ಪ್ರತಿ ದಿನವೂ ಒಂದಲ್ಲ ಒಂದು ವಿಷಯವನ್ನು ಜನರು ಸೆಲೆಬ್ರೇಟ್ ಮಾಡುತ್ತಾರೆ. ಇತ್ತೀಚೆಗೆ ಅಪ್ಪಂದಿರ ದಿನ, ಯೋಗ ದಿನ ಮುಗಿಯಿತು. ಅದರ ಬೆನ್ನಲ್ಲೇ ಸೆಲ್ಫೀ ದಿನ ಬಂದಿದೆ! ಹೌದು, ಇಂದು (ಜೂ.22) ರಾಷ್ಟ್ರೀಯ ಸೆಲ್ಫೀ ದಿನ. ಅಮೆರಿಕದಲ್ಲಿ ಇದನ್ನು ಆಚರಿಸಲಾಗುತ್ತಿದೆ. ಅಲ್ಲಿನ ಜನರು ಇಂದು ಬಗೆಬಗೆಯ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಂಡು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ.
ಅಮೆರಿಕದ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಕೂಡ ಅಮೆರಿಕದಲ್ಲೇ ಸೆಟ್ಲ್ ಆಗಿದ್ದಾರೆ. ಭಾರತಕ್ಕಿಂತಲೂ ಅವರು ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಬಾಲಿವುಡ್ಗಿಂತಲೂ ಹೆಚ್ಚಾಗಿ ಹಾಲಿವುಡ್ ಮಂದಿಯ ಜೊತೆ ಅವರ ಒಡನಾಟ ಬೆಳೆದಿದೆ. ಹಾಗೆಯೇ ಅಮೆರಿಕದ ಜನರ ಜೊತೆಗೆ ಅವರು ಬೆರೆತುಹೋಗಿದ್ದಾರೆ. ಹಾಗಾಗಿ, ಅಮೆರಿಕದಲ್ಲಿ ಇಂದು ಆಚರಿಸಲಾಗುತ್ತಿರುವ ‘ನ್ಯಾಷನಲ್ ಸೆಲ್ಫೀ ಡೇ’ ಅನ್ನು ಪಿಗ್ಗಿ ಕೂಡ ಸಂಭ್ರಮಿಸಿದ್ದಾರೆ.
ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್ ತೊಟ್ಟು, ಕೂಲಿಂಗ್ ಗ್ಲಾಸ್ ಧರಿಸಿ, ನಸು ನಗು ಬೀರುತ್ತಿರುವ ಭಂಗಿಯಲ್ಲಿ ಪ್ರಿಯಾಂಕಾ ಚೋಪ್ರಾ ಸೆಲ್ಫೀ ಕ್ಲಿಕ್ ಮಾಡಿಕೊಂಡಿದ್ದಾರೆ. ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ‘ರಾಷ್ಟ್ರೀಯ ಸೆಲ್ಫೀ ದಿನವನ್ನು ಸರಿಯಾಗಿ ಆಚರಿಸುವ ಸರಿಯಾದ ಏಕೈಕ ಮಾರ್ಗ ಇದು’ ಎಂದು ಅವರು ಆ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಚೋಪ್ರಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 64.6 ಮಿಲಿಯನ್ (6.46 ಕೋಟಿ) ಮಂದಿ ಫಾಲೋ ಮಾಡುತ್ತಾರೆ. ಪ್ರಿಯಾಂಕಾ ಈ ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅದನ್ನು 6 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ:
ನಾನು ಮಾಡಿರುವ ಹಲವು ಸಿನಿಮಾಗಳನ್ನು ಜನರು ನೋಡಿಯೇ ಇಲ್ಲ; ಪ್ರಿಯಾಂಕಾ ಚೋಪ್ರಾ