Prithviraj Sukumaran: ‘ಪೃಥ್ವಿರಾಜ್ಗೆ ರಾಷ್ಟ್ರಪ್ರಶಸ್ತಿ ಖಚಿತ’; ಮೊದಲೇ ಊಹಿಸಿದ ಫ್ಯಾನ್ಸ್
ಮಲಯಾಳಂ ನಿರ್ದೇಶಕ ಬ್ಲೆಸ್ಸಿ ಅವರು ಸಾಕಷ್ಟು ಶ್ರಮ ಹಾಕಿ ‘ಆಡು ಜೀವಿತಂ’ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಹಲವು ವರ್ಷ ಮುಡಿಪಿಟ್ಟಿದ್ದಾರೆ. ಪೃಥ್ವಿರಾಜ್ ಅವರು ಈ ಚಿತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನಟನೆ ಮೂಲಕ ಪೃಥ್ವಿರಾಜ್ ಅವರು ಎಲ್ಲರ ಮನ ಗೆದ್ದಿದ್ದಾರೆ.
ಮಲಯಾಳಂ ಸೂಪರ್ಸ್ಟಾರ್ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ಅದ್ಭುತ ನಟ ಅನ್ನೋದು ಪದೇ ಪದೇ ಸಾಬಿತು ಆಗುತ್ತಲೇ ಇದೆ. ಅವರ ನಟನೆಯ ‘ಆಡು ಜೀವಿತಂ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಅವರ ನಟನೆ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಾರ್ಚ್ 28ರಂದು ರಿಲೀಸ್ ಆದ ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಗಳಿಕೆ 50 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದ ನಟನೆಗೆ ಪೃಥ್ವಿರಾಜ್ಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ ಎಂದು ಅನೇಕರು ಊಹಿಸಿದ್ದಾರೆ.
ಮಲಯಾಳಂ ನಿರ್ದೇಶಕ ಬ್ಲೆಸ್ಸಿ ಅವರು ಸಾಕಷ್ಟು ಶ್ರಮ ಹಾಕಿ ‘ಆಡು ಜೀವಿತಂ’ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಹಲವು ವರ್ಷ ಮುಡಿಪಿಟ್ಟಿದ್ದಾರೆ. ಪೃಥ್ವಿರಾಜ್ ಅವರು ಈ ಚಿತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನಟನೆ ಮೂಲಕ ಪೃಥ್ವಿರಾಜ್ ಅವರು ಎಲ್ಲರ ಮನ ಗೆದ್ದಿದ್ದಾರೆ. ಅವರಿಗೆ ರಾಷ್ಟ್ರಪ್ರಶಸ್ತಿ ಸಿಗಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಬಹುತೇಕ ಹೀರೋಗಳು ಮಾಸ್ ಪಾತ್ರಗಳನ್ನು ಮಾಡಲು ಇಷ್ಟಪಡುತ್ತಾರೆ. ಆ್ಯಬ್ಸ್ ತೋರಿಸೋಕೆ ಮಾತ್ರ ಶರ್ಟ್ ತೆಗೆಯಲು ಹೀರೋಗಳು ಮುಂದಾಗುತ್ತಾರೆ. ಆದರೆ, ಪೃಥ್ವಿರಾಜ್ ಅವರು ಇದಕ್ಕೆ ಭಿನ್ನ. ಅವರು ಈ ಚಿತ್ರದಲ್ಲಿ ಬಟ್ಟೆ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಮರಳುಗಾಡಿನಲ್ಲಿ ಸಮಯ ಕಳೆದಿದ್ದಾರೆ. ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ. ಇವುಗಳನ್ನು ಬಹುತೇಕ ಕಲಾವಿದರು ಮಾಡೋಕೆ ಇಷ್ಟಪಡುವುದಿಲ್ಲ.
ಈ ಮೊದಲು ಈ ಸಿನಿಮಾ ಜರ್ನಿ ಬಗ್ಗೆ ಮಾತನಾಡುವಾಗ ಪೃಥ್ವಿರಾಜ್ ಅವರು 31 ಕೆಜಿ ತೂಕ ಇಳಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ಅದರ ಶೂಟಿಂಗ್ ಮಾಡಬೇಕು ಎಂದುಕೊಂಡಾಗಲೇ ಕೊವಿಡ್ ಶುರುವಾಯಿತು. ನಂತರ ಅವರು ಒಂದೂವರೆ ವರ್ಷ ಕಾಯಬೇಕಾಯಿತು. ಪೃಥ್ವಿರಾಜ್ ಅವರು ಈ ಚಿತ್ರಕ್ಕೆ ಹಾಕಿದ ಶ್ರಮ ತುಂಬಾನೇ ದೊಡ್ಡದು.
ಇದನ್ನೂ ಓದಿ: ಮೂರು ದಿನಕ್ಕೆ 50 ಕೋಟಿ ರೂಪಾಯಿ ಗಳಿಸಿದ ‘ಆಡುಜೀವಿತಂ’ ಸಿನಿಮಾ
‘ಆಡು ಜೀವಿತಂ’ ಸಿನಿಮಾ ನೈಜ ಘಟನೆ ಆಧರಿಸಿದೆ. ನಜೀದ್ ಹೆಸರಿನ ಕೇಳದ ವ್ಯಕ್ತಿ 90ರ ದಶಕದಲ್ಲಿ ಸೌದಿ ಅರೇಬಿಯಾಗೆ ತೆರಳುತ್ತಾರೆ. ಅಲ್ಲಿ ಅವರು ಸಾಕಷ್ಟು ತೊಂದರೆ ಎದುರಿಸುತ್ತಾರೆ. ಈ ಘಟನೆಯನ್ನು ಆಧರಿಸಿ ‘ದಿ ಗೋಟ್ ಲೈಫ್’ ಹೆಸರಿನ ಪುಸ್ತಕ ಬರೆಯಲಾಗಿದೆ. ಅದನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ