Yuvarathnaa: ತೆಲುಗು, ತಮಿಳು, ಹಿಂದಿಯಲ್ಲೂ ಯುವರತ್ನ ದರ್ಬಾರು! ಅಮೇಜಾನ್ ಪ್ರೈಮ್​​ನಲ್ಲಿ ಅಪ್ಪು ಹವಾ

| Updated By: ganapathi bhat

Updated on: Apr 13, 2021 | 7:31 PM

Amazon Prime video : ಯುವರತ್ನ ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್​ ಮಾಡಿ ಎಂದು ಅಕ್ಕ-ಪಕ್ಕದ ರಾಜ್ಯಗಳಲ್ಲಿ ಇರುವ ಪುನೀತ್​ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅದನ್ನು ಹೊಂಬಾಳೆ ಫಿಲ್ಸ್ಮ್​ ಸಂಸ್ಥೆ ಈಡೇರಿಸಿದೆ.

Yuvarathnaa: ತೆಲುಗು, ತಮಿಳು, ಹಿಂದಿಯಲ್ಲೂ ಯುವರತ್ನ ದರ್ಬಾರು! ಅಮೇಜಾನ್ ಪ್ರೈಮ್​​ನಲ್ಲಿ ಅಪ್ಪು ಹವಾ
(ಯುವರತ್ನ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​)
Follow us on

ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿದೆ. ಈ ಚಿತ್ರಕ್ಕೆ ಎದುರಾಗಿದ್ದ ಅಡ್ಡಿ ಆತಂಕಗಳು ಒಂದೆರಡಲ್ಲ. ಯುವರತ್ನ ಬಿಡುಗಡೆಯಾದ ಸಮಯದಲ್ಲೇ ಕೊರೊನಾ ವೈರಸ್​ ಹಾವಳಿ ಹೆಚ್ಚಾಯಿತು. ಪೈರಸಿ​ ಕಾಟವನ್ನೂ ಈ ಸಿನಿಮಾ ಎದುರಿಸಬೇಕಾಯಿತು. ನಂತರ ಶೇ.50 ಆಸನ ಮಿತಿ ನಿಯಮ ಜಾರಿ ಆಯಿತು. ಇದೆಲ್ಲದರ ನಡುವೆಯೂ ಹೆಚ್ಚು ಜನರನ್ನು ತಲುಪುವ ಸಲುವಾಗಿ ಯುವರತ್ನ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿತು. ಆ ಸಂಬಂಧ ಇನ್ನೊಂದು ಹೊಸ ನ್ಯೂಸ್​ ಹೊರಬಿದ್ದಿದೆ.

ಏ.1ರಂದು ಯುವರತ್ನ ಸಿನಿಮಾ ತೆರೆಕಂಡಿತ್ತು. ಆದರೆ ಏ.9ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿತು. ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಇಷ್ಟು ಬೇಗ ಚಿತ್ರವನ್ನು ಓಟಿಟಿಗೆ ನೀಡಬಾರದಿತ್ತು ಎಂಬುದು ಪುನೀತ್​ ಅವರ ಅಪ್ಪಟ ಅಭಿಮಾನಿಗಳ ಅಭಿಪ್ರಾಯ. ಆದರೆ ಕೊರೊನಾ ಎರಡನೇ ಅಲೆ ಭೀತಿ ಇರುವ ಈ ಸಂದರ್ಭದಲ್ಲಿ ಚಿತ್ರತಂಡದ ಈ ನಿರ್ಧಾರವೇ ಸರಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಏ.9ರಂದು ಕೇವಲ ಕನ್ನಡ ವರ್ಷನ್​ ಮಾತ್ರ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿತ್ತು. ಈಗ ಪರಭಾಷೆ ಮಂದಿಗೂ ಸಿಹಿ ಸುದ್ದಿ ಸಿಕ್ಕಿದೆ.

ಬೇರೆ ಭಾಷೆಗಳಿಗೆ ಡಬ್​ ಮಾಡಿ ಎಂದು ಅಕ್ಕ ಪಕ್ಕದ ರಾಜ್ಯಗಳಲ್ಲಿ ಇರುವ ಪುನೀತ್​ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅದನ್ನು ಹೊಂಬಾಳೆ ಫಿಲ್ಸ್ಮ್​ ಸಂಸ್ಥೆ ಈಡೇರಿಸಿದೆ. ತೆಲುಗು, ಹಿಂದಿ ಮತ್ತು ತಮಿಳು ಭಾಷೆಗೆ ಯುವರತ್ನ ಡಬ್​ ಆಗಿದೆ. ಅಲ್ಲದೆ ಏ.16ರಿಂದ ಅಮೇಜಾನ್​ ಪ್ರೈಮ್​ನಲ್ಲಿ ಈ ಡಬ್ಬಿಂಗ್​ ವರ್ಷನ್​ ಪ್ರಸಾರ ಆರಂಭಿಸಲಿದೆ. ಆ ಮೂಲಕ ಪರಭಾಷೆ ಪ್ರೇಕ್ಷಕರನ್ನೂ ಪುನೀತ್​ ರಂಜಿಸಲಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ವಿದ್ಯಾರ್ಥಿಗಳಿಗೆ ಅಂಟಿರುವ ಡ್ರಗ್ಸ್​ ನಂಟು ಮುಂತಾದ ಗಂಭೀರ ವಿಷಯದ ಕುರಿತು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರು ಈ ಸಿನಿಮಾದಲ್ಲಿ ಮೆಸೇಜ್​ ನೀಡಿದ್ದಾರೆ. ಇದು ಎಲ್ಲ ರಾಜ್ಯಗಳ ಪ್ರೇಕ್ಷಕರಿಗೂ ಅನ್ವಯ ಆಗುವಂತಹ ವಸ್ತುವಿಷಯ. ಹಾಗಾಗಿ ದೇಶಾದ್ಯಂತ ಇರುವ ಸಿನಿಪ್ರಿಯರಿಗೆ ಮತ್ತು ಪರಭಾಷೆಯ ಯುವಜನತೆಗೆ ‘ಯುವರತ್ನ’ ಮನರಂಜನೆ ನೀಡಲಿದೆ.

ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಬಂಡವಾಳ ಹೂಡಿದೆ. ಪುನೀತ್​ ರಾಜ್​ಕುಮಾರ್​ಗೆ ನಾಯಕಿಯಾಗಿ ಸಾಯೇಶಾ ಸೈಗಲ್​ ನಟಿಸಿದ್ದಾರೆ. ಡಾಲಿ ಧನಂಜಯ, ಪ್ರಕಾಶ್​ ರೈ, ದಿಗಂತ್, ಸೋನು ಗೌಡ ಮುಂತಾದವರು ಇನ್ನುಳಿದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 23 ವರ್ಷದ ಯುವರತ್ನ ನಾಯಕಿ ಸಾಯೇಶಾ ಪತಿ ತಮಿಳಿನ ಸ್ಟಾರ್​ ಹೀರೋ; ಇಲ್ಲಿದೆ ಇವರ ಲವ್​ ಸ್ಟೋರಿ

Yuvarathnaa OTT Release: ಬಿಡುಗಡೆಯಾದ ಎಂಟೇ ಎಂಟು ದಿನಕ್ಕೆ ಅಮೇಜಾನ್​ ಪ್ರೈಂನತ್ತ ಮುಖ ಮಾಡಿದ ಯುವರತ್ನ; ಕೊರೊನಾ ಕಾಟದಿಂದ ಓಟಿಟಿಗೆ ಬಂದ ಚಿತ್ರ

(Puneeth Rajkumar starrer Yuvarathnaa movie Hindi Tamil Telugu dubbing version on Amazon Prime video)