ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ‘ಸಲಾರ್’ ಸಿನಿಮಾ (Salaar Movie) ಜನರಿಂದ ಮೆಚ್ಚುಗೆ ಪಡೆದಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 600 ಕೋಟಿ ರೂಪಾಯಿ ಕಲೆ ಹಾಕಿದೆ. ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿಯೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರಕ್ಕೆ ಎರಡನೇ ಪಾರ್ಟ್ ಬರಲಿದೆ ಎಂದು ತಂಡ ಈ ಮೊದಲೇ ಘೋಷಣೆ ಮಾಡಿದೆ. ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ದೊಡ್ಡ ಟ್ವಿಸ್ಟ್ನೊಂದಿಗೆ ಸಿನಿಮಾ ಪೂರ್ಣಗೊಳಿಸಲಾಗಿದೆ. ಹೀಗಾಗಿ ಎರಡನೇ ಪಾರ್ಟ್ (Salaar 2 Movie) ಬಗ್ಗೆ ನಿರೀಕ್ಷೆ ಮೂಡಿದೆ. ಆದರೆ, ಈ ಸಿನಿಮಾ ಸದ್ಯಕ್ಕಂತೂ ಸೆಟ್ಟೇರುವುದಿಲ್ಲ ಎನ್ನಲಾಗುತ್ತಿದೆ.
ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಮೊದಲ ಭಾಗ ಮುಗಿದ ತಕ್ಷಣ ಎರಡನೇ ಪಾರ್ಟ್ನ ಕೆಲಸದಲ್ಲಿ ತೊಡಗಿಕೊಂಡರು. ಆದರೆ, ‘ಸಲಾರ್’ ವಿಚಾರದಲ್ಲಿ ಅವರು ಆ ರೀತಿ ಮಾಡುತ್ತಿಲ್ಲ. ಇದಕ್ಕೆ ಕಾರಣ ಹಲವು. ಅವರು ಜೂನಿಯರ್ ಎನ್ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ಜೂನಿಯರ್ ಎನ್ಟಿಆರ್ ‘ದೇವರ’ ಹಾಗೂ ‘ವಾರ್ 2’ ಕೆಲಸ ಮುಗಿದ ಬಳಿಕ ಪ್ರಶಾಂತ್ ನೀಲ್ ಕೈಗೆ ಸಿಗಲಿದ್ದಾರೆ. ಅದಕ್ಕೆ ಇನ್ನೂ ಸಾಕಷ್ಟು ಸಮಯಬೇಕಿದೆ.
‘ಸಲಾರ್ 2’ ಮಾಡಬೇಕಾದರೆ ಪ್ರಭಾಸ್ ಅವರ ಕಾಲ್ಶೀಟ್ ಕೂಡ ಮುಖ್ಯ. ಸದ್ಯ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ‘ದಿ ರಾಜಾ ಸಾಬ್’ ಹಾಗೂ ‘ಸ್ಪಿರಿಟ್’ ಸಿನಿಮಾಗಳೂ ಅವರ ಕೈಯಲ್ಲಿವೆ. ಈ ಎಲ್ಲಾ ಕಾರಣದಿಂದ ಪ್ರಭಾಸ್ ಸದ್ಯಕ್ಕಂತೂ ಯಾರ ಕೈಗೂ ಸಿಗುವುದಿಲ್ಲ.
ಇದನ್ನೂ ಓದಿ: ‘ನಾನು ಬ್ಯಾಡ್ ಹಸ್ಬಂಡ್’; ಓಪನ್ ಆಗಿ ಮಾತನಾಡಿದ ಪ್ರಶಾಂತ್ ನೀಲ್
‘ಕೆಜಿಎಫ್ 2’ ಕ್ಲೈ ಮ್ಯಾಕ್ಸ್ನಲ್ಲಿ ಮೂರನೇ ಭಾಗದ ಬಗ್ಗೆ ಸೂಚನೆ ನೀಡಲಾಗಿತ್ತು. ಈ ಕ್ರೇಜ್ ಕಡಿಮೆ ಆಗುವ ಮೊದಲು ಮೂರನೇ ಭಾಗ ಮಾಡಬೇಕಾದ ಅನಿವಾರ್ಯತೆ ತಂಡಕ್ಕೆ ಇದೆ. ಹೀಗಾಗಿ, 2025ರ ವೇಳೆಗಾದರೂ ‘ಕೆಜಿಎಫ್ 3’ ಸೆಟ್ಟೇರಬೇಕಿದೆ. ಈ ಎಲ್ಲಾ ಕಾರಣದಿಂದ ಪ್ರಶಾಂತ್ ನೀಲ್ ಅವರು ಈ ಬಗ್ಗೆ ಗಮನ ಹರಿಸಬಹುದು ಎನ್ನಲಾಗುತ್ತಿದೆ. ಜೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾ ಪೂರ್ಣಗೊಂಡ ಬಳಿಕ ಅವರು ‘ಕೆಜಿಎಫ್ 3’ ಕೈಗೆತ್ತಿಕೊಂಡಿದ್ದು ಹೌದಾದಲ್ಲಿ ‘ಸಲಾರ್ 2’ ಸೆಟ್ಟೇರೋದು ಮತ್ತಷ್ಟು ವಿಳಂಬ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ