‘Act 1978’ ಚಿತ್ರ ಮಿಸ್​ ಮಾಡಿಕೊಂಡವರಿಗೆ ಇಲ್ಲಿದೆ ಗುಡ್​ ನ್ಯೂಸ್​! ಮನೆಯಲ್ಲೇ ಕುಳಿತು ಸಿನಿಮಾ ನೋಡಿ

ಮಂಸೋರೆ ನಿರ್ದೇಶನದ ‘Act 1978’ ಚಿತ್ರ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಕೋವಿಡ್​-19 ಭೀತಿಯಿಂದ ಈ ಸಿನಿಮಾವನ್ನು ಅನೇಕರು ಚಿತ್ರಮಂದಿರದಲ್ಲಿ ನೋಡಲು ಹಿಂದೇಟು ಹಾಕಿದ್ದರು.

‘Act 1978’ ಚಿತ್ರ ಮಿಸ್​ ಮಾಡಿಕೊಂಡವರಿಗೆ ಇಲ್ಲಿದೆ ಗುಡ್​ ನ್ಯೂಸ್​! ಮನೆಯಲ್ಲೇ ಕುಳಿತು ಸಿನಿಮಾ ನೋಡಿ
ಆಕ್ಟ್​ 1978 ಸಿನಿಮಾ ಪೋಸ್ಟರ್​
Follow us
| Updated By: ganapathi bhat

Updated on: Mar 10, 2021 | 12:18 PM

ಲಾಕ್​ ಡೌನ್​ ಸಡಿಲಿಕೆ ಬಳಿಕ ದೊಡ್ಡ ದೊಡ್ಡ ಸ್ಟಾರ್​ ಸಿನಿಮಾಗಳು ರಿಲೀಸ್​ ಆಗಲು ಅನುಮಾನ ಪಡುತ್ತಿದ್ದವು. ಅಂಥ ಸಂದರ್ಭದಲ್ಲಿ ಧೈರ್ಯವಾಗಿ ಚಿತ್ರಮಂದಿರದಲ್ಲಿ ರಿಲೀಸ್​ ಆಗಿತ್ತು ‘ಆಕ್ಟ್​ 1978’ ಚಿತ್ರ. ಆದರೆ ಆಗಿನ್ನೂ ಕೊರೊನಾ ಲಸಿಕೆ ಲಭ್ಯವಿಲ್ಲದ ಕಾರಣ ಬಹುತೇಕರು ಥಿಯೇಟರ್​ಗೆ ಬರಲು ಭಯ ಪಟ್ಟುಕೊಂಡಿದ್ದರು. ಹಾಗಾಗಿ ಚಿತ್ರಮಂದಿರದಲ್ಲಿ ‘Act 1978’ ನೋಡಲು ಅನೇಕರಿಗೆ ಸಾಧ್ಯವಾಗಿರಲಿಲ್ಲ.

ಥಿಯೇಟರ್​ಗಳಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದವರು ಈಗ ಮನೆಯಲ್ಲೇ ಕುಳಿತು ನೋಡಬಹುದು. ಬಿಡುಗಡೆಯಾಗಿ ಎರಡೂವರೆ ತಿಂಗಳ ಬಳಿಕ ಓಟಿಟಿ ಪ್ಲಾಟ್​​ಫಾರ್ಮ್​ನಲ್ಲಿ ‘ಆಕ್ಟ್​ 1978’ ಚಿತ್ರ ವೀಕ್ಷಣೆಗೆ ಲಭ್ಯವಾಗುತ್ತಿದೆ. ಅಮೇಜಾನ್​ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದೆ. ಇದು ಚಿತ್ರಪ್ರೇಮಿಗಳಿಗೆ ಖುಷಿ ನೀಡಿದೆ.

‘ಹರಿವು’ ಮತ್ತು ‘ನಾತಿಚರಾಮಿ’ ಸಿನಿಮಾಗಳ ಬಳಿಕ ನಿರ್ದೇಶಕ ಮಂಸೋರೆ ಅವರು ‘Act 1978’ ಚಿತ್ರ ಮಾಡಿದರು. ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ಯಗ್ನಾ ಶೆಟ್ಟಿ ನಟಿಸಿದರು. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಬಿ. ಸುರೇಶ, ಸಂಚಾರಿ ವಿಜಯ್​, ಪ್ರಮೋದ್​ ಶೆಟ್ಟಿ, ರಾಘು ಶಿವಮೊಗ್ಗ, ಕೃಷ್ಣ ಹೆಬ್ಬಾಳೆ ಮುಂತಾದವರು ಅಭಿನಯಿಸಿರುವ ಈ ಸಿನಿಮಾ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಓಟಿಟಿ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಈ ಸಿನಿಮಾ ಲಭ್ಯವಾಗಿದೆ.

ತುಂಬ ಗರ್ಭಿಣಿಯೊಬ್ಬಳು ತನ್ನ ಗಂಡನ ಸಾವಿಗೆ ನ್ಯಾಯ ಹುಡುಕುವ ಕಥೆಯನ್ನು Act 1978 ಸಿನಿಮಾ ಹೊಂದಿದೆ. ಆ ಮೂಲಕ ಸರ್ಕಾರಿ ಅಧಿಕಾರಿಗಳ ಲಂಚಾವತಾರವನ್ನು ಬಯಲಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿದೆ. ಈ ಚಿತ್ರವನ್ನು ಕನ್ನಡ ಸಿನಿಮಾರಂಗದ ಅನೇಕ ಸೆಲೆಬ್ರಿಟಿಗಳು ಪ್ರಶಂಸಿಸಿದ್ದರು. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರು ಇಡೀ ತಂಡವನ್ನು ತಮ್ಮ ಮನೆಗೆ ಕರೆಸಿಕೊಂಡು ಅಭಿನಂದಿಸಿದ್ದರು. ಹಂಸಲೇಖ ಅವರು ಚಿತ್ರವನ್ನು ಹಾಡಿ ಹೊಗಳಿದ್ದರು.

ಇದನ್ನೂ ಓದಿ: ‘ಪ್ರಾಣ ಒತ್ತೆಯಿಟ್ಟು ಮಾಡಿದ ಸಿನಿಮಾಗೆ ಇಂಥ ಅನ್ಯಾಯ’! ನೋವು ತೋಡಿಕೊಂಡ ಖ್ಯಾತ ನಟ ಸಂಚಾರಿ ವಿಜಯ್​

ಲಾಕ್​ಡೌನ್ ನಂತರ ಬಿಡುಗಡೆಯಾಗಿ ಯಶಸ್ವಿ 50 ದಿನ ಪೂರೈಸಿದ ಆ್ಯಕ್ಟ್- 1978

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು