ಟಾಲಿವುಡ್ ನಟ ಪ್ರಭಾಸ್ (Prabhas) ಅವರು ಕಳೆದ ಕೆಲವು ವರ್ಷಗಳಿಂದ ಸಾಲು ಸಾಲು ಸೋಲು ಕಂಡಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್’ ಮತ್ತು ‘ಆದಿಪುರುಷ್’ ಸಿನಿಮಾಗಳು ನಿರೀಕ್ಷೆಯ ಮಟ್ಟ ತಲುಪಲು ವಿಫಲವಾಗಿವೆ. ಈಗ ಅವರ ಗಮನವೆಲ್ಲ ‘ಸಲಾರ್’ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾದ ಮೇಲಿದೆ. ಆ ಪೈಕಿ ‘ಸಲಾರ್’ (Salaar) ಚಿತ್ರ ಮೊದಲು ಬಿಡುಗಡೆ ಆಗಲಿದೆ. ಸೆಪ್ಟೆಂಬರ್ 28ರಂದು ಈ ಚಿತ್ರ ಅದ್ದೂರಿಯಾಗಿ ತೆರೆ ಕಾಣಲಿದೆ. ಅದಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಅಮೆರಿಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ (Salaar Advance ticket booking) ಆಗಿದೆ. ಅಲ್ಲಿಯೂ ಪ್ರಭಾಸ್ಗೆ ಅಭಿಮಾನಿಗಳು ಇದ್ದಾರೆ. ಈ ಸಿನಿಮಾವನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಬೇಕು ಎಂಬ ಕಾರಣಕ್ಕೆ ಜನರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಹಾಗಾಗಿ ಬಿಡುಗಡೆಗೂ ಮುನ್ನವೇ ಈ ಸಿನಿಮಾ ಭರ್ಜರಿ ಬಿಸ್ನೆಸ್ ಮಾಡುತ್ತಿದೆ.
ಪ್ರಶಾಂತ್ ನೀಲ್ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು. ಅವರ ನಿರ್ದೇಶನದಲ್ಲಿ ‘ಸಲಾರ್’ ಸಿನಿಮಾ ಮೂಡಿಬರುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಮನೆ ಮಾಡಿದೆ. ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ನೋಡಿ ಜನರು ವಾವ್ ಎಂದಿದ್ದಾರೆ. ಅದರ ಪರಿಣಾಮವಾಗಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಬಹಳ ವೇಗವಾಗಿ ಆಗುತ್ತಿದೆ.
Just IN:#Salaar CROSSES $100,000 [₹83.07 lacs] mark at the USA🇺🇸 Box Office from just advance sales.
||#Prabhas|#SalaarCeaseFire|| pic.twitter.com/fU9ykMixiM
— Manobala Vijayabalan (@ManobalaV) August 22, 2023
ಟ್ರೇಡ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಅವರು ‘ಸಲಾರ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಮುಂಗಡ ಬುಕಿಂಗ್ನಿಂದ 83 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಒಂದು ತಿಂಗಳಿಗೂ ಮುನ್ನವೇ ಈ ರೀತಿ ಬಿಸ್ನೆಸ್ ಆಗುತ್ತಿದೆ. ಇನ್ನು, ರಿಲೀಸ್ ಡೇಟ್ ಹತ್ತಿರವಾದರೆ ಬಹುಕೋಟಿ ರೂಪಾಯಿ ಬಿಸ್ನೆಸ್ ಆಗಲಿದೆ ಎಂಬುದು ಖಚಿತ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಅಡ್ವಾನ್ಸ್ ಬುಕಿಂಗ್ನ ವೇಗವೇ ಸಾಕ್ಷಿ ಒದಗಿಸುತ್ತಿದೆ.
Salaar: ‘ಸಲಾರ್ ಸಿನಿಮಾ 2 ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಲಿದೆ’: ಭವಿಷ್ಯ ನುಡಿದ ಹಾಸ್ಯ ನಟ
ಭಾರತದಲ್ಲಿ ‘ಸಲಾರ್’ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಇನ್ನೂ ಆರಂಭ ಆಗಿಲ್ಲ. ಅದಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರು ಕೂಡ ಬಹುಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೂ ‘ಕೆಜಿಎಫ್ 2’ ಕತೆಗೂ ಲಿಂಕ್ ಇರಬಹುದು ಎಂದು ಅನೇಕರು ಈ ಊಹಿಸಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕವೇ ಆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಅದ್ದೂರಿ ಸೆಟ್ಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.