AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ’ ರೀ ರಿಲೀಸ್ ನೋಡುವವರಿಗೆ ಕಾದಿದೆ ಬಿಗ್ ಸರ್ಪ್ರೈಸ್

Bahubali movie re release: ‘ಬಾಹುಬಲಿ’ ಭಾರತೀಯ ಚಿತ್ರರಂಗ ಇತಿಹಾಸದಲ್ಲಿ ಪ್ರಮುಖ ಸಿನಿಮಾ. ಈ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷಗಳಾದ ಬೆನ್ನಲ್ಲೆ ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ವೀಕ್ಷಕರಿಗೆ ಹಲವು ಸರ್ಪ್ರೈಸ್​​ಗಳು ಇರಲಿವೆ ಎಂದು ಸಿನಿಮಾದ ನಿರ್ಮಾಪಕ ಶೋಭು ಯೆರ್ಲಗಡ್ಡ ಅವರು ಹೇಳಿದ್ದಾರೆ. ಏನು ಆ ಸರ್ಪ್ರೈಸ್​​ಗಳು.

‘ಬಾಹುಬಲಿ’ ರೀ ರಿಲೀಸ್ ನೋಡುವವರಿಗೆ ಕಾದಿದೆ ಬಿಗ್ ಸರ್ಪ್ರೈಸ್
Bahubali The Epic
ಮಂಜುನಾಥ ಸಿ.
|

Updated on:Oct 11, 2025 | 5:03 PM

Share

ಬಾಹುಬಲಿ’ ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಗಿವೆ. ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ ಅದು. ಬಾಕ್ಸ್​​ ಆಫೀಸ್​​ನಲ್ಲಿ ಭಾರಿ ದೊಡ್ಡ ದಾಖಲೆಗಳನ್ನು ಬರೆದ ಸಿನಿಮಾ ಅದು. ರಾಜಮೌಳಿ ನಿರ್ದೇಶಿಸಿದ ಸಿನಿಮಾದ ಎರಡು ಭಾಗಗಳು ಬಿಡುಗಡೆ ಆಗಿದ್ದವು, ಅಣ್ಣ-ತಮ್ಮಂದಿರ ಕತೆಯನ್ನು ಎರಡು ಭಾಗಗಳಲ್ಲಿ ರಾಜಮೌಳಿ ಹೇಳಿದ್ದರು. ಎರಡನೇ ಭಾಗದಲ್ಲಿ ಕತೆಯನ್ನು ಅಂತ್ಯಗೊಳಿಸಿದ್ದರು. ಸಿನಿಮಾ ಬಿಡುಗಡೆ ಆಗಿ 10 ವರ್ಷವಾದ ನೆನಪಿನಲ್ಲಿ ‘ಬಾಹುಬಲಿ’ ಸಿನಿಮಾ ಮರು ಬಿಡುಗಡೆ ಆಗಲಿದೆ.

‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್​​ಕ್ಲೂಷನ್’ ಸಿನಿಮಾ ಎರಡನ್ನೂ ಒಟ್ಟಿಗೆ ಅಂದರೆ ಎರಡೂ ಸಿನಿಮಾ ಸೇರಿಸಿ ಒಂದೇ ಸಿನಿಮಾ ಅನ್ನಾಗಿ ಮಾಡಿ ಮರು ಬಿಡುಗಡೆ ಮಾಡಲಾಗುತ್ತಿದೆ. ಸ್ವತಃ ನಿರ್ದೇಶಕ ಎಸ್​​ಎಸ್ ರಾಜಮೌಳಿ ಅವರೇ ಮುಂದೆ ನಿಂತು ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನು ಸರಿಯಾಗಿ ಎಡಿಟ್ ಮಾಡಿಸಿ, ಅನವಶ್ಯಕ ಎನಿಸಿದ ದೃಶ್ಯಗಳನ್ನು ತೆಗೆದು, ಕೆಲವೆಡೆ ವಾಯ್ಸ್ ಓವರ್​​​ಗಳನ್ನು ಸೇರಿಸಿ ಎರಡು ಸಿನಿಮಾಗಳನ್ನು ಒಂದೇ ಸಿನಿಮಾ ಅನ್ನಾಗಿ ಮಾಡಿದ್ದಾರೆ.

‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್​​ಕ್ಲೂಷನ್’ ಸಿನಿಮಾಗಳ ಒಟ್ಟು ಅವಧಿ ಐದು ಗಂಟೆಗೂ ಹೆಚ್ಚಾಗಿದೆ. ಈಗ ರಾಜಮೌಳಿ ಹಾಗೂ ತಂಡ ಈ ಅವಧಿಯನ್ನು 3:40 ನಿಮಿಷಕ್ಕೆ ಇಳಿಸಿದ್ದಾರೆ. ಈ ಸಿನಿಮಾಕ್ಕೆ ‘ಬಾಹುಬಲಿ: ದಿ ಎಪಿಕ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಮರು ಬಿಡುಗಡೆ ವೀಕ್ಷಿಸಲು ಹೋದವರಿಗೆ ಹಲವು ಸರ್ಪ್ರೈಸ್​​ಗಳು ಸಿಗಲಿವೆ ಎಂದು ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಹೇಳಿದ್ದಾರೆ.

ಇದನ್ನೂ ಓದಿ:ಮಹೇಶ್ ಬಾಬು ಸಿನಿಮಾಕ್ಕೆ ಬ್ರೇಕ್, ಮತ್ತೆ ‘ಬಾಹುಬಲಿ’ಗೆ ಕೈಹಾಕಿದ ರಾಜಮೌಳಿ

‘ಬಾಹುಬಲಿ’ ಸಿನಿಮಾದ ಮುಂದಿನ ಭಾಗ ಬರಬೇಕು ಎಂಬುದು ಅಭಿಮಾನಿಗಳ ಒತ್ತಾಯ ಆಗಿತ್ತು. ಇದೀಗ ನಿರ್ಮಾಪಕ ಶೋಭು ಯರ್ಲಗಡ್ಡ ಈ ಬಗ್ಗೆ ಮಾತನಾಡಿದ್ದು, ‘ಬಾಹುಬಲಿ 3’ ಸಿನಿಮಾ ಖಂಡಿತ ಬರಲಿದೆ ಎಂದಿದ್ದಾರೆ. ಅಲ್ಲದೆ ‘ಬಾಹುಬಲಿ: ದಿ ಎಪಿಕ್’ ಸಿನಿಮಾನಲ್ಲಿ ಅದರ ಹಿಂಟ್ ಇದೆ. ಅದು ಮಾತ್ರವೇ ಇನ್ನೂ ಹಲವು ಸರ್ಪ್ರೈಸ್​​ಗಳು ಸಿನಿಮಾನಲ್ಲಿ ಇರಲಿವೆ ಎಂದು ಶೋಭು ಹೇಳಿದ್ದಾರೆ. ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಅಕ್ಟೋಬರ್ 31ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Sat, 11 October 25

ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಶತಕ ಬಾರಿಸಿ ಇಶಾನ್ ಕಿಶನ್ ದಾಖಲೆ ಮುರಿದ ಪಾಕ್ ಆರಂಭಿಕ
ಶತಕ ಬಾರಿಸಿ ಇಶಾನ್ ಕಿಶನ್ ದಾಖಲೆ ಮುರಿದ ಪಾಕ್ ಆರಂಭಿಕ