Salaar: ‘ಸಲಾರ್ ಸಿನಿಮಾ 2 ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಲಿದೆ’: ಭವಿಷ್ಯ ನುಡಿದ ಹಾಸ್ಯ ನಟ
Prabhas: ‘ಸಲಾರ್’ ಸಿನಿಮಾಗೆ ಡಬ್ಬಿಂಗ್ ಮುಗಿಸಿರುವ ಸಪ್ತಗಿರಿ ಅವರು ಖುಷಿಯಿಂದ ಟ್ವೀಟ್ ಮಾಡಿದ್ದಾರೆ. ಬಾಕ್ಸ್ ಆಫೀಸ್ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ.
ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಅವರ ‘ಸಲಾರ್’ ಸಿನಿಮಾ (Salaar Movie) ಬಗ್ಗೆ ಟಾಕ್ ಕ್ರಿಯೇಟ್ ಆಗಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಬಿಡಗಡೆ ಆಯಿತು. ಅದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಎರಡು ಭಾಗದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಸೆಪ್ಟೆಂಬರ್ 28ರಂದು ಮೊದಲ ಭಾಗ ರಿಲೀಸ್ ಆಗಲಿದೆ. ನಟ ಪ್ರಭಾಸ್ ಅವರು ಈ ಚಿತ್ರದಿಂದಲಾದರೂ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕು. ‘ಸಲಾರ್’ ಸಿನಿಮಾದಲ್ಲಿ ಖ್ಯಾತ ಹಾಸ್ಯ ನಟ ಸಪ್ತಗಿರಿ (Comedy Actor Sapthagiri) ಕೂಡ ಅಭಿನಯಿಸಿದ್ದಾರೆ. ಅವರು ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಸಿನಿಮಾ 2 ಸಾವಿರ ಕೋಟಿ ರೂಪಾಯಿ ಗಳಿಸಲಿದೆ ಎಂದು ಅವರು ಹೇಳಿದ್ದಾರೆ.
‘ಸಲಾರ್’ ಸಿನಿಮಾಗೆ ಡಬ್ಬಿಂಗ್ ಮುಗಿಸಿರುವ ಸಪ್ತಗಿರಿ ಅವರು ಖುಷಿಯಿಂದ ಟ್ವೀಟ್ ಮಾಡಿದ್ದಾರೆ. ‘ಬಹುನಿರೀಕ್ಷಿತ ಸಲಾರ್ ಸಿನಿಮಾಗೆ ನಾನು ಇಂದು ನನ್ನ ಪಾತ್ರದ ಡಬ್ಬಿಂಗ್ ಪೂರ್ಣಗೊಳಿಸಿದ್ದೇನೆ. ಈ ಸಿನಿಮಾ ಡಬಲ್ ಬ್ಲಾಕ್ ಬಸ್ಟರ್ ಆಗಲಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 2000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂಬ ನಂಬಿಕೆ ನನಗಿದೆ. ಈ ಅವಕಾಶ ನೀಡಿದ್ದಕ್ಕಾಗಿ ಪ್ರಭಾಸ್, ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಧನ್ಯವಾದಗಳು’ ಎಂದು ಸಪ್ತಗಿರಿ ಅವರು ಟ್ವೀಟ್ ಮಾಡಿದ್ದಾರೆ.
#SALAAR ???Today, I finished dubbing for my role in the highly anticipated film #Salaar. it’s going to be a #doubleblockbuster. I’m confident that it will surpass the ₹2000cr mark at the box office. Thanks to #Panworld⭐️ Our #RebelStar #Prabhas #Garu & Director #Prashanthneel… pic.twitter.com/l2TMTyHf6w
— Sapthagiri (@MeSapthagiri) July 8, 2023
ಭಾರಿ ಬಜೆಟ್ನಲ್ಲಿ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ‘ಸಲಾರ್’ ಸಿನಿಮಾವನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ಪ್ರಭಾಸ್ ಮಾತ್ರವಲ್ಲದೇ ಹಲವು ಮಂದಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೂ ಪ್ರಮುಖ ಪಾತ್ರವಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಸೇರಿದಂತೆ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ‘ಸಲಾರ್’ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಪ್ರಭಾಸ್ ಅವರು ‘ಬಾಹುಬಲಿ 2’ ಬಳಿಕ ಮಾಡಿದ ಯಾವ ಸಿನಿಮಾ ಕೂಡ ಗೆದ್ದಿಲ್ಲ. ಹಾಗಾಗಿ ಅವರು ‘ಸಲಾರ್’ ಮೂಲಕ ಗೆಲ್ಲಬೇಕಿದೆ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ‘ಸಲಾರ್’ ಟೀಸರ್ನಲ್ಲಿ ‘ಕೆಜಿಎಫ್’ ಸ್ಟೈಲ್ ಕಾಣಿಸಿದೆ. ಆ ಮೂಲಕ ಕಥೆಯ ಬಗ್ಗೆ ಕೌತುಕ ಮೂಡುವಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.