ಮಾಡಿದ ತಪ್ಪಿಗೆ ಪ್ರಾಯಶ್ಚಿತ?; ತಾಯಾಣೆ ಬಡ ಮಕ್ಕಳಿಗೆ 10 ಸಾವಿರ ಮೊಟ್ಟೆ ದಾನ ಮಾಡ್ತೀನಿ ಎಂದ ಪ್ರಶಾಂತ್​ ಸಂಬರಗಿ

ನಾನು ಮನೆಯಲ್ಲಿ ಒಂದೆ ಹೊತ್ತು ಊಟ ಮಾಡ್ತೀನಿ. ಉಳಿದವರಿಗೆ ತಾಕತ್ತಿದೆಯಾ? ಎಂದು ಪ್ರಶಾಂತ್​ ಪ್ರಶ್ನೆ ಮಾಡಿದರು. ಮೊಟ್ಟೆ ದಾನ ಮಾಡುವ ನಿರ್ಧಾರದ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಸಂತಸ ವ್ಯಕ್ತಪಡಿಸಿದ್ದರು. 

ಮಾಡಿದ ತಪ್ಪಿಗೆ ಪ್ರಾಯಶ್ಚಿತ?; ತಾಯಾಣೆ ಬಡ ಮಕ್ಕಳಿಗೆ 10 ಸಾವಿರ ಮೊಟ್ಟೆ ದಾನ ಮಾಡ್ತೀನಿ ಎಂದ ಪ್ರಶಾಂತ್​ ಸಂಬರಗಿ
ಪ್ರಶಾಂತ್ ಸಂಬರಗಿ
Follow us
ರಾಜೇಶ್ ದುಗ್ಗುಮನೆ
|

Updated on:Apr 24, 2021 | 3:08 PM

ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಚರ್ಚೆ ಆಗುತ್ತಲೇ ಇರುತ್ತಾರೆ. ಈ ಮೊದಲು ತುಪ್ಪ ಹಾಗೂ ಚಪಾತಿ ತಿಂದ ವಿಚಾರಕ್ಕೆ ಪ್ರಶಾಂತ್ ವಿವಾದಕ್ಕೆ ತುತ್ತಾಗಿದ್ದರು. ಈ ಬಾರಿ ಪ್ರಶಾಂತ್ ಮೊಟ್ಟೆ ವಿಚಾರಕ್ಕೆ ವಿವಾದಕ್ಕೆ ಸಿಲುಕಿದ್ದಾರೆ. ಊಟದ ವಿಚಾರಕ್ಕೆ ಪದೇ ಪದೇ ವಿವಾದಕ್ಕೆ ತುತ್ತಾಗುತ್ತಿರುವುದು ಪ್ರಶಾಂತ್​​ಗೆ ಬೇಸರ ತರಿಸಿದೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಅವರು ಶಪಥ ಒಂದನ್ನು ಮಾಡಿದ್ದಾರೆ. ಮೊಟ್ಟೆಯನ್ನು ಓವನ್​​ನಲ್ಲಿ ಇಟ್ಟು ಬೇಯಿಸೋಕೆ ಮನೆ ಮಂದಿ ಮುಂದಾಗಿದ್ದರು. ನಿಧಿ ಹಾಗೂ ಪ್ರಶಾಂತ್ ಇಬ್ಬರೂ ಸೇರಿ ಮೊಟ್ಟೆ ಬೇಯಿಸಿದರು. ಆದರೆ, ಅದು ಒಡೆದು ಹೋಯಿತು. ಇದನ್ನು ನಾನು ಟ್ರೈಲ್ ನೋಡ್ತೀನಿ ಎಂದು ಪ್ರಶಾಂತ್ ತಿಂದರು. ಇದಾದ ನಂತರ ಮತ್ತೊಮ್ಮೆ ಪ್ರಶಾಂತ್ ಮೊಟ್ಟೆ ತಿನ್ನೋಕೆ ಮುಂದಾದರು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಯಿತು. ಮನೆಯವರ ಜತೆ ನಿಧಿ ಈ ಬಗ್ಗೆ ಅಪಸ್ವರ ತೆಗೆದರು. ಇದಕ್ಕೆ ಪ್ರಶಾಂತ್ ಬೇಸರಗೊಂಡರು.

ನಾನು ಮನೆಯಲ್ಲಿ ಏನು ತಿಂದರೂ ವಿವಾದ ಆಗುತ್ತದೆ. ಮೊಟ್ಟೆ ವಿವಾದ ಆಗಿರುವುದಕ್ಕೆ ಬಿಗ್ ಬಾಸ್ ಮನೆಯೇ ಸಾಕ್ಷಿ. ಹೊರಬಂದ ಕೂಡಲೇ 10 ಸಾವಿರ ಬಡ ಮಕ್ಕಳಿಗೆ ಮೊಟ್ಟೆ ಹಂಚುತ್ತೇನೆ. ತಾಯಾಣೆ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಬಿಗ್ ಬಾಸ್ ನೀವು ಹೇಳಿದ ಶಾಲೆಗೆ 10 ಸಾವಿರ ಮೊಟ್ಟೆ ಕೊಡುತ್ತೇನೆ ಎಂದು ಪ್ರಶಾಂತ್ ಶಪಥ ಮಾಡಿದರು.

ನಾನು ಮನೆಯಲ್ಲಿ ಒಂದೇ  ಹೊತ್ತು ಊಟ ಮಾಡ್ತೀನಿ. ಉಳಿದವರಿಗೆ ತಾಕತ್ತಿದೆಯಾ? ಎಂದು ಪ್ರಶಾಂತ್​ ಪ್ರಶ್ನೆ ಮಾಡಿದರು. ಮೊಟ್ಟೆ ದಾನ ಮಾಡುವ ನಿರ್ಧಾರದ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಸಂತಸ ವ್ಯಕ್ತಪಡಿಸಿದ್ದರು.

ಆಗ ಮಾತನಾಡಿದ ಶಮಂತ್​ ಬ್ರೋ ಗೌಡ, ಮನೆಯವರಿಗೆ ಈ ಮಾತನ್ನು ಹೇಳಿ ಎಂದರು.  ಆ ರೀತಿ ಮಾಡೋದು ಸರಿಯಲ್ಲ. ನಾನು ಅದನ್ನು ಮಾಡಿ ತೋರಿಸಬೇಕು ಎಂದರು ಪ್ರಶಾಂತ್​. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಕೂಡಲೇ ಅವರು​ ಮೊಟ್ಟೆ ದಾನ ಮಾಡುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Kichcha Sudeep: ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಸುದೀಪ್​; ಈ ವಾರವೂ ಬಿಗ್​ ಬಾಸ್​ಗೆ ಕಿಚ್ಚ ಗೈರು

ಸೆಲ್ಫೀ ನೆಪದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಎಲ್ಲರೆದುರೇ ಮುತ್ತಿಟ್ಟ ಅಭಿಮಾನಿ! ಮರುದಿನವೇ ಬಂತು ಕೊರೊನಾ

Published On - 3:02 pm, Sat, 24 April 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್