ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರ ಅಭಿಮಾನಿಗಳು ‘ಆದಿಪುರುಷ್’ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಜೂನ್ 16ರಂದು ವಿಶ್ವಾದ್ಯಂತ ಈ ಸಿನಿಮಾ ಅಬ್ಬರಿಸಲಿದೆ. 3ಡಿ ವರ್ಷನ್ನಲ್ಲಿ ತೆರೆಕಾಣುತ್ತಿರುವುದರಿಂದ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬಾಲಿವುಡ್ನ ಖ್ಯಾತ ನಿರ್ದೇಶಕ ಓಂ ರಾವತ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗ ‘ಆದಿಪುರುಷ್’ (Adipurush) ಚಿತ್ರವು ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಸೆನ್ಸಾರ್ ಮಂಡಳಿಯಲ್ಲಿ ಈ ಸಿನಿಮಾಗೆ ‘ಯು’ ಪ್ರಮಾಣ ಪತ್ರ ಸಿಕ್ಕಿದೆ. ಅಂದರೆ, ವಯಸ್ಸಿನ ಮಿತಿ ಇಲ್ಲದೇ ಯಾರು ಬೇಕಿದ್ದರೂ ಈ ಸಿನಿಮಾವನ್ನು ನೋಡಬಹುದು. ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ‘ಯು’ ಪ್ರಮಾಣಪತ್ರ ಬಹಳ ಮುಖ್ಯ ಆಗುತ್ತದೆ. ಇನ್ನು ಈ ಸಿನಿಮಾದ ಅವಧಿ (Adipurush duration) ಬರೋಬ್ಬರಿ 3 ಗಂಟೆ ಇದೆ ಎಂಬುದು ಗಮನಿಸಬೇಕಾದ ಅಂಶ.
‘ಆದಿಪುರುಷ್’ ಚಿತ್ರದ ಹಿಂದಿ ಅವತರಣಿಕೆಯ ಸೆನ್ಸಾರ್ ಸರ್ಟಿಫಿಕೇಟ್ ಲಭ್ಯವಾಗಿದೆ. ಇದರಲ್ಲಿ ಚಿತ್ರದ ಅವಧಿ ಬಗ್ಗೆ ಮಾಹಿತಿ ಇದೆ. ಆ ಪ್ರಕಾರ, ಈ ಸಿನಿಮಾದ ಅವಧಿ ಬರೋಬ್ಬರು 2 ಗಂಟೆ 59 ನಿಮಿಷಗಳು. ಅಂದರೆ, 3 ಗಂಟೆಗೆ ಒಂದು ನಿಮಿಷ ಮಾತ್ರ ಬಾಕಿ. ಮಧ್ಯಂತರದ ಸಮಯವನ್ನೂ ಸೇರಿಸಿದರೆ ಈ ಸಿನಿಮಾದ ಪ್ರದರ್ಶನಕ್ಕೆ 3 ಗಂಟೆ 15 ನಿಮಿಷ ಬೇಕು. ಇದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಬಹುದು. ಕೆಲವೊಮ್ಮೆ ಇದರಿಂದ ಸಿನಿಮಾಗೆ ಹಿನ್ನಡೆ ಆಗಲೂಬಹುದು. ಹಾಗಂತ ಯಾವುದನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. 3 ಗಂಟೆ ಅವಧಿ ಇರುವ ಸಿನಿಮಾಗಳು ಸೂಪರ್ ಹಿಟ್ ಉದಾಹರಣೆ ಕೂಡ ಇದೆ.
#Xclusiv… ‘ADIPURUSH’ *HINDI* RUN TIME… #Adipurush HINDI certified ‘U’ by #CBFC on 8 June 2023. Duration: 179.00 min:sec [2 hours, 59 min, 00 sec]. #India
⭐ Theatrical release date: 16 June 2023.#Prabhas #KritiSanon #SaifAliKhan #SunnySingh #DevdattaNage pic.twitter.com/40SavtWUyX
— taran adarsh (@taran_adarsh) June 8, 2023
ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್’ ಸಿದ್ಧವಾಗಿದೆ. ಆದ್ದರಿಂದ ಜನರಿಗೆ ಮತ್ತು ಸೆಲೆಬ್ರಿಟಿಗಳಿಗೆ ಈ ಸಿನಿಮಾ ಮೇಲೆ ವಿಶೇಷವಾದ ಭಾವನೆ ಮೂಡಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದು, ಸೀತೆ ಪಾತ್ರಕ್ಕೆ ಕೃತಿ ಸನೋನ್ ಬಣ್ಣ ಹಚ್ಚಿದ್ದಾರೆ. ಮೊದಲ ದಿನ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಕೌತುಕ ಮೂಡಿದೆ. ಈ ನಡುವೆ ಕೆಲವು ಸೆಲೆಬ್ರಿಟಿಗಳು ಸಾವಿರಾರು ಟಿಕೆಟ್‌ಗಳನ್ನು ಖರೀದಿಸಿ, ಅವುಗಳನ್ನು ಬಡಮಕ್ಕಳಿಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ನಟ ರಣಬೀರ್ ಕಪೂರ್ ಅವರು ಬರೋಬ್ಬರಿ 10 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಇದನ್ನೂ ಓದಿ: Adipurush: ‘ಆದಿಪುರುಷ್’ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರದಲ್ಲಿ ಹನುಮನಿಗೆ ಒಂದು ಸೀಟು ಮೀಸಲು; ಏನಿದು ನಂಬಿಕೆ?
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ‘ಆದಿಪುರುಷ್’ ಚಿತ್ರದ 10 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ‘ಆದಿಪುರುಷ್ ಜೀವಮಾನದಲ್ಲಿ ಒಮ್ಮೆ ನೋಡಲೇಬೇಕಾದ ಸಿನಿಮಾ. ಇದನ್ನು ಎಲ್ಲರೂ ಸಂಭ್ರಮಿಸಲೇಬೇಕು. ಭಗವಾನ್ ಶ್ರೀರಾಮನ ಮೇಲಿನ ಅಪಾರ ಭಕ್ತಿಯಿಂದ ತೆಲಂಗಾಣದಾದ್ಯಂತ ಇರುವ ಸರ್ಕಾರಿ ಶಾಲೆಗಳು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ 10,000+ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇನೆ. ಟಿಕೆಟ್‌ಗಳನ್ನು ಪಡೆಯಲು ನಿಮ್ಮ ವಿವರಗಳೊಂದಿಗೆ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಿ. ಜೈ ಶ್ರೀರಾಮ್ ಘೋಷಣೆಗಳು ಎಲ್ಲಾ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಲಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.