
ನಟ ಪ್ರಭಾಸ್ ಅವರು (Prabhas) ಒಮ್ಮೊಮ್ಮೆ ಒಂದೊಂದು ರೀತಿ ಕಾಣಿಸುತ್ತಾರೆ. ಕೆಲವೊಮ್ಮೆ ಅವರು ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣಿಸುತ್ತಾರೆ. ಕೆಲವೊಮ್ಮೆ ಅವರು ವಯಸ್ಸಾದವರಂತೆ ಕಾಣಿಸುತ್ತಾರೆ. ಈ ಸಮಯದಲ್ಲಿ ಅವರನ್ನು ಸಾಕಷ್ಟು ಟೀಕೆ ಮಾಡಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಪ್ರಭಾಸ್ ಅವರನ್ನು ನೋಡಿ ಟೀಕಿಸಲಾಗಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಲುಕ್ ಬದಲಿಸುವಂತೆ ಕೋರಿಕೆ ಇಟ್ಟಿದ್ದಾರೆ.
ಟಾಲಿವುಡ್ ನಟ ಶರ್ವ ಅವರ ಹೊಸ ಸಿನಿಮಾ ‘ಬೈಕರ್’ ಏಪ್ರಿಲ್ 3ರಂದು ತೆರೆಗೆ ಬರುತ್ತಿದೆ. ಏಪ್ರಿಲ್ 2ರಂದು ಪೇಯ್ಡ್ ಪ್ರೀಮಿಯರ್ಗಳನ್ನು ಆಯೋಜನೆ ಮಾಡಲಾಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಪ್ರಭಾಸ್ ಭಾಗಿ ಆಗಿದ್ದಾರೆ. ಇತ್ತೀಚೆಗೆ ಅವರು ಟ್ವೀಟ್ ಮಾಡಿ ಸಿನಿಮಾದ ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಈಗ ಪ್ರಮೋಷನ್ ವಿಡಿಯೋದ ಭಾಗ ಆಗಿದ್ದಾರೆ.
ಪ್ರಭಾಸ್ ಅವರು ಬೈಕ್ ಏರಿ ಹೋಗುತ್ತಿರುವ ವಿಡಿಯೋ ಇದಾಗಿದೆ. ‘ರೇಸ್ಗೆ ರೆಡಿ’ ಆಗಿ ಎಂದು ಅವರು ಕೋರಿಕೊಳ್ಳುತ್ತಾರೆ. ಈ ವಿಡಿಯೋ ವೈರಲ್ ಆಗಿದೆ. ಸಿನಿಮಾ ನಿರ್ಮಾಣ ಮಾಡಿರೋ ‘ಯುವಿ ಕ್ರಿಯೇಷನ್ಸ್’ ಈ ವಿಡಿಯೋನ ಹಂಚಿಕೊಂಡಿದೆ. ಇದಕ್ಕೆ ಅಭಿಮಾನಿಗಳ ಕಡೆಯಿಂದ ವಿವಿಧ ರೀತಿಯ ಕಮೆಂಟ್ಗಳು ಬರುತ್ತಿವೆ. ಅನೇಕರು ಪ್ರಭಾಸ್ ಅವರ ಲುಕ್ ಅನ್ನು ಟೀಕೆ ಮಾಡಿದ್ದಾರೆ. ಅವರಿಗೆ ವಯಸ್ಸಾದಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ‘ನಿವೃತ್ತಿ ದಿನ ಹತ್ತಿರವಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?
ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ರಾಜಾ ಸಾಬ್’ ಹೀನಾಯವಾಗಿ ಸೋಲು ಕಂಡಿತು. ಈ ಕಾರಣದಿಂದ ಅವರಿಗೆ ಒಂದು ದೊಡ್ಡ ಗೆಲುವಿನ ಅಗತ್ಯವಿದೆ. ಆ ಗೆಲುವು ‘ಸ್ಪಿರಿಟ್’ ಚಿತ್ರದ ಮೂಲಕ ಸಿಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ಈ ಸಿನಿಮಾಗೆ ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.