ಟ್ರೇಲರ್ ಮೂಲಕ ಗಮನ ಸೆಳೆದ ಪ್ರಣವ್ ಮೋಹನ್ಲಾಲ್ ನಟನೆಯ ಹಾರರ್ ಚಿತ್ರ ‘ಡೀಯಸ್ ಈರೇ’
ರಾಹುಲ್ ಸದಾಶಿವನ್ ನಿರ್ದೇಶನ ಮಾಡಿರುವ ‘ಡೀಯಸ್ ಈರೇ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಪ್ರಣವ್ ಮೋಹನ್ಲಾಲ್ ಅವರು ಪ್ರಮುಖ ಪಾತ್ರ ಮಾಡಿದ್ದು, ಟ್ರೇಲರ್ ಗಮನ ಸೆಳೆದಿದೆ. ಅಕ್ಟೋಬರ್ 31ರಂದು ಈ ಸಿನಿಮಾ ತೆರೆ ಕಾಣಲಿದೆ. ನೈಜ ಘಟನೆ ಆಧಾರಿತ ಹಾರರ್ ಕಥೆ ಈ ಚಿತ್ರದಲ್ಲಿದೆ.

ಮಲಯಾಳಂ ಸೂಪರ್ ಸ್ಟಾರ್ ಮೋಹಲ್ಲಾಲ್ ಅವರ ಪುತ್ರ ಪ್ರಣವ್ (Pranav Mohanlal) ಅವರಿಗೆ ಚಿತ್ರರಂಗದಲ್ಲಿ ಸಕ್ಸಸ್ ಸಿಕ್ಕಿದೆ. ಹಾಗಿದ್ದರೂ ಕೂಡ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರುತ್ತಿಲ್ಲ. ‘ಹೃದಯಂ’ ಚಿತ್ರದ ಬಳಿಕ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚಾಯಿತು. ಈಗ ಅವರು ಹೊಸ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಡೀಯಸ್ ಈರೇ’ (Dies Irae) ಸಿನಿಮಾದಲ್ಲಿ ಪ್ರಣವ್ ಮೋಹನ್ಲಾಲ್ ಅವರು ಡಿಫರೆಂಟ್ ಪಾತ್ರ ಮಾಡಿದ್ದಾರೆ. ಅಂದಹಾಗೆ, ಇದೊಂದು ಹಾರರ್ ಸಿನಿಮಾ. ಈಗ ಟ್ರೇಲರ್ (Dies Irae Trailer) ಬಿಡುಗಡೆ ಆಗಿ ಗಮನ ಸೆಳೆದಿದೆ.
‘ಡೀಯಸ್ ಈರೇ’ ಸಿನಿಮಾಗೆ ರಾಹುಲ್ ಸದಾಶಿವನ್ ಅವರು ನಿರ್ದೇಶನ ಮಾಡಿದ್ದಾರೆ. ಎಸ್. ಶಶಿಕಾಂತ್ ಹಾಗೂ ಚಕ್ರವರ್ತಿ ರಾಮಚಂದ್ರ ಅವರ ‘ನೈಟ್ ಶಿಫ್ಟ್ ಸ್ಟುಡಿಯೋ’ ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. 2 ನಿಮಿಷ ಅವಧಿಯ ಟ್ರೇಲರ್ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಪ್ರಣವ್ ಮೋಹನ್ಲಾಲ್ ಅಭಿಮಾನಿಗಳಿಗೆ ಈ ಟ್ರೇಲರ್ ಇಷ್ಟ ಆಗಿದೆ.
ಈ ಸಿನಿಮಾದ ಶೀರ್ಷಿಕೆಗೆ The Day Of Wrath ಎಂಬ ಟ್ಯಾಗ್ ಲೈನ್ ಇದೆ. ಆ ಮೂಲಕ ಪ್ರೇಕ್ಷಕರ ಕೌತುಕವನ್ನು ಹೆಚ್ಚಿಸಲಾಗಿದೆ. ಈ ಚಿತ್ರದಲ್ಲಿ ಪ್ರಣವ್ ಮೋಹನ್ಲಾಲ್ ಜೊತೆ ಜಿಬಿನ್ ಗೋಪಿನಾಥ್, ಅರುಣ್ ಅಜಿಕುಮಾರ್, ಮನೋಹರಿ ಜಾಯ್ ಮುಂತಾದವರು ಕೂಡ ಅಭಿನಯಿಸಿದ್ದಾರೆ. ಅಕ್ಟೋಬರ್ 31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
‘ಡೀಯಸ್ ಈರೇ’ ಸಿನಿಮಾ ಟ್ರೇಲರ್:
ಕ್ರಿಸ್ಟೋ ಕ್ಸೇವಿಯರ್ ಅವರ ಸಂಗೀತ ನಿರ್ದೇಶನ, ಶೆಹನಾದ್ ಜಲಾಲ್ ಅವರ ಛಾಯಾಗ್ರಹಣ, ಶಫಿಕ್ಯೂ ಮೊಹಮ್ಮದ್ ಅಲಿ ಅವರ ಸಂಕಲನ ಈ ಸಿನಿಮಾಗಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಹಾಗಾಗಿ ಸಿಕ್ಕಾಪಟ್ಟೆ ಹಾರರ್ ಇರಲಿದೆ ಎಂಬುದು ಸಿನಿಪ್ರಿಯರ ನಿರೀಕ್ಷೆ.
ಇದನ್ನೂ ಓದಿ: ವಿದೇಶದಲ್ಲಿ ಊಟ, ವಸತಿಗಾಗಿ ಕುರಿ ಮೇಯಿಸಿ, ಕೃಷಿ ಮಾಡುತ್ತಿರುವ ಮೋಹನ್ಲಾಲ್ ಪುತ್ರ ಪ್ರಣವ್
ಇಡೀ ಸಿನಿಮಾದಲ್ಲಿ ಪ್ರಣವ್ ಮೋಹನ್ಲಾಲ್ ಅವರ ಪಾತ್ರವೇ ಹೈಲೈಟ್ ಆಗಿರಲಿದೆ. ಟ್ರೇಲರ್ನಲ್ಲಿ ಆ ಬಗ್ಗೆ ಸುಳಿವು ಸಿಕ್ಕಿದೆ. ನಿರ್ದೇಶಕ ರಾಹುಲ್ ಸದಾಶಿವನ್ ಅವರು ಈಗಾಗಲೇ ಹಾರರ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ‘ರೆಡ್ ರೇನ್’, ‘ಭೂತಕಾಲಂ’, ‘ಭ್ರಮಾಯುಗಂ’ ಸಿನಿಮಾಗಳ ಬಳಿಕ ಅವರು ‘ಡೀಯಸ್ ಈರೇ’ ಚಿತ್ರವನ್ನು ಮಾಡಿದ್ದಾರೆ. ಆ ಕಾರಣದಿಂದಲೂ ಹೈಪ್ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




