‘ಸುಳ್ಳು ಹೇಳಿ, ಮೋಸ ಮಾಡಿದರು’: ಪುರಿ, ಚಾರ್ಮಿ ವಿರುದ್ಧ ನಿರ್ಮಾಪಕಿ ಆರೋಪ

ಕಳೆದ ಕೆಲ ವರ್ಷಗಳಿಂದ ಪುರಿ ಜಗನ್ನಾಥ್​​​ ದುರಾದೃಷ್ಟ ಬೆನ್ನು ಬಿದ್ದಿದ್ದೆ. ‘ಲೈಗರ್’ ಸೋಲಿನಿಂದ ಆರಂಭವಾದ ಅವರ ಸೋಲಿನ ಪಯಣ ಇನ್ನೂ ಅಂತ್ಯವಾಗಿಲ್ಲ. ಒಂದು ಕಾಲದಲ್ಲಿ ನಿರ್ಮಾಪಕರುಗಳಿಗೆ ಮೊಗೆ-ಮೊಗೆದು ಹಣ ಮಾಡಿಕೊಟ್ಟಿದ್ದ ಪುರಿಯ ಮೇಲೆ ಇದೀಗ ನಿರ್ಮಾಪಕಿ ಒಬ್ಬರು ಮೋಸ, ವಂಚನೆಯ ಆರೋಪ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಮತ್ತು ನಟಿ ಮಾಡಿರುವ ಮೋಸವೇನು? ಮಾಹಿತಿ ಇಲ್ಲಿದೆ...

‘ಸುಳ್ಳು ಹೇಳಿ, ಮೋಸ ಮಾಡಿದರು’: ಪುರಿ, ಚಾರ್ಮಿ ವಿರುದ್ಧ ನಿರ್ಮಾಪಕಿ ಆರೋಪ
Puri Charmi Chaitanya

Updated on: Sep 29, 2026 | 11:45 AM

ಪುರಿ ಜಗನ್ನಾಥ್ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ. ಎಸ್​​ಎಸ್ ರಾಜಮೌಳಿ ಸಹ ತಾವು ಪುರಿಯ ಅಭಿಮಾನಿ ಎಂದು ಹೇಳಿಕೊಂಡಿದ್ದರು. ರಾಜಮೌಳಿಯ ತಂದೆ ವಿಜಯೇಂದ್ರ ತಮ್ಮ ಮೆಚ್ಚಿನ ನಿರ್ದೇಶಕ ಪುರಿ ಎಂದು ಹೇಳಿದ್ದುಂಟು. ಆದರೆ ಕಳೆದ ಕೆಲ ವರ್ಷಗಳಿಂದ ಪುರಿ ಜಗನ್ನಾಥ್​​​ ದುರಾದೃಷ್ಟ ಬೆನ್ನು ಬಿದ್ದಿದ್ದೆ. ‘ಲೈಗರ್’ ಸೋಲಿನಿಂದ ಆರಂಭವಾದ ಅವರ ಸೋಲಿನ ಪಯಣ ಇನ್ನೂ ಅಂತ್ಯವಾಗಿಲ್ಲ. ಒಂದು ಕಾಲದಲ್ಲಿ ನಿರ್ಮಾಪಕರುಗಳಿಗೆ ಮೊಗೆ-ಮೊಗೆದು ಹಣ ಮಾಡಿಕೊಟ್ಟಿದ್ದ ಪುರಿಯ ಮೇಲೆ ಇದೀಗ ನಿರ್ಮಾಪಕಿ ಒಬ್ಬರು ಮೋಸ, ವಂಚನೆಯ ಆರೋಪ ಮಾಡಿದ್ದಾರೆ.

ಪುರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಒಟ್ಟಿಗೆ ಸಿನಿಮಾಗಳ ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ‘ಲೈಗರ್’ ಮೇಲೆ ಈ ಇಬ್ಬರೂ ಒಟ್ಟಿಗೆ ಬಂಡವಾಳ ಹೂಡಿದ್ದರು ಆ ಸಿನಿಮಾ ಅಟ್ಟರ್ ಫ್ಲಾಫ್ ಆಯ್ತು. ಬಳಿಕ ‘ಡಬಲ್ ಇಸ್ಮಾರ್ಟ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದರು. ಪುರಿ ಅವರೇ ನಿರ್ದೇಶನ ಮಾಡಿದರು. ಆ ಸಿನಿಮಾವನ್ನು ಪ್ರೈಂ ಶೋ ಎಂಟರ್ಟೈನ್​​ಮೆಂಟ್​​ನವರು ವಿತರಣೆ ಹಕ್ಕು ಖರೀದಿ ಮಾಡಿದ್ದರು. ಆದರೆ ಆ ಸಿನಿಮಾದ ಬಿಡುಗಡೆ ಸಮಸ್ಯೆಗೆ ಸಿಲುಕಿತ್ತು. ಆ ವೇಳೆ ಪುರಿ ಹಾಗೂ ಚಾರ್ಮಿ ತಮ್ಮ ಬಳಿ ಸುಳ್ಳು ಹೇಳಿ ಮೋಸ ಮಾಡಿದರು ಎಂದು ಪ್ರೈಂ ಎಂಟರ್ಟೈನ್​​ಮೆಂಟ್​​ ನಿರ್ಮಾಪಕಿ ಚೈತನ್ಯಾ ರೆಡ್ಡಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ತೆಲುಗು ಚಿತ್ರರಂಗದ ಬಗ್ಗೆ ವ್ಯಂಗ್ಯ ಮಾಡಿದ ಬಾಲಿವುಡ್ ನಿರ್ದೇಶಕ

ಹಳೆ ಸಿನಿಮಾದ (ಲೈಗರ್)ನ ಹಣ ಸೆಟಲ್ ಆಗುವವರೆಗೆ ‘ಡಬಲ್ ಇಸ್ಮಾರ್ಟ್’ ಬಿಡುಗಡೆ ಮಾಡುವುದಿಲ್ಲ ಎಂದು ಪ್ರದರ್ಶಕರು, ಲೋಕಲ್ ವಿತರಕರು ಪಟ್ಟು ಹಿಡಿದಿದ್ದರು. ಹಾಗಾಗಿ ಸಿನಿಮಾ ಬಿಡುಗಡೆ ಆಗುವುದು ಅಸಾಧ್ಯ ಆಗಿತ್ತು. ಆದರೆ ಪುರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ತಮ್ಮ ಬಳಿ ಬಂದು ಬೇಡಿಕೊಂಡರು. ನೀವು ಸಹಾಯ ಮಾಡಿ ಸಿನಿಮಾ ಬಿಡುಗಡೆ ಮಾಡಲಿಲ್ಲವೆಂದರೆ ನಮ್ಮ ವೃತ್ತಿ ಮತ್ತು ಜೀವ ಎರಡೂ ಹೋಗುತ್ತದೆ’ ಎಂದು ಬೇಡಿಕೊಂಡರು. ಹಾಗಾಗಿ ನಾವೇ ಹಣ ಸೆಟಲ್ ಮಾಡಿ ಸಿನಿಮಾ ಬಿಡುಗಡೆ ಮಾಡಿದೆವು’ ಎಂದು ಹೇಳಿದ್ದಾರೆ.

‘ಡಬಲ್ ಇಸ್ಮಾರ್ಟ್’ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟದ ಪ್ರದರ್ಶನ ಕಾಣಲಿಲ್ಲ. ಆ ಸಿನಿಮಾದ ವಿತರಣೆ ಮಾಡಿದ್ದರಿಂದ ಸುಮಾರು 35-40 ಕೋಟಿ ರೂಪಾಯಿಗಳನ್ನು ನಾವು ಕಳೆದುಕೊಂಡೆವು ಎಂದು ಚೈತನ್ಯಾ ರೆಡ್ಡಿ ಪಾಡ್​​ಕಾಸ್ಟ್​​ನಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಮಾಡಿಸಬೇಕೆಂದು ಹಣಕಾಸಿನ ವಿಷಯವಾಗಿ ಅವರು (ಪುರಿ ಮತ್ತು ಚಾರ್ಮಿ) ಸಾಕಷ್ಟು ಸುಳ್ಳುಗಳನ್ನು ಹೇಳಿದರು. ನಷ್ಟಭರಿಸಿಕೊಡುವುದಾಗಿ ಹೇಳಿದ್ದರು ಆದರೆ ಅದನ್ನೂ ಸಹ ಅವರು ಮಾಡಲಿಲ್ಲ’ ಎಂದಿದ್ದಾರೆ ಚೈತನ್ಯಾ ರೆಡ್ಡಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us