AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಂತಪಯಣ’ ಚಿತ್ರದ ‘ನನ್ನ ಕಂಬಳಿ’ ಹಾಡು ಬಿಡುಗಡೆ ಮಾಡಿದ ಸತೀಶ್ ಜಾರಕಿಹೊಳಿ

‘ಅನಂತಪಯಣ’ ಸಿನಿಮಾಗೆ ಶ್ರೀಕಾಕ‌ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿವಿಷ್ಕಾ ಪಾಟೀಲ್, ಶ್ರೀಕಾಕ, ಬಲ ರಾಜವಾಡಿ, ಮಂಜುನಾಥ್ ಹೆಗ್ಡೆ, ಲಕ್ಷ್ಮಿ ಸಿದ್ದಯ್ಯ, ಎಂ.ಕೆ. ಮಠದ್, ಪ್ರಶಾಂತ್ ಸಿದ್ದಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬೆಳಗಾವಿ, ಬೆಂಗಳೂರು, ಮಹಾರಾಷ್ಟ್ರದಲ್ಲಿ ಶೂಟಿಂಗ್ ಮಾಡಲಾಗಿದೆ.

‘ಅನಂತಪಯಣ’ ಚಿತ್ರದ ‘ನನ್ನ ಕಂಬಳಿ’ ಹಾಡು ಬಿಡುಗಡೆ ಮಾಡಿದ ಸತೀಶ್ ಜಾರಕಿಹೊಳಿ
Nanna Kambali Song Launch
ಮದನ್​ ಕುಮಾರ್​
|

Updated on: Nov 06, 2026 | 9:19 PM

Share

ಬೆಳಗಾವಿಯ ಸಂತೋಷ್ ಹೆಗಡೆ ಅವರ ನಿರ್ಮಾಣ ಮಾಡಿರುವ ‘ಅನಂತಪಯಣ’ ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಆಗಿದೆ. ‘ನನ್ನ ಕಂಬಳಿ..’ ಎಂಬ ಈ ರೊಮ್ಯಾಂಟಿಕ್ ಗೀತೆಯನ್ನು ಸತೀಶ್ ಜಾರಕಿಹೊಳಿ ಅವರು ಬಿಡುಗಡೆ ಮಾಡಿದ್ದಾರೆ. ಗಡಿನಾಡು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಹಾಡನ್ನು ಅನಾವರಣ ಮಾಡಲಾಯಿತು. ಹಾಡು ಬಿಡುಗಡೆ ಮಾಡಿದ ಬಳಿಕ ಸತೀಶ್ ಜಾರಕಿಕೊಳಿ ಅವರು ಮಾತನಾಡಿದರು.

‘ಕುರಿಗಾಹಿಗಳ ಜೀವನದ ಬದುಕು-ಬವಣೆಯ ಕಥೆ ಇಟ್ಟುಕೊಂಡು ನಮ್ಮ ಜಿಲ್ಲೆಯವರೇ ಆದ ನಿರ್ಮಾಪಕ ಸಂತೋಷ್ ಹೆಗಡೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಶ್ರೀಕಾಕ ಅವರು ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಮೇಲೆ ಮೂಡಿಸಿದ್ದಾರೆ. ಇಂಥ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಮೂಲಕ ಬೆಂಬಲಿಸಿ, ಪ್ರೋತ್ಸಾಹಿಸಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಸತೀಶ್ ಜಾರಕಿಕೊಳಿ ಅವರು ಶುಭ ಹಾರೈಸಿದರು.

‘ನನ್ನ ಕಂಬಳಿ’ ಹಾಡು:

ಈ ವೇಳೆ ನಿರ್ಮಾಪಕ ಸಂತೋಷ್ ಹೆಗಡೆ ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಸಂಚಾರಿ ಕುರಿಗಾಹಿಗಳ ಬದುಕು, ಅವರ ಪರಂಪರೆ, ಹೋರಾಟ, ಅನುಭವಿಸಿದ ನೋವನ್ನು ಈ ಸಿನಿಮಾದಲ್ಲಿ ತೋರಿಸಿದ್ದೇನೆ. ಹಂತ ಹಂತದಲ್ಲೂ ಎಲ್ಲ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಸದ್ಯ ಅವರು ಸಮಾಜದಲ್ಲಿ ಎದುರಿಸುತ್ತಿರುವ ಸವಾಲುಗಳೇನು? ಇತ್ತೀಚಿನ ದಿನಗಳಲ್ಲಿ ಏನೆಲ್ಲ ತೊಂದರೆ ಎದುರಿಸಿದರು? ಇದನ್ನೆಲ್ಲ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂದು ಅವರು ಹೇಳಿದರು.

ನಿರ್ದೇಶಕ ಶ್ರೀಕಾಕ ಅವರು ಮಾತನಾಡಿ, ‘ಅನಂತಪಯಣ ಎಂದರೆ ಊರಿಂದ ಊರಿಗೆ ಹೋಗುವ ಕುರಿಗಾಹಿಗಳ ಪಯಣದ ಕಥೆ. ನಿರ್ದೇಶನದ ಜತೆ‌ ನಾನೇ ನಾಯಕನಾಗಿ ಅಭಿನಯಿಸಿದ್ದೇನೆ. ನಮ್ಮ ಸಿನಿಮಾದಲ್ಲಿ ಆರು ಹಾಡುಗಳು, ಮೂರು ಸಾಹಸ ದೃಶ್ಯಗಳಿವೆ. ಜಸ್ಕರಣ್ ಸಿಂಗ್, ಕೈಲಾಶ್ ಖೇರ್, ಪೃಥ್ವಿ ಭಟ್ ಅವರು ಹಾಡಿದ್ದಾರೆ. ನವೆಂಬರ್ 27ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಲಿಂಗಪರಿವರ್ತಿತರ ನೋವು, ನಲಿವಿಗೆ ಹಿಡಿದ ಕನ್ನಡಿ ‘ಭಾವಾಂತರ’

ಈ ಸಿನಿಮಾಗೆ ನಿವಿಷ್ಕಾ ಪಾಟೀಲ್ ಅವರು ನಾಯಕಿ ಆಗಿದ್ದಾರೆ. ಇದು ಅವರ 4ನೇ ಸಿನಿಮಾ. ‘ನಾನು ಕೂಡ ಬೆಳಗಾವಿಯವಳು. ನನ್ನ ಹುಟ್ಟೂರಲ್ಲೇ ನನ್ನ ಸಿನಿಮಾದ ಆಡಿಯೋ ರಿಲೀಸ್ ಆಗಿರುವುದಕ್ಕೆ ಖುಷಿಯಾಗಿದೆ’ ಎಂದು ಅವರು ಹೇಳಿದರು. ‘ಶ್ರೀ ಅಶೋಕ್ ಫಿಲ್ಮ್ಸ್’ ಹಾಗೂ ‘ಎಸ್.ಕೆ. ಫಿಲ್ಮ್ ಫ್ಯಾಕ್ಟರಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಆಕಾಶ್ ಪರ್ವ ಅವರು ಸಂಗೀತ ನೀಡಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ದೀಪು ಗೌಡ ಸಂಕಲನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
ಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ
ಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ
ಪಟಾಕಿ ಹಣ ಉಳಿಸಿ ಗಿಡ ನೆಡಿ, ಪುಸ್ತಕ ಕೊಳ್ಳಿ
ಪಟಾಕಿ ಹಣ ಉಳಿಸಿ ಗಿಡ ನೆಡಿ, ಪುಸ್ತಕ ಕೊಳ್ಳಿ
ಸೌಜನ್ಯ ಕೇಸ್​​: ಮಹೇಶ್ ಶೆಟ್ಟಿ , ವಿಟ್ಠಲ್ ಗೌಡ ವಿರುದ್ದ SITಗೆ ದೂರು
ಸೌಜನ್ಯ ಕೇಸ್​​: ಮಹೇಶ್ ಶೆಟ್ಟಿ , ವಿಟ್ಠಲ್ ಗೌಡ ವಿರುದ್ದ SITಗೆ ದೂರು
ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಬಾಲಕ ಬದುಕುಳಿದಿದ್ದೇ ರೋಚಕ
ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಬಾಲಕ ಬದುಕುಳಿದಿದ್ದೇ ರೋಚಕ
ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ಗೋಹರ್ ಶಾಹಿ ಅನುಯಾಯಿ ಸಮಾಧಿ ವಿವಾದ
ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ಗೋಹರ್ ಶಾಹಿ ಅನುಯಾಯಿ ಸಮಾಧಿ ವಿವಾದ