‘ಬಾಹುಬಲಿ’ (Bahubali) ಸಿನಿಮಾದ ಬಳಿಕ ಪ್ರಭಾಸ್ (Prabhas) ಜನಪ್ರಿಯತೆ ತಾರಕಕ್ಕೇರಿದೆ. ಪ್ರಭಾಸ್ ಈಗ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿಬಿಟ್ಟಿದ್ದಾರೆ. ‘ಬಾಹುಬಲಿ’ ಸಿನಿಮಾದ ಬಳಿಕ ಬಿಡುಗಡೆ ಆದ ಪ್ರಭಾಸ್ರ ಮೂರು ಸಿನಿಮಾಗಳು ದೊಡ್ಡ ಹಿಟ್ ಎನಿಸಿಕೊಂಡಿಲ್ಲವಾದರೂ ಪ್ರಭಾಸ್ರ ಸ್ಟಾರ್ಡಂ ಕಡಿಮೆ ಆಗಿಲ್ಲ. ಪ್ರಭಾಸ್ ಪ್ರಸ್ತುತ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಸಲಾರ್’ ಮತ್ತು ‘ಕಲ್ಕಿ’ ಈ ಎರಡು ಸಿನಿಮಾಗಳ ಬಳಿಕ ‘ಸ್ಪಿರಿಟ್’ ಹೆಸರಿನ ಸಿನಿಮಾ ಪ್ರಾರಂಭವಾಗಲಿದೆ.
‘ಸಲಾರ್’ ಮುಂದಿನ ತಿಂಗಳು ಬಿಡುಗಡೆ ಆದರೆ ‘ಕಲ್ಕಿ’ ಮುಂದಿನ ವರ್ಷಾರಂಭದಲ್ಲಿ ಬಿಡುಗಡೆ ಆಗಲಿದೆ. ಇವೆರಡು ಸಿನಿಮಾಗಳಿಗೆ ಇರುವ ನಿರೀಕ್ಷೆ ಪ್ರಭಾಸ್ರ ‘ಸ್ಪಿರಿಟ್’ ಸಿನಿಮಾಕ್ಕೂ ಇದ್ದು, ಸಿನಿಮಾದ ಶೂಟಿಂಗ್ ಯಾವಾಗ ಪ್ರಾರಂಭವಾಗಲಿದೆ ಎಂಬ ವಿಷಯವನ್ನು ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಬಾಯ್ಬಿಟ್ಟಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದ ನಿರ್ದೇಶನ ಮುಗಿಸಿದ್ದಾರೆ. ಸಿನಿಮಾ ಡಿಸೆಂಬರ್ 1ಕ್ಕೆ ತೆರೆಗೆ ಬರಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಪ್ರಚಾರಕ್ಕಾಗಿ ಇತ್ತೀಚೆಗೆ ಅನ್ಸ್ಟಾಪೆಬಲ್ ಬಾಲಯ್ಯ ಟಾಕ್ ಶೋನಲ್ಲಿ ಅತಿಥಿಗಳಾಗಿ ಭಾಗಿಯಾಗಿದ್ದರು.
ಇದನ್ನೂ ಓದಿ:ಬಾಲಕೃಷ್ಣಗೆ ಬೋಲ್ಡ್ ಆದ ಬಾಲಿವುಡ್ ಸ್ಟಾರ್ ರಣ್ಬೀರ್ ಕಪೂರ್, ಡೈಲಾಗ್ಗಳ ಮೇಲೆ ಡೈಲಾಗ್
ಈ ಸಮಯದಲ್ಲಿ ಬಾಲಕೃಷ್ಣ, ಸಂದೀಪ್ ರೆಡ್ಡಿಯನ್ನುದ್ದೇಶಿಸಿ, ನನ್ನ ಮೊಮ್ಮಗ ದೇವಾಂಶ್, ಸಂದೀಪ್ ಹಾಗೂ ಪ್ರಭಾಸ್ರ ‘ಸ್ಪಿರಿಟ್’ ಸಿನಿಮಾ ಯಾವಾಗ ಪ್ರಾರಂಭವಾಗುತ್ತದೆ ಎಂದು ಬಹಳ ಕಾತರವಾಗಿದ್ದಾನೆ, ಹೇಳಿ ಪ್ರಭಾಸ್ ಜೊತೆಗಿನ ಸಿನಿಮಾ ಯಾವಾಗ ಪ್ರಾರಂಭಿಸುತ್ತೀರಿ ಎಂದು ಪ್ರಶ್ನೆ ಮಾಡಿದರು. ಪ್ರಶ್ನೆಗೆ ಉತ್ತರಿಸಿದ ಸಂದೀಪ್ ರೆಡ್ಡಿ ವಂಗಾ, ಚಿತ್ರಕತೆ ಲಾಕ್ ಆಗಿದೆ. ಸಿನಿಮಾದ ಚಿತ್ರೀಕರಣ ಸೆಪ್ಟೆಂಬರ್ 2024ಕ್ಕೆ ಪ್ರಾರಂಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ರಣ್ಬೀರ್ ಕಪೂರ್, ‘‘ಇವರ ಮುಂದಿನ ಸಿನಿಮಾ ಪ್ರಭಾಸ್ ಅಣ್ಣನ ಜೊತೆಗೆ ಇದೆ. ಆ ಬಗ್ಗೆ ನನಗೂ ಬಹಳ ಕಾತರವಿದೆ. ಆ ಸಿನಿಮಾದಲ್ಲಿ ನನಗೆ ಒಂದು ಸಣ್ಣ ಪಾತ್ರವಿದ್ದರೂ ಕೊಡಿ ನಾನು ಖುಷಿಯಿಂದ ನಟಿಸುತ್ತೇನೆ’’ ಎಂದಿದ್ದಾರೆ.
ಡಿಸೆಂಬರ್ 1ಕ್ಕೆ ಬಿಡುಗಡೆ ಆಗಲಿರುವ ‘ಅನಿಮಲ್’ ಸಿನಿಮಾದಲ್ಲಿ ರಣ್ಬೀರ್ ಕಪೂರ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನಿಲ್ ಕಪೂರ್, ರಣ್ಬೀರ್ ಕಪೂರ್ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ತಂದೆ-ಮಗನ ಸಂಬಂಧದ ಜೊತೆಗೆ ಮಾಫಿಯಾ, ಕುಟುಂಬದೊಳಗೆ ರಾಜಕೀಯ ಇನ್ನೂ ಹಲವು ವಿಷಯಗಳನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ನೋಡಿದವರೆಲ್ಲರೂ ಸಿನಿಮಾ ಸೂಪರ್ ಹಿಟ್ ಎನ್ನುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ