AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಸಾಮಾನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ನವೆಂಬರ್​ 25: ಸಾಮನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ. ಮಕ್ಕಳ ಕಾರಣದಿಂದ ನಿಮಗೆ ಯಾವಕಡೆಯೂ ಹೋಗಲಾಗದು. ಇನ್ನೊಬ್ಬರ ಚಿಂತನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗಿ. ಹಾಗಾದರೆ ನವೆಂಬರ್​ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಸಾಮಾನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ
ಸಾಮಾನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ
TV9 Web
| Edited By: |

Updated on: Nov 25, 2024 | 12:15 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದಶಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವಿಷ್ಕಂಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 39 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ರಾತ್ರಿ 08:05 ರಿಂದ 09:30ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:55 ರಿಂದ ಮಧ್ಯಾಹ್ನ 12:20 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 01:45 ರಿಂದ 03:10 ರವರೆಗೆ.

ತುಲಾ ರಾಶಿ: ಏನೂ ಆಧಾರವಿಲ್ಲದೇ ನೀರಿನ‌ ಆಳವನ್ನು ನೋಡಲಾಗದು. ಅಧಿಕಾರದಲ್ಲಿ ಇದ್ದರೂ ಅದನ್ನು ನಿರ್ವಹಿಸುವ ಕ್ರಮವೂ ಗೊತ್ತಿರಬೇಕು. ಅಸೂಯೆಯಿಂದ ಏನನ್ನೋ ಸಾಧಿಸಲು ಹೋಗುವಿರಿ. ಅತಿಯಾದ ಆತ್ಮವಿಶ್ವಾಸವೇ ನಿಮ್ಮನ್ನು ಕೆಳಗಿಳಿಸಬಹುದು. ಸಾಮನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ. ಮಕ್ಕಳ ಕಾರಣದಿಂದ ನಿಮಗೆ ಯಾವಕಡೆಯೂ ಹೋಗಲಾಗದು. ಇನ್ನೊಬ್ಬರ ಚಿಂತನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗಿ. ನಿಮಗೆ ಗೊತ್ತಿರುವ ಕಾರ್ಯಕುಶಲತೆಯನ್ನು ಮೆಚ್ಚುಬರಲಿದೆ. ನೋವನ್ನು ಕೊಟ್ಟು ಅನಂತರ ಪಶ್ಚಾತ್ತಾಪ ಬಂದರೇನು? ಸಂಗಾತಿಗೆ ನಿಮ್ಮಿಂದ ಅಪರೂಪದ ಉಡುಗೊರೆಯು ಸಿಗಲಿದೆ.‌ ಬಿಟ್ಟ ಅಭ್ಯಾಸವನ್ನು ಪುನಃ ಬೆಳೆಸಿಕೊಳ್ಳುವಿರಿ. ನಿಮ್ಮ‌ ಸರಳತೆಯು ನಿಮಗೆ ಅಲ್ಪ ಯಶಸ್ಸನ್ನು ಕೊಡುವುದು. ಕೆಲವು ಕೆಲಸದ ಭರಾಟೆಯಲ್ಲಿ ಇಂದು ಸಮಯವು ನಿಮ್ಮದಾಗಿರದು. ಅಪರಿಚಿತರ ಮಾತು ನಿಮ್ಮನ್ನು ಒಳ್ಳೆಯ ಕಾರ್ಯಕ್ಕೆ ಪ್ರೇರಿಸಬಹುದು.

ವೃಶ್ಚಿಕ ರಾಶಿ: ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರಲಿದೆ. ನಿಮ್ಮ ಪ್ರತಿಭೆಯ ಪರಿಚಯು ನಿಮಗೂ ಇತರರಿಗೂ ಆಗುವುದು. ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ಮನಸ್ಸಿನ ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳಲು ಅಗತ್ಯ ವಿಧಾನವನ್ನು ರೂಪಿಸಿಕೊಳ್ಳುವಿರಿ. ಜಾಗರೂಕತೆಯಿಂದ ಮಾಡುವ ಕಾರ್ಯಕ್ಕೆ ತೊಂದರೆ ಬರುವುದು.‌ ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸಾಧ್ಯವಾಗಬಹುದು. ನಿಮ್ಮ ಅಸಹಜ ವರ್ತನೆಯಿಂದ ಸಂಗಾತಿಗೆ ಸಿಟ್ಟು ಬರಬಹುದು. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಾಯುತ್ತಿರುವಿರಿ. ನಿಮ್ಮ ನಕಾರಾತ್ಮಕ ವರ್ತನೆಯ ಬಗ್ಗೆ ಯಾರಾದರೂ ಹೇಳಿಯಾರು. ಮನೋರಂಜನೆ ಕಾರ್ಯದಲ್ಲಿ ನೀವು ಮಗ್ನರಾಗಿರುವಿರಿ. ಹಂಚಿಕೊಳ್ಳುವ ಸ್ವಭಾವ ಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸಿ ಅವಕಾಶದಿಂದ ವಂಚಿತರಾಗುವಿರಿ. ನಿಮ್ಮ ರಹಸ್ಯ ಪ್ರೇಮವು ಬಯಲಾದೀತು. ಯಾವುದೇ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ.

ಧನು ರಾಶಿ: ಸಂಗಾತಿಯಿಂದ ಮಾನಸಿಕ ಹಿಂಸೆಯಾಗುವ ಸಾಧ್ಯತೆ ಇಸೆ. ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಇಲ್ಲದಿದ್ದರೂ ಒತ್ತಾಯಕ್ಕೆ ಮಾಡಬೇಕಾದೀತು. ಸಂಗಾತಿಯ ನಡುವಿನ ಕಿತ್ತಾಟವು ತಾರಕಕ್ಕೆ ಹೋಗಬಹುದು. ಇಂದು ನಿಮಗೆ ಬಿಚ್ಚು ಮನಸ್ಸಿನಿಂದ ಮಾತನಾಡಲು ಇಷ್ಟವಾಗದು. ಆದಷ್ಟು ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ‌ ಮೌನವಾಗಿ ಇರುವಿರಿ. ಪಾಲುದಾರಿಕೆಗೆ ನಿಮ್ಮ ನಿರಾಕರಣೆ ಇರುವುದು. ವಿವಾಹಕ್ಕಾಗಿ ಬಹಳ ಶ್ರಮವಹಿಸಬೇಕಾದೀತು. ರೈತರು ಲಾಭದಾಯಕ ಕಾರ್ಯದಲ್ಲಿ ಮಗ್ನರಾಗುವರು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ವಿಧವಾದ ಪ್ರಯತ್ನವನ್ನು ಮಾಡುವಿರಿ. ಮಕ್ಕಳ ಜೊತೆ ಸಮಯ ಕಳೆಯಲು ಸಮಯದ ಅಭಾವ ಇರುವುದು. ನಷ್ಟವಾದುದನ್ನೇ ಇಂದು ಹೆಚ್ಚು ಚಿಂತಿಸುವಿರಿ. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ.

ಮಕರ ರಾಶಿ: ನಿಮ್ಮ ವ್ಯವಹಾರವನ್ನು ಶಿಸ್ತುಕ್ರಮಕ್ಕೆ ತರಬೇಕಾಗುವುದು. ಹಳೆಯ ವಸ್ತುಗಳನ್ನು ಮಾರಾಟ ಮಾಡಿದರೆ ಉತ್ತಮ‌ ಬೆಲೆ ಸಿಗುವುದು. ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ಅಧಿಕಾರಿಗಳಿಂದ ನಿಮಗೆ ಒತ್ತಡ ಬರಬಹುದು. ಕಛೇರಿಯ ಕಾರ್ಯವು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳನ್ನು ನೀವು ಮರೆಯುವಿರಿ. ನಿಮ್ಮವರೇ ಆದರೂ ಕಳೆದುಕೊಂಡ ನಂಬಿಕೆಯನ್ನು ಮತ್ತೆ ತೋರಿಸಲಾರಿರಿ. ವಿದ್ಯುತ್ ಉಪಕರಣದ ಖರೀದಿ ಮಾಡುವಿರಿ. ಹೊಸತನ್ನು ಕಲಿಯುವ ಆಸೆಯು ಇಲ್ಲವಾಗುವುದು. ನಿಮ್ಮದೇ ಚಿಂತನೆಯನ್ನು ಕೆಲಸದಲ್ಲಿ ಯೋಜಿಸಲಿದ್ದೀರಿ. ಯಾರ ಮಾತನ್ನೂ ಕೇಳುವ ಸಹನೆಯು ಬೇಕಾದೀತು. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬಾರದಿರುವುದು ಹಠದವನ್ನು ಉಂಟುಮಾಡೀತು. ಇಂದಿನ ಕೆಲಸವು ಸಮಯದ ಅಭಾವದಿಂದ ಪೂರ್ಣವಾಗದು. ವ್ಯವಹಾರದಲ್ಲಿ ಏರುಗತಿಯು ನಿಮಗೆ ಸಮಾಧಾನ ಕೊಡುವುದು.

ಕುಂಭ ರಾಶಿ: ಬೆಣ್ಣೆಯಂತಹ ನಿಮ್ಮ ಮಾತು ಎಲ್ಲರಿಗೂ ಇಷ್ಟವಾಗುವುದು. ನಿಮ್ಮನ್ನು ಯಾರಾದರೂ ರಾಜಕೀಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ನಿಮ್ಮನ್ನು ನೀವು ಬೆಳೆಸಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ವಾಹನ ದುರಸ್ತಿಯು ತುರ್ತಾಗಿ ಬರಬಹುದು. ನಿಮ್ಮದಲ್ಲದ್ದನ್ನು ಬಯಸುವಿರಿ. ಅತಿಯಾದ ಮೋಹದಿಂದ ತಪ್ಪು ಗ್ರಹಿಕೆ ಬರುವುದು. ಸಂಗಾತಿಗೆ ಹೇಳಬೇಕಾದುದನ್ನು ಹೇಳಲಾಗದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ವಿಜಯ ಪ್ರಾಪ್ತಿ. ಗೆಳೆಯರ ಸಹವಾಸವನ್ನು ಬಿಡುವುದು ಅನಿವಾರ್ಯವಾದೀತು. ಮುಖ್ಯಸ್ಥರಾಗಿದ್ದು ಯಾರ ವಿಚಾರದಲ್ಲಿಯೂ ಪಕ್ಷಪಾತವನ್ನು ಮಾಡುವುದು ಯೋಗ್ಯವಲ್ಲ. ನಿಮಗೆ ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೇಕೆನಿಸಬಹುದು. ಮನೆಯಿಂದ ದೂರವಿರಲು ಇಷ್ಟಪಡುವಿರಿ.‌ ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಏನೇ ಬಂದರೂ ಸಂತೋಷದಿಂದ ಸ್ವೀಕರಿಸಿ, ಆನಂದಿಸಿರಿ.

ಮೀನ ರಾಶಿ: ಹೊಸತನ್ನು ಏನಾದರೂ ಈ ದಿನ ನಿರೀಕ್ಷಿಸುವಿರಿ. ಬೇಸರದಲ್ಲಿ ಇರುವ ನಿಮಗೆ ಮತ್ತೆ ಬೇಸರ ತರಿಸುವ ಕೆಲಸವನ್ನು ಮಾಡಿಸಬಹುದು. ಮನೋವಿಕಾರದ ಕಾರಣ ಎಲ್ಲರಿಂದ ನಿಂದನೆ ಬರಬಹುದು. ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವು ಬರಬಹುದು. ಹಳೆಯ ಪ್ರೀತಿಯು ನಿಮ್ಮನ್ನು ಕಾಡಬಹುದು. ವಿನಯಶೀಲತೆಯು ಇಂದು ದುಃಖ ಕೊಡಬಹುದು. ಸಂಗಾತಿಯನ್ನು ನೀವೇ ಬೇಸರಿಸಿ ಬೆಣ್ಣೆ ಹಚ್ಚುವಿರಿ. ಇಂದು ನಿದ್ರೆಯನ್ನು ಅಧಿಕವಾಗಿ ಮಾಡುವಿರಿ. ಸಹೋದರರ ಜೊತೆಗಿನ ಮಾತುಕತೆ ಸಂತಸವನ್ನು ನೀಡುವುದು. ನೌಕರರಿಂದ ನಿಮ್ಮ ಕೆಲಸವು ಅನಾಯಾಸವಾಗಿ ಮುಗಿಯುವುದು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ಸ್ನೇಹಿತರ‌ ಜೊತೆ ಸುತ್ತಾಟ ಮಾಡುವಿರಿ. ಹೂಡಿಕೆಯಲ್ಲಿ ಸಮಾಧಾನವಿರದು. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ. ಸಾಲದ ಬಗ್ಗೆ ಭಯವಿರುವುದು.

Follow Us
TV9 Web
TV9 Web

TV9 Kannada

Read More
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?
ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು?
ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು?
2028ರ ಎಲೆಕ್ಷನ್ ಗೆಲ್ಲಲು ಜೋಶಿಗೆ ಸಾರಥ್ಯ?ಇದಕ್ಕೆ ಅವರು ಹೇಳಿದ್ದೇನು?
2028ರ ಎಲೆಕ್ಷನ್ ಗೆಲ್ಲಲು ಜೋಶಿಗೆ ಸಾರಥ್ಯ?ಇದಕ್ಕೆ ಅವರು ಹೇಳಿದ್ದೇನು?