‘ಆತನ ಅಹಂಕಾರ ಮುರಿದಿದ್ದಕ್ಕೆ ಧನ್ಯವಾದ’: ಚಾರ್ ಸೌ ಪಾರ್ ಬಗ್ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ

ಬಹುಭಾಷಾ ನಟ ಪ್ರಕಾಶ್​ ರಾಜ್​ ಅವರು ಮಾಡಿರುವ ಈ ಟ್ವೀಟ್​ ವೈರಲ್​ ಆಗಿದೆ. ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಹೇಳಿಕೊಂಡ ರೀತಿ 400ಕ್ಕಿಂತ ಹೆಚ್ಚು ಸೀಟ್​ ಪಡೆಯಲು ಸಾಧ್ಯವಾಗಿಲ್ಲ ಎಂಬ ವಿಚಾರವನ್ನು ಪ್ರಕಾಶ್​ ರಾಜ್​ ಅವರು ಟೀಕಿಸಿದ್ದಾರೆ. ಈ ಮೂಲಕ ಚುನಾವಣಾ ಫಲಿತಾಂಶದ ಬಗ್ಗೆ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

‘ಆತನ ಅಹಂಕಾರ ಮುರಿದಿದ್ದಕ್ಕೆ ಧನ್ಯವಾದ’: ಚಾರ್ ಸೌ ಪಾರ್ ಬಗ್ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ
ಪ್ರಕಾಶ್​ ರಾಜ್​, ನರೇಂದ್ರ ಮೋದಿ

Updated on: Jun 04, 2024 | 10:15 PM

ನಟ ಪ್ರಕಾಶ್​ ರಾಜ್​ (Prakash Raj) ಅವರು ಮೊದಲಿನಿಂದಲೂ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇಂದು (ಜೂನ್​ 4) ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಆ ಬಗ್ಗೆ ಪ್ರಕಾಶ್​ ರಾಜ್​ ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ಬಿಜೆಪಿಯ ಎನ್​ಡಿಎ 400ಕ್ಕೂ ಹೆಚ್ಚು ಸೀಟ್​ ಪಡೆಯುತ್ತದೆ ಎಂದು ಬಹುತೇಕರು ಹೇಳಿದ್ದರು. ಬಿಜೆಪಿ (BJP) ನಾಯಕರು ಇದನ್ನು ಆಗಾಗ ಪುನರುಚ್ಚರಿಸಿದ್ದರು. ಆದರೆ ಆ ರೀತಿ ಆಗಿಲ್ಲ. ಅದೇ ವಿಚಾರವನ್ನು ಇಟ್ಟುಕೊಂಡು ಪ್ರಕಾಶ್​ ರಾಜ್​ ಅವರು ಈಗ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ಪ್ರಶಾಂತ್​ ರಾಜ್​ ಅವರು ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. 400 ಸೀಟ್​ ದಾಟಲು (ಚಾರ್​ ಸೌ ಪಾರ್​) ಬಿಜೆಪಿಗೆ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿರುವುದು ಈ ವಿಡಿಯೋದಲ್ಲಿದೆ. ಅದರ ಜೊತೆಗೆ ಪ್ರಕಾಶ್​ ರಾಜ್​ ಅವರು ದೇಶದ ಜನರಿಗೆ ಚುನಾವಣಾ ಫಲಿತಾಂಶದ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ತಿಳಿಸಿದ್ದಾರೆ.

‘ಚಕ್ರವರ್ತಿ ಈಗ ಬೆತ್ತಲಾಗಿದ್ದಾನೆ. ಬೇರೆ ಯಾರದ್ದೋ ಬೆಂಬಲದೊಂದಿಗೆ ಆತ ಈಗ ನಡೆಯಬೇಕಿದೆ. ಆತನ ಅಂಹಕಾರ ಮುರಿದು, ಸ್ಥಾನ ತೋರಿಸಿದ್ದಕ್ಕಾಗಿ ಇಂಡಿಯಾ ಮತ್ತು ಜವಾಬ್ದಾರಿಯುತ ಸಮಾಜಕ್ಕೆ ಧನ್ಯವಾದಗಳು. ನಾವು ನಮ್ಮ ದೇಶಕ್ಕಾಗಿ ಉತ್ತಮವಾಗಿ ಹೋರಾಡಿದ್ದೇವೆ. ಈ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಜೈ ಹಿಂದ್​’ ಎಂದು ಪ್ರಕಾಶ್​ ರಾಜ್​ ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ನಟಿ ಕಂಗನಾಗೆ ಗೆಲುವು; ಮೊದಲ ಪ್ರಯತ್ನದಲ್ಲಿ ಪಡೆದ ಮತಗಳು ಎಷ್ಟು?

ಪ್ರಕಾಶ್​ ರಾಜ್​ ಅವರ ಈ ಟ್ವೀಟ್​ಗೆ ಅನೇಕರು ಕಮೆಂಟ್​ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಪ್ರಕಾಶ್​ ರಾಜ್​ ಅವರ ಮಾತಿಗೆ ಸಹಮತ ಸೂಚಿಸಿದ್ದಾರೆ. ಒಂದಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಮತ್ತೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗುತ್ತಾರೆ’ ಎಂದು ಬಿಜೆಪಿ ಬೆಂಬಲಿಗರು ಕಮೆಂಟ್​ ಮಾಡಿದ್ದಾರೆ. ಪ್ರಕಾಶ್​ ರಾಜ್​ ಅವರ ಈ ಟ್ವೀಟ್​ ವೈರಲ್​ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.