ಪವರ್​​ಸ್ಟಾರ್ ಪುನೀತ್ ರಾಜ್​​ಕುಮಾರ್​ಗೆ ಸಾವಿಲ್ಲ ಎಂದ ಸುಮಲತಾ ಅಂಬರೀಶ್​

| Updated By: ರಾಜೇಶ್ ದುಗ್ಗುಮನೆ

Updated on: Nov 08, 2021 | 5:58 PM

‘ದೊಡ್ಮನೆ ಹುಡುಗ’ ಸಿನಿಮಾದಲ್ಲಿ ಸುಮಲತಾ ಹಾಗೂ ಪುನೀತ್​ ಒಟ್ಟಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್​ ತಾಯಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಕಾರಣದಿಂದಲೂ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು.

ಪವರ್​​ಸ್ಟಾರ್ ಪುನೀತ್ ರಾಜ್​​ಕುಮಾರ್​ಗೆ ಸಾವಿಲ್ಲ ಎಂದ ಸುಮಲತಾ ಅಂಬರೀಶ್​
Follow us on

ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನ ಹೊಂದಿದ್ದಾರೆ ಎನ್ನುವ ವಿಚಾರವನ್ನು ಇನ್ನೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ನಟಿ, ಸಂಸದೆ ಸುಮಲತಾ ಅಂಬರೀಶ್​ (MP Sumalatha Ambareesh) ಅವರಿಗೂ ಈ ಘಟನೆ ತುಂಬಾನೇ ನೋವು ತಂದಿದೆ. ಅಕ್ಟೋಬರ್​ 30ರಂದು ಪುನೀತ್​ ಅಂತಿಮ ದರ್ಶನ ಪಡೆದ ಬಂದಿದ್ದರು ಸುಮಲತಾ. ಪುನೀತ್​ ಪತ್ನಿ ಅಶ್ವಿನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿದ್ದರು. ಈ ವೇಳೆ ಸುಮಲತಾ ತುಂಬಾನೇ ಭಾವುಕರಾಗಿದ್ದರು. ಈಗ ಪುನೀತ್​ ಬಗ್ಗೆ ಸುಮಲತಾ ಮಾತನಾಡಿದ್ದಾರೆ. ಈ ವೇಳೆ ಅವರು ಹೇಳಿದ ಮಾತು ಕೇಳಿ ಅಭಿಮಾನಿಗಳು ತುಂಬಾನೇ ಖುಷಿಪಟ್ಟಿದ್ದಾರೆ. ಸುಮಲತಾ ಅವರು ಹೇಳಿದ ಮಾತು ನಿಜ ಎಂದು ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

‘ಪವರ್​​ಸ್ಟಾರ್ ಪುನೀತ್ ರಾಜ್​​ಕುಮಾರ್​ಗೆ ಸಾವಿಲ್ಲ. ಅಪ್ಪು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತಾರೆ. ನಟ ಪುನೀತ್ ರಾಜ್​​ಕುಮಾರ್ ಯಾವಾಗಲೂ ಅಮರ. ಅಭಿಮಾನಿಗಳಲ್ಲಿ ಪುನೀತ್​​ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ’ ಎಂದು ಬೆಂಗಳೂರಲ್ಲಿ ಸುಮಲತಾ ಅಂಬರೀಶ್​ ಹೇಳಿಕೆ ನೀಡಿದ್ದಾರೆ.

‘ದೊಡ್ಮನೆ ಹುಡುಗ’ ಸಿನಿಮಾದಲ್ಲಿ ಸುಮಲತಾ ಹಾಗೂ ಪುನೀತ್​ ಒಟ್ಟಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್​ ತಾಯಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಕಾರಣದಿಂದಲೂ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಸಾಕಷ್ಟು ಕಾರ್ಯಕ್ರಮಗಳಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದಿದೆ.

ಪುನೀತ್​ ರಾಜ್​ಕುಮಾರ್​ ಕುಟುಂಬದವರು ಹಾಲು-ತುಪ್ಪ ಕಾರ್ಯ ನೆರವೇರಿಸಿದ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಡಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ದಿನ 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಸಮಾಧಿ ಬಳಿ ಬಂದು ನಮನ ಸಲ್ಲಿಸುತ್ತಿದ್ದಾರೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಅಪ್ಪುಗೆ ನಮಿಸುತ್ತಿದ್ದಾರೆ. ಇಂದು ಪುನೀತ್​ ರಾಜ್​ಕುಮಾರ್​ ಕುಟುಂಬದವರು 11ನೇ ದಿನದ ಕಾರ್ಯ ನೆರವೇರಿಸುತ್ತಿರುವ ಕಾರಣದಿಂದ ಬೆಳಗ್ಗೆ ಸಮಾಧಿ ಬಳಿ ಅಭಿಮಾನಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕುಟುಂಬದವರು ಕಾರ್ಯ ಮುಗಿಸಿದ ಬಳಿಕ, ಅಂದರೆ 12 ಗಂಟೆ ನಂತರ ಅಭಿಮಾನಿಗಳಿಗೆ ಎಂಟ್ರಿ ನೀಡಲಾಗಿತ್ತು.

ಇದನ್ನೂ ಓದಿ: ಪುನೀತ್​ ಅಂತಿಮ ದರ್ಶನ ಪಡೆದ ಸುಮಲತಾ ಅಂಬರೀಶ್​; ಕುಟುಂಬಕ್ಕೆ ಸಂಸದೆಯ ಸಾಂತ್ವನ

ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಪೂಜೆ ಸಲ್ಲಿಸಿ, ಗಳಗಳನೆ ಅತ್ತ ಕಾಲಿವುಡ್​ ನಟ ಸಿದ್ದಾರ್ಥ್​