
ಪ್ರಭಾಸ್ (Prabhas) ನಟನೆಯ ‘ರಾಜಾ ಸಾಬ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಈ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಔಟ್ಪುಟ್ ಪ್ರಭಾಸ್ ಮತ್ತು ಇತರೇ ಕೆಲವರಿಗೆ ಇಷ್ಟವಾಗದ ಕಾರಣ ವಿಎಫ್ಎಕ್ಸ್ ಇನ್ನಿತರೆ ವಿಷಯಗಳ ಮೇಲೆ ಇನ್ನಷ್ಟು ಕೆಲಸ ಮಾಡಿ ಇದೀಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಸಿನಿಮಾ ಕತೆಯ ಕಾರಣಕ್ಕೆ ಮಾತ್ರವೇ ಅಲ್ಲದೆ, ಇನ್ನೊಂದು ಅಪರೂಪದ ಕಾರಣಕ್ಕೆ ಹೊಸ ದಾಖಲೆ ಬರೆದಿದೆ.
‘ರಾಜಾ ಸಾಬ್’ ಸಿನಿಮಾ ಹಾರರ್ ಥ್ರಿಲ್ಲರ್ ಸಿನಿಮಾ ಎಂಬುದು ಗುಟ್ಟೇನೂ ಅಲ್ಲ. ಹಾರರ್ ಜೊತೆಗೆ ಕಾಮಿಡಿ, ಥ್ರಿಲ್ಲರ್ ಹಾಗೂ ಪ್ರೇಮಕತೆಯನ್ನೂ ಸೇರಿಸಿರುವ ಅಪರೂಪದ ಕತೆಯುಳ್ಳ ಸಿನಿಮಾ ಇದಾಗಿದೆ. ಸಿನಿಮಾದ ಚಿತ್ರೀಕರಣಕ್ಕಾಗಿ ದೇಶದಲ್ಲೇ ಈ ವರೆಗೆ ನಿರ್ಮಾಣ ಮಾಡದಿರುವಷ್ಟು ಬೃಹತ್ ಆದ ಸೆಟ್ ಅನ್ನು ಚಿತ್ರತಂಡ ನಿರ್ಮಾಣ ಮಾಡಿತ್ತು. 41,256 ಚದರ ಅಡಿಯ ವಿಸ್ತೀರ್ಣವಾದ ಭೂತ ಬಂಗಲೆಯ ಸೆಟ್ ಅನ್ನು ಈ ಸಿನಿಮಾಕ್ಕಾಗಿ ನಿರ್ಮಾಣ ಮಾಡಲಾಗಿತ್ತು.
ಇಷ್ಟು ದೊಡ್ಡ ವಿಸ್ತೀರ್ಣ ಹೊಂದಿರುವ ಸೆಟ್ಗಳನ್ನು ನಿರ್ಮಾಣ ಮಾಡಿರುವುದೇ ಬಲು ಅಪರೂಪ. ಅದರಲ್ಲೂ ಹಾರರ್ ಸಿನಿಮಾ ಒಂದಕ್ಕಾಗಿ ಇಷ್ಟು ದೊಡ್ಡ ಸೆಟ್ ಅನ್ನು ಭಾರತದ ಇನ್ಯಾವುದೇ ಸಿನಿಮಾ ತಂಡ ಹಾಕಿಲ್ಲ. ಆದರೆ ‘ರಾಜಾ ಸಾಬ್’ಗೆ ಭಾರಿ ದೊಡ್ಡ ಸೆಟ್ ಹಾಕುವ ಮೂಲಕ ಇದನ್ನು ಸಾಧ್ಯವಾಗಿಸಿದೆ ಚಿತ್ರತಂಡ. ಹಾರರ್ ಸಿನಿಮಾ ಒಂದಕ್ಕೆ ಇಷ್ಟು ದೊಡ್ಡ ಸೆಟ್ ಹಾಕಿದ ಮೊದಲ ಸಿನಿಮಾ ಎನಿಸಿಕೊಂಡಿದೆ ‘ರಾಜಾ ಸಾಬ್’.
ಇದನ್ನೂ ಓದಿ:‘ದಿ ರಾಜಾ ಸಾಬ್’ ಸಿನಿಮಾದ ಟೀಸರ್ ಲೀಕ್; ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ
ರಾಜೀವನ್ ನಂಬಿಯಾರ್ ಅವರು ಈ ಬೃಹತ್ ಸೆಟ್ ಅನ್ನು ಡಿಸೈನ್ ಮಾಡಿದ್ದರಂತೆ. ಪ್ರತಿಯೊಂದು ವಿಷಯವನ್ನೂ ಗಮನದಲ್ಲಿಟ್ಟುಕೊಂಡು, ಬಲು ಸೂಕ್ಷ್ಮತೆಯಿಂದ ಸೆಟ್ ಅನ್ನು ನಿರ್ಮಾಣ ಮಾಡಲಾಗಿತ್ತು ಎಂದು ನಂಬಿಯಾರ್ ಹೇಳಿದ್ದಾರೆ. ಜೂನ್ 16 ರಂದು ‘ರಾಜಾ ಸಾಬ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು, ಅದೇ ದಿನ ಮಾಧ್ಯಮಗಳಿಗೆ ಸೆಟ್ನ ಒಳಗೆ ಹೋಗುವ ಅವಕಾಶ ಕಲ್ಪಿಸಲಾಗುವುದಂತೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ವತಿಯಿಂದ ವಿಶ್ವ ಪ್ರಸಾದ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಅನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಎರಡು ಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ