದಿ ಕೇಳಿಬಂದಿದೆ. ತಮ್ಮ ಮುಂದಿನ ಚಿತ್ರಕ್ಕೆ (Prabhas Next Movie) ಒಂದು ರೂಪಾಯಿ ಸಂಭಾವನೆ ಕೂಡ ತೆಗೆದುಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಪ್ರಭಾಸ್​ ಬಂದಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಮಾರುತಿ ಜೊತೆ ಪ್ರಭಾಸ್​ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ತಾತ್ಕಾಲಿಕವಾಗಿ ‘ರಾಜ ಡಿಲಕ್ಸ್​’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಶೂಟಿಂಗ್​ ಕೂಡ ಈಗಾಗಲೇ ಆರಂಭ ಆಗಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ ಪ್ರಭಾಸ್​ ಅವರು ಸಂಭಾವನೆ ಪಡೆಯಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಹರಡಿದೆ. ಹಾಗಂತ ಅವರು ಉಚಿತವಾಗಿ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅವರ ತಂತ್ರವೇ ಬೇರೆ ಇದೆ.

ಇದನ್ನೂ ಓದಿ: Prabhas Engagement: ಪ್ರಭಾಸ್​ ಜತೆ ಕೃತಿ ಸನೋನ್​ ನಿಶ್ಚಿತಾರ್ಥ ಆಗಲಿದೆ ಅಂತ ಬ್ರೇಕಿಂಗ್ ನ್ಯೂಸ್​ ನೀಡಿದ ಉಮೈರ್​ ಸಂಧು

ಇದನ್ನೂ ಓದಿ
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ಪ್ರಭಾಸ್​ ನಟಿಸಿದ ಈ ಹಿಂದಿನ ಸಿನಿಮಾಗಳಾದ ‘ಸಾಹೋ’ ಮತ್ತು ‘ರಾಧೆ ಶ್ಯಾಮ್​’ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸಲಿಲ್ಲ. ಆದರೆ ಆ ಚಿತ್ರಗಳಿಗೆ ಪ್ರಭಾಸ್​ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಆದರೆ ಈ ಬಾರಿ ತಮ್ಮ ಪ್ಲ್ಯಾನ್​ ಬದಲಾಯಿಸಿಕೊಂಡಿದ್ದಾರೆ. ‘ರಾಜ ಡಿಲಕ್ಸ್​’ ಚಿತ್ರಕ್ಕೆ ಸಂಭಾವನೆ ಪಡೆಯುವ ಬದಲು ಅದೇ ಮೊತ್ತವನ್ನು ಬಂಡವಾಳ ಎಂದು ಪರಿಗಣಿಸಿ, ಚಿತ್ರದಿಂದ ಬರುವ ಲಾಭದಲ್ಲಿ ಪಾಲು ಪಡೆಯಲು ಪ್ರಭಾಸ್​ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Adipurush: ಜೂ.16ಕ್ಕೆ ‘ಆದಿಪುರುಷ್​’ ರಿಲೀಸ್​ ಖಚಿತ; ಪ್ರಭಾಸ್​ ಫ್ಯಾನ್ಸ್​ಗೆ ಸಮಾಧಾನ ತಂದ ಚಿತ್ರತಂಡದ ಸ್ಪಷ್ಟನೆ

ಪ್ರಭಾಸ್​ ಈ ರೀತಿ ಮಾಡುವುದರಿಂದ ಸಿನಿಮಾದ ಸೋಲು-ಗೆಲುವಿನ ಜವಾಬ್ದಾರಿ ಅವರ ಮೇಲೂ ಬೀಳುತ್ತದೆ. ಒಂದು ವೇಳೆ ಸಿನಿಮಾ ಸೂಪರ್​ ಹಿಟ್​ ಆದರೆ ನಿರೀಕ್ಷಿಸಿದ್ದಕಿಂತಲೂ ಹೆಚ್ಚಿನ ಹಣ ಪ್ರಭಾಸ್​ ಕೈ ಸೇರುತ್ತದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: Prabhas: ‘ಸಲ್ಮಾನ್​ ಖಾನ್​ ಮದುವೆ ಆದ ನಂತರವೇ ನನ್ನ ವಿವಾಹ’: ಎಲ್ಲರೆದುರು ಘೋಷಿಸಿದ ಪ್ರಭಾಸ್​

ಬಹುನಿರೀಕ್ಷಿತ ‘ಆದಿಪುರುಷ್​’ ಮತ್ತು ‘ಸಲಾರ್​’ ಸಿನಿಮಾದ ಕೆಲಸಗಳಲ್ಲಿ ಪ್ರಭಾಸ್​ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಆದಿಪುರುಷ್​’ ಚಿತ್ರಕ್ಕೆ ಓಂ ರಾವತ್​ ನಿರ್ದೇಶನ ಮಾಡುತ್ತಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ‘ಸಲಾರ್​’ ಮೂಡಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us