ಈ ವರ್ಷ ರಿಲೀಸ್ ಆಗಲ್ಲ ‘ಫೌಜಿ’; ಕಾರಣ ಹೇಳಿದ ನಿರ್ಮಾಪಕ

ಪ್ರಭಾಸ್ ಹಾಗೂ ಹನು ರಾಘವಪುಡಿ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಫೌಜಿ' ಸಿನಿಮಾದ ಬಿಡುಗಡೆ 2027ಕ್ಕೆ ಮುಂದೂಡಲ್ಪಟ್ಟಿದೆ. ಸಿನಿಮಾ ತಡವಾದರೂ ಸಹ 'ಬಾಹುಬಲಿ' ಚಿತ್ರದಷ್ಟೇ ಅದ್ಧೂರಿಯಾಗಿ ಮೂಡಿಬರಲಿದೆ ಎಂದು ನಿರ್ಮಾಪಕ ವೈ. ರವಿಶಂಕರ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಈ ವರ್ಷ ರಿಲೀಸ್ ಆಗಲ್ಲ ‘ಫೌಜಿ’; ಕಾರಣ ಹೇಳಿದ ನಿರ್ಮಾಪಕ
ಪ್ರಭಾಸ್
Image Credit source: Fauzi

Updated on: Sep 22, 2026 | 1:09 PM

ಮುಖ್ಯಾಂಶಗಳು

  • 2027ಕ್ಕೆ ಮುಂದೂಡಲ್ಪಟ್ಟ 'ಫೌಜಿ'
  • 'ಬಾಹುಬಲಿ' ಲುಕ್‌ನಲ್ಲಿ ಪ್ರಭಾಸ್
  • ಅಭಿಮಾನಿಗಳಿಗೆ ಕಾದಿದೆ ದೃಶ್ಯ ವೈಭವ

ಟಾಲಿವುಡ್ ನಟ ಪ್ರಭಾಸ್ ಅಭಿಮಾನಿಗಳಿಗೆ ಸಣ್ಣ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಹನು ರಾಘವಪುಡಿ ನಿರ್ದೇಶನದ ಬಹುನಿರೀಕ್ಷಿತ ‘ಫೌಜಿ’ ಸಿನಿಮಾದ ಬಿಡುಗಡೆ ತಡವಾಗಲಿದೆ. ಡಿಸೆಂಬರ್‌ನಲ್ಲಿ ಬರಬೇಕಿದ್ದ ಈ ಚಿತ್ರವು 2027ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ನಿರ್ಮಾಪಕರು ಹೊಸ ಭರವಸೆ ಒಂದನ್ನು ನೀಡಿದ್ದಾರೆ. ಈ ಸಿನಿಮಾ ‘ಬಾಹುಬಲಿ’ ಮಟ್ಟದ ಅದ್ಧೂರಿತನ ಇರಲಿದೆ ಎಂದಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ನಿರ್ಮಾಪಕ ರವಿಶಂಕರ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ನಾನಿ ಅಭಿನಯದ ‘ದಿ ಪ್ಯಾರಡೈಸ್’ ಚಿತ್ರದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ರಿವೀಲ್ ಮಾಡಿದ್ದಾರೆ. ಸಿನಿಮಾ ತಡವಾಗುತ್ತಿರುವುದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ ಈ ಹೆಚ್ಚಿನ ಸಮಯವು ಚಿತ್ರದ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಲಿದೆ ಎಂದಿದ್ದಾರೆ.

‘ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರನ್ನು ಅತ್ಯಂತ ಅದ್ಧೂರಿಯಾಗಿ ತೋರಿಸಲಾಗುತ್ತಿದೆ. ಪ್ರೇಕ್ಷಕರು ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತಹ ದೃಶ್ಯ ವೈಭವ ಈ ಸಿನಿಮಾದಲ್ಲಿದೆ. ಇದು ಪ್ರಭಾಸ್ ವೃತ್ತಿಜೀವನದಲ್ಲೇ ಮತ್ತೊಂದು ಹಂತದ ಚಿತ್ರವಾಗಲಿದೆ. ಆದ್ದರಿಂದ ಬಿಡುಗಡೆ ದಿನಾಂಕವನ್ನು ಸ್ವಲ್ಪ ಮುಂದೆ ಹಾಕಲಾಗಿದೆ’ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಹಿಂದೆ ಈ ಚಿತ್ರವು 2026ರ ಡಿಸೆಂಬರ್ 3 ರಂದು ಬಿಡುಗಡೆಯಾಗಬೇಕಿತ್ತು. ನಾಗಚೈತನ್ಯ ಅವರ ‘ವೃಷಕರ್ಮ’ ಮತ್ತು ದುಲ್ಕರ್ ಸಲ್ಮಾನ್ ಅವರ ‘ಶ್ರೀ ಶ್ರೀ’ ಚಿತ್ರಗಳೊಂದಿಗೆ ಈ ಸಿನಿಮಾ ರಿಲೀಸ್ ಆಗಿ ಪೈಪೋಟಿ ನಡೆಸುವುದರಲ್ಲಿತ್ತು. ಆದರೆ ಈಗ ‘ಫೌಜಿ’ ಬಿಡುಗಡೆ ಮುಂದೂಡಿಕೆಯಾಗಿದೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಪ್ರಕಟಿಸಲಿದೆ.

ಇದನ್ನೂ ಓದಿ: ಪ್ರಭಾಸ್ ಸಿನಿಮಾ ಸೆಟ್​​ನಲ್ಲಿ ನಿಜಕ್ಕೂ ನಡೆದಿದ್ದೇನು? ಸತ್ಯ ಹೇಳಿದ ಬಾಲಿವುಡ್ ನಟ

‘ಸೀತಾ ರಾಮಂ’ ಖ್ಯಾತಿಯ ಹನು ರಾಘವಪುಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಪ್ರಭಾಸ್ ಜೊತೆಗೆ ಇಮಾನ್ವಿ ಇಸ್ಮಾಯಿಲ್, ಸಜ್ಜಾದ್ ಡೆಲಾಫ್ರೂಜ್, ಮಿಥುನ್ ಚಕ್ರವರ್ತಿ ಮತ್ತು ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:07 pm, Tue, 22 September 26

Loading...
Unable to load recommendations.
Follow Us