‘ಇತ್ತೀಚೆಗೆ ನಾನು ಫ್ಯಾಮಿಲಿ ಮ್ಯಾನ್ ನಿರ್ದೇಶಕರನ್ನು ಭೇಟಿ ಮಾಡಿಲ್ಲ’; ಬೇಸರದ ಸುದ್ದಿ ಕೊಟ್ಟ ಪ್ರಿಯಾಮಣಿ

‘ದಿ ಫ್ಯಾಮಿಲಿ ಮ್ಯಾನ್ 3’ ಬರಲಿದೆ ಎಂಬುದು ಎರಡನೇ ಸರಣಿಯ ಕೊನೆಯಲ್ಲೇ ರಿವೀಲ್ ಆಗಿತ್ತು. ಆದರೆ, ಈವರೆಗೆ ಈ ಬಗ್ಗೆ ಅಪ್​ಡೇಟ್ ಸಿಕ್ಕಿಲ್ಲ. ‘ಜವಾನ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಿಯಾಮಣಿ ಅವರಿಗೆ ಈ ಬಗ್ಗೆ ಕೇಳಲಾಗಿದೆ. ಅವರು ಕೊಟ್ಟ ಉತ್ತರದಿಂದ ಫ್ಯಾನ್ಸ್ ಬೇಸರಗೊಂಡಿದ್ದಾರೆ.

‘ಇತ್ತೀಚೆಗೆ ನಾನು ಫ್ಯಾಮಿಲಿ ಮ್ಯಾನ್ ನಿರ್ದೇಶಕರನ್ನು ಭೇಟಿ ಮಾಡಿಲ್ಲ’; ಬೇಸರದ ಸುದ್ದಿ ಕೊಟ್ಟ ಪ್ರಿಯಾಮಣಿ
ಪ್ರಿಯಾಮಣಿ

Updated on: Sep 22, 2023 | 12:12 PM

ಮನೋಜ್ ಬಾಜ್​ಪಾಯ್ ಹಾಗೂ ಪ್ರಿಯಾಮಣಿ (Priyamani) ನಟನೆಯ ‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್ ಸಾಕಷ್ಟು ಗಮನ ಸೆಳೆದಿದೆ. ಈ ಸೀರಿಸ್​ನಲ್ಲಿ ಮನೋಜ್ ಬಾಜ್​ಪಾಯಿ ಅವರ ಮ್ಯಾನರಿಸಂ, ಡೈಲಾಗ್​ ಮತ್ತಿತ್ಯಾದಿ ವಿಚಾರಗಳು ಗಮನ ಸೆಳೆದಿವೆ. ಈಗಾಗಲೇ ‘ದಿ ಫ್ಯಾಮಿ ಮ್ಯಾನ್’ ಹಾಗೂ ‘ದಿ ಫ್ಯಾಮಿಲಿ ಮ್ಯಾನ್ 2’ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಮಧ್ಯೆ ಮೂರನೇ ಪಾರ್ಟ್ ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡಿದೆ. ಅಭಿಮಾನಿಗಳಿಗೆ ನಿರಾಸೆ ಆಗುವಂಥ ಉತ್ತರವನ್ನು ಪ್ರಿಯಾಮಣಿ ಕೊಟ್ಟಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್’ ಅಭಿಮಾನಿ ಬಳಗ ಸಾಕಷ್ಟು ದೊಡ್ಡದಿದೆ. ‘ದಿ ಫ್ಯಾಮಿಲಿ ಮ್ಯಾನ್ 3’ ಬರಲಿದೆ ಎಂಬುದು ಎರಡನೇ ಸರಣಿಯ ಕೊನೆಯಲ್ಲೇ ರಿವೀಲ್ ಆಗಿತ್ತು. ಆದರೆ, ಈವರೆಗೆ ಈ ಬಗ್ಗೆ ಅಪ್​ಡೇಟ್ ಸಿಕ್ಕಿಲ್ಲ. ‘ಜವಾನ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಿಯಾಮಣಿ ಅವರಿಗೆ ಈ ಬಗ್ಗೆ ಕೇಳಲಾಗಿದೆ. ಅವರು ಕೊಟ್ಟ ಉತ್ತರದಿಂದ ಫ್ಯಾನ್ಸ್ ಬೇಸರಗೊಂಡಿದ್ದಾರೆ.

‘ಫ್ಯಾಮಿಲಿ ಮ್ಯಾನ್ ಶೀಘ್ರವೇ ಆರಂಭ ಆಗಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಿ’ ಎಂದು ಹೇಳಿದ್ದಾರೆ. ಇದರ ಜೊತೆಗೆ ಬೇಸರದ ಸುದ್ದಿಯನ್ನೂ ನೀಡಿದ್ದಾರೆ. ‘ಫ್ಯಾಮಿಲಿ ಮ್ಯಾನ್ ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರನ್ನು ಇತ್ತೀಚೆಗೆ ಭೇಟಿ ಮಾಡಿಲ್ಲ. ಫರ್ಜಿ ಸರಣಿಯ ಕೆಲಸಗಳು ನಡೆಯುತ್ತಿದ್ದಾಗ ನಾನು ಅವರು ಮೀಟ್ ಮಾಡಿದ್ದೆ’ ಎಂದಿದ್ದಾರೆ ಅವರು.

ಸಾಮಾನ್ಯವಾಗಿ ಶೂಟಿಂಗ್ ಆರಂಭ ಆಗುತ್ತದೆ ಎಂದರೆ ಅದಕ್ಕೂ ಕೆಲ ತಿಂಗಳು ಮೊದಲು ಕಲಾವಿದರನ್ನು ಭೇಟಿ ಮಾಡಿ ನಿರ್ದೇಶಕರು ಡೇಟ್ಸ್ ಕೇಳುತ್ತಾರೆ. ಆದರೆ, ಪ್ರಿಯಾಮಣಿ ಅವರನ್ನು ನಿರ್ದೇಶಕರು ಈವರೆಗೆ ಸಂಪರ್ಕಿಸಲೇ ಇಲ್ಲ. ಅಂದರೆ, ಈ ಚಿತ್ರದ ಶೂಟಿಂಗ್ ಮತ್ತಷ್ಟು ವಿಳಂಬ ಆಗೋದು ಪಕ್ಕಾ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಫ್ಯಾಮಿಲಿ ಮ್ಯಾನ್ 3’ ಸರಣಿಗಾಗಿ ಕಾದು ಕುಳಿತವರಿಗೆ ಬ್ಯಾಡ್ ನ್ಯೂಸ್ ನೀಡಿದ ಮನೋಜ್ ಬಾಜ್​ಪಾಯಿ

ಕೆಲವು ವರದಿಗಳ ಪ್ರಕಾರ 2024ರ ಅಂತ್ಯದಲ್ಲಿ ‘ಫ್ಯಾಮಿಲಿ ಮ್ಯಾನ್ 3’ ಸರಣಿಯ ಶೂಟ್ ಆರಂಭ ಆಗಲಿದೆಯಂತೆ. ಆ ವರ್ಷದ ಕೊನೆಯಲ್ಲಿ ಸರಣಿ ರಿಲೀಸ್ ಆಗಬಹುದು. ವೈರಸ್ ವಿಚಾರದ ಬಗ್ಗೆ ಇದನ್ನು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸದ್ಯ ರಾಜ್ ಆ್ಯಂಡ್ ಡಿಕೆ ಇಂಗ್ಲಿಷ್​ ‘ಸಿಟಾಡೆಲ್’ನ ಭಾರತದ ವರ್ಷನ್​ಗಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ