ಬಿಡುಗಡೆ ಆಯ್ತು ‘ಸಲಾರ್’ ಟ್ರೈಲರ್: ಪ್ರಶಾಂತ್ ಪ್ರಪಂಚದಲ್ಲಿ ಪ್ರಭಾಸ್ ಅಬ್ಬರ

|

Updated on: Dec 01, 2023 | 7:21 PM

Salaar: ಈ ವರ್ಷದ ಬಹುನಿರೀಕ್ಷಿತ ಸಿನಿಮಾ, ಪ್ರಭಾಸ್ ನಟನೆಯ ‘ಸಲಾರ್​’ನ ಟ್ರೈಲರ್ ಬಿಡುಗಡೆ ಆಗಿದೆ. ಪ್ರಶಾಂತ್ ನೀಲ್ ಸೃಷ್ಟಿಸಿರುವ ಅದ್ಭುತ ಪ್ರಪಂಚ ಹಾಗೂ ಅಲ್ಲಿ ನಡೆಯುತ್ತಿರುವ ಯುದ್ಧದ ಸಣ್ಣ ಝಲಕ್ ಟ್ರೈಲರ್​ನಲ್ಲಿದೆ.

ಬಿಡುಗಡೆ ಆಯ್ತು ‘ಸಲಾರ್’ ಟ್ರೈಲರ್: ಪ್ರಶಾಂತ್ ಪ್ರಪಂಚದಲ್ಲಿ ಪ್ರಭಾಸ್ ಅಬ್ಬರ
Follow us on

ಪ್ರಭಾಸ್ (Prabhas) ನಟಿಸಿ ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮಾಡಿರುವ ‘ಸಲಾರ್’ ಈ ವರ್ಷದ ಅತ್ಯಂತ ಹೆಚ್ಚು ನಿರೀಕ್ಷಿತ ಸಿನಿಮಾ. ‘ಸಲಾರ್’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ತಂಡ ಪ್ರಚಾರ ಕಾರ್ಯ ಆರಂಭ ಮಾಡಿದೆ. ಇದೀಗ ಸಿನಿಮಾದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಪಕ್ಕಾ ಮಾಸ್-ಆಕ್ಷನ್ ಭರಿತ ಟ್ರೈಲರ್ ಇದಾಗಿದೆ.

ಪ್ರಶಾಂತ್ ನೀಲ್ ಈಗಾಗಲೇ ಹೇಳಿರುವಂತೆ ಪಕ್ಕಾ ಆಕ್ಷನ್ ಭರಿತ ವೈಯೊಲೆಂಟ್ ಕತೆಯುಳ್ಳ ಸಿನಿಮಾ ಇದು. ಅಂತೆಯೇ ಸಿನಿಮಾದ ಟ್ರೈಲರ್​ನಲ್ಲಿ ಸಹ ಆ ವೈಯಲೆನ್ಸ್​ನ ಕೆಲವು ಝಲಕ್​ಗಳನ್ನು ನೀಲ್ ತೋರಿಸಿದ್ದಾರೆ. ‘ಕೆಜಿಎಫ್​’ ರೀತಿಯೇ ಒಂದು ಭಿನ್ನ ಪ್ರಪಂಚವನ್ನೇ ‘ಸಲಾರ್’ ಸಿನಿಮಾನಲ್ಲಿ ಪ್ರಶಾಂತ್ ನೀಲ್ ಸೃಷ್ಟಿಸಿದ್ದು, ಆ ಪ್ರಪಂಚದ ಇಣುಕು ನೋಟವೂ ‘ಸಲಾರ್’ ಟ್ರೈಲರ್​ನಲ್ಲಿದೆ. ಆಕ್ಷನ್​, ಖಡಕ್ ಸಂಭಾಷಣೆಗಳ ಜೊತೆಗೆ ಸಿನಿಮಾದ ಕೆಲವು ಪ್ರಮುಖ ಪಾತ್ರಗಳ ಪರಿಚಯವನ್ನು ಸಹ ಪ್ರಶಾಂತ್ ನೀಲ್ ಮಾಡಿಸಿದ್ದಾರೆ.

‘ಸಲಾರ್’ ಸಿನಿಮಾದ ಮೊದಲ ಭಾಗ ಇದೇ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ನಟಿಸಿದ್ದಾರೆ. ಇವರಿಬ್ಬರ ನಡುವಿನ ಸ್ನೇಹ-ವೈರತ್ವದ ಕತೆಯೇ ‘ಸಲಾರ್’ ಸಿನಿಮಾದ ಪ್ರಧಾನ ಅಂಶ. ಸಿನಿಮಾದ ನಾಯಕಿ ಶ್ರುತಿ ಹಾಸನ್. ಸಿನಿಮಾದಲ್ಲಿ ಕನ್ನಡಿಗರಾದ ಮಧು ಗುರುಸ್ವಾಮಿ, ಗರುಡ ಖ್ಯಾತಿಯ ರಾಮಚಂದ್ರ, ‘ರತ್ನನ್ ಪ್ರಪಂಚ’ ಖ್ಯಾತಿಯ ಪಂಜು, ಭಜರಂಗಿ ಲೋಕಿ ಅವರುಗಳು ನಟಿಸಿದ್ದಾರೆ. ಭಾರಿ ದೊಡ್ಡ ತಾರಾಗಣ ಇರುವ ಈ ಸಿನಿಮಾವನ್ನು ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ