ಹೆಣ್ಣಿನ ಶಾಪ; ಈ ವಾರ ಮನೆಯಿಂದ ಹೊರ ಹೋಗೋ ಸ್ಪರ್ಧಿ ಶಮಂತ್?

ಕಳಪೆ ಪಟ್ಟ ಪಡೆದು ಜೈಲು ಸೇರಿದ ನಂತರದಲ್ಲಿ ಪ್ರಿಯಾಂಕಾ ಅವರನ್ನು ಶಮಂತ್​ ಮಾತನಾಡಿಸೋಕೆ ಬಂದಿದ್ದಾರೆ. ಆಗ ಪ್ರಿಯಾಂಕಾ ಸಿಡುಕಿನಿಂದಲೇ ಉತ್ತರಿಸಿದ್ದಾರೆ.

ಹೆಣ್ಣಿನ ಶಾಪ; ಈ ವಾರ ಮನೆಯಿಂದ ಹೊರ ಹೋಗೋ ಸ್ಪರ್ಧಿ ಶಮಂತ್?
ಬಿಗ್​ಬಾಸ್​ ಸ್ಪರ್ಧಿ ಶಮಂತ್​
Edited By:

Updated on: May 03, 2021 | 2:57 PM

ಶಮಂತ್​ ಬ್ರೋ ಗೌಡ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿದ್ದಾರೆ. ಎಲಿಮಿನೇಷನ್​ನಿಂದ ಜಸ್ಟ್​ ಬಚಾವ್​ ಆಗಿದ್ದ ಅವರು, ಒಂಬತ್ತನೇ ವಾರ ಅತ್ಯುತ್ತಮ ಪರ್ಫಾರ್ಮೆನ್ಸ್​ ತೋರಿ ಪದಕ ಗಳಿಸಿಕೊಂಡಿದ್ದಾರೆ. ಆದಾಗ್ಯೂ ಶಮಂತ್​ ಮೇಲೆ ಪ್ರಿಯಾಂಕಾ ತಿಮ್ಮೇಶ್​ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, 10ನೇ ವಾರ ನೀನೇ ಮನೆಯಿಂದ ಹೊರಹೋಗು ಎಂದು ಶಾಪ ಹಾಕಿದ್ದಾರೆ.

ಈ ವಾರ ಕಳಪೆ ಪಟ್ಟ ನೀಡುವಾಗ ಎಲ್ಲರೂ ಪ್ರಿಯಾಂಕಾ ತಿಮ್ಮೇಶ್​ ಹೆಸರನ್ನು ತೆಗೆದುಕೊಂಡರು. ಇದಕ್ಕೆ ಶಮಂತ್​ ಕೂಡ ಹೊರತಾಗಿರಲಿಲ್ಲ. ಪ್ರಿಯಾಂಕಾ ಯಾರ ಜತೆಯೂ ಅಷ್ಟಾಗಿ ಬೆರೆಯುತ್ತಿಲ್ಲ ಎನ್ನುವ ಕಾರಣ ನೀಡಿ ಅವರಿಗೆ ಕಳಪೆ ಪಟ್ಟ ಕಟ್ಟಿದರು ಶಮಂತ್. ಅತಿ ಹೆಚ್ಚು ವೋಟ್​ ಬಿದ್ದ ಕಾರಣ ಪ್ರಿಯಾಂಕಾ ಜೈಲು ಪಾಲಾದರು. ಇದು ಪ್ರಿಯಾಂಕಾಗೆ ಅವಮಾನ ತಂದಿದೆ. ಅಲ್ಲದೆ, ಈ ಬಗ್ಗೆ ಅವರು ಸಿಟ್ಟಾಗಿದ್ದಾರೆ.

ಕಳಪೆ ಪಟ್ಟ ಪಡೆದು ಜೈಲು ಸೇರಿದ ನಂತರದಲ್ಲಿ ಪ್ರಿಯಾಂಕಾ ಅವರನ್ನು ಶಮಂತ್​ ಮಾತನಾಡಿಸೋಕೆ ಬಂದಿದ್ದಾರೆ. ಆಗ ಪ್ರಿಯಾಂಕಾ ಸಿಡುಕಿನಿಂದಲೇ ಉತ್ತರಿಸಿದ್ದಾರೆ. ನಾನು ಜೈಲಿನಿಂದ ಹೊರ ಬಂದಮೇಲೆ ನಿನ್ನ ಜೊತೆ ಸೇರುವುದಿಲ್ಲ. ನನಗೆ ಇಷ್ಟಬಂದವರ ಜೊತೆಗೆ ನಾನು ಇರುತ್ತೇನೆ. ನಾನಿಲ್ಲಿಗೆ ಸಂಬಂಧಗಳನ್ನು ಹುಟ್ಟುಹಾಕೋಕೆ ಬಂದಿಲ್ಲ. ಹೊರ ಜಗತ್ತಿಗೆ ನಾನು ಏನು ಎಂಬುದನ್ನು ತೋರಿಸಬೇಕಿದೆ ಎಂದರು.

ಈ ಮಾತನ್ನು ಕೇಳಿ ಶಮಂತ್ ಕಂಗಾಲಾದರು. ಅಷ್ಟೇ ಅಲ್ಲ, ಬೆಣ್ಣೆ ಸವರೋಕೆ ಬಂದರು. ಆದರೆ, ಪ್ರಿಯಾಂಕಾ ಇದಕ್ಕೆ ಸೊಪ್ಪು ಹಾಕಲಿಲ್ಲ. ಮುಂದಿನ ವಾರವೇ ಈ ಮನೆಯಿಂದ ನೀನು ಹೊರಗೆ ಹೋಗು. ನಂದೇ ಶಾಪ. ನೀನು ಬಂದು 10ನೇ ವಾರಕ್ಕೆ ಇವಾಗ ಚೆನ್ನಾಗಿ ಆಡ್ತಾ ಇದ್ದಾನೆ, ಪರವಾಗಿಲ್ಲ ಎಂದು ಹೇಳಿಸಿಕೊಳ್ತೀಯಾ? ನಾಚಿಕೆ ಆಗಬೇಕು ನಿನಗೆ ಥೂ ಎಂದು ಬೈದರು.

ಅಂದಹಾಗೆ ಶಮಂತ್​ ಈ ವಾರ ನಾಮಿನೇಷನ್​ ಲಿಸ್ಟ್​ನಲ್ಲಿ ಇಲ್ಲ. ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ನಾಮಿನೇಟ್​ ಆಗಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗುತ್ತಾರೆ.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಒಂಬತ್ತನೇ ವಾರದ ಎಲಿಮಿನೇಷನ್​ಗೆ ಹೊಸ ಟ್ವಿಸ್ಟ್​!

Published On - 2:55 pm, Mon, 3 May 21

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us