
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ (Prabhas) ಕೆಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಜಾಸಾಬ್’ ಈಗಾಗಲೇ ಚಿತ್ರೀಕರಣದ ಅಂತಿಮ ಹಂತವನ್ನು ತಲುಪಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಕೂಡ ಆಕರ್ಷಕವಾಗಿದೆ. ಈ ಚಿತ್ರದ ಜೊತೆಗೆ, ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅಲ್ಲದೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ಸ್ಟಾರ್ ನಟ ವಿಲನ್ ಪಾತ್ರ ಮಾಡಲಿದ್ದಾರಂತೆ.
ಸಂದೀಪ್ ರೆಡ್ಡಿ ವಂಗ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. ‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’ ಚಿತ್ರಗಳ ಮೂಲಕ ಅವರು ಸಂಚಲನ ಸೃಷ್ಟಿಸಿದ್ದಾರೆ. ಈಗ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಸಂದೀಪ್, ಶೂಟಿಂಗ್ ಲೊಕೇಶನ್ ಹುಡುಕುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳ ಪ್ರಕಾರ, ಈ ಚಿತ್ರದ ಶೂಟಿಂಗ್ ನವೆಂಬರ್ 5ರಿಂದ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಮಲಯಾಳಿ ನಟಿ ಮಡೋನಾ ಸೆಬಾಸ್ಟಿಯನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ಪ್ರಭಾಸ್ ಅವರ ತಂದೆಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರೊಂದಿಗೆ, ಈ ಚಿತ್ರದ ಮೇಲಿನ ನಿರೀಕ್ಷೆಗಳು ಉತ್ತುಂಗಕ್ಕೇರಿವೆ. ಈಗ ಈ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ಸದ್ದು ಮಾಡುತ್ತಿದೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಇದರಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರಂತೆ.
ನಾಯಕನಾಗಿ, ವಿಲನ್ ಆಗಿ ಹಲವು ಚಿತ್ರಗಳಲ್ಲಿ ಮಿಂಚಿರುವ ವಿವೇಕ್, ಈಗ ‘ಸ್ಪಿರಿಟ್’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ. ವಿವೇಕ್ ಈಗಾಗಲೇ ಹಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ಗೆ ಪ್ರಶಂಸೆಗಳ ಸುರಿಮಳೆ, ಪ್ರಭಾಸ್, ಜೂ ಎನ್ಟಿಆರ್ ಹೇಳಿದ್ದೇನು?
ಸಂದೀಪ್ ರೆಡ್ಡಿ ಸಿನಿಮಾಗಳು ಯಾವಾಗಲೂ ರಾ ಆಗಿ ಇರುತ್ತವೆ. ಈಗ ‘ಸ್ಪಿರಿಟ್’ ಕೂಡ ಇದೇ ಶೈಲಿಯಲ್ಲಿ ಮೂಡಿ ಬರುವ ಸಾಧ್ಯತೆ ಇದೆ. ಈ ಸಿನಿಮಾಗೆ ಮೊದಲು ದೀಪಿಕಾ ಪಡುಕೋಣೆ ಅವರು ನಾಯಕಿ ಎಂದು ಘೋಷಿಸಲಾಗಿತ್ತು. ಆದರೆ, ಅವರು ಸಿನಿಮಾದಲ್ಲಿ ಕೆಲಸ ಮಾಡೋದಿಲ್ಲ ಎಂದರು. ಅಲ್ಲದೆ, ಸಂದೀಪ್ ರೆಡ್ಡಿ ವಂಗ ಮತ್ತು ದೀಪಿಕಾ ಮಧ್ಯೆ ವೈಮನಸ್ಸು ಮೂಡಲು ಈ ಸಿನಿಮಾ ಕಾರಣ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Sat, 4 October 25