‘ಲೈಗರ್​’ ಸೋತ ಬಳಿಕ ಮುಂಬೈ ಬಿಟ್ಟು ಬಂದ ನಿರ್ದೇಶಕ ಪುರಿ ಜಗನ್ನಾಥ್​ ಈಗ ಎಲ್ಲಿದ್ದಾರೆ?

| Updated By: ಮದನ್​ ಕುಮಾರ್​

Updated on: Sep 27, 2022 | 7:30 AM

Puri Jagannadh | Liger: ಚಿತ್ರರಂಗದಲ್ಲಿ ಪುರಿ ಜಗನ್ನಾಥ್​ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಾಗಿದ್ದರೂ ಕೂಡ ಅವರು ‘ಲೈಗರ್​’ ಸಿನಿಮಾದಲ್ಲಿ ಎಡವಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು.

‘ಲೈಗರ್​’ ಸೋತ ಬಳಿಕ ಮುಂಬೈ ಬಿಟ್ಟು ಬಂದ ನಿರ್ದೇಶಕ ಪುರಿ ಜಗನ್ನಾಥ್​ ಈಗ ಎಲ್ಲಿದ್ದಾರೆ?
ಪುರಿ ಜಗನ್ನಾಥ್
Follow us on

ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಸಿನಿಮಾ (Liger) ಗೆದ್ದೇ ಗೆಲ್ಲುತ್ತದೆ ಎಂದು ಚಿತ್ರತಂಡ ಸಖತ್​ ನಂಬಿಕೆ ಇಟ್ಟುಕೊಂಡಿತ್ತು. ಟ್ರೇಲರ್​ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಈ ಪರಿ ಭರವಸೆ ಇಟ್ಟುಕೊಳ್ಳಲಾಗಿತ್ತು. ವಿಜಯ್​ ದೇವರಕೊಂಡ (Vijay Deverakonda) ಅವರು ಸಿನಿಮಾ ಬಿಡುಗಡೆಗೂ ಮುನ್ನವೇ ಅದನ್ನು ಬ್ಲಾಕ್​ ಬಸ್ಟರ್​ ಎಂದು ಘೋಷಿಸಿದ್ದರು. ಅಷ್ಟರಮಟ್ಟಿಗೆ ಅವರಿಗೆ ಆತ್ಮವಿಶ್ವಾಸ ಇತ್ತು. ಆದರೆ ಅಂತಿಮವಾಗಿ ಆಗಿದ್ದೇ ಬೇರೆ. ಪುರಿ ಜಗನ್ನಾಥ್​ ನಿರ್ದೇಶನದ ಆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡುವಲ್ಲಿ ಸೋತಿತು. ಅದರ ಪರಿಣಾಮವಾಗಿ ಚಿತ್ರತಂಡದವರ ದಿನಚರಿ ಕೂಡ ಬದಲಾಯಿತು. ಪುರಿ ಜಗನ್ನಾಥ್​ (Puri Jagannadh) ಅವರು ಊರನ್ನೇ ಬದಲಿಸಬೇಕಾಯಿತು!

‘ಲೈಗರ್​’ ಸಿನಿಮಾ ಹಲವು ಭಾಷೆಯಲ್ಲಿ ಮೂಡಿಬಂತು. ಚಿತ್ರತಂಡ ಹೆಚ್ಚು ಒತ್ತು ನೀಡಿದ್ದು ಹಿಂದಿ ಭಾಷೆಗೆ. ಬಾಲಿವುಡ್​ನಲ್ಲಿ ವಿಜಯ್​ ದೇವರಕೊಂಡ ಅವರಿಗೆ ಈ ಚಿತ್ರದಿಂದ ಭದ್ರವಾದ ನೆಲೆ ಸಿಗುವಂತೆ ಮಾಡಬೇಕು ಎಂಬುದು ನಿರ್ದೇಶಕ ಪುರಿ ಜಗನ್ನಾಥ್​ ಅವರು ಪ್ಲ್ಯಾನ್​ ಆಗಿತ್ತು. ಅದಕ್ಕಾಗಿ ಅವರು ಮುಂಬೈನಲ್ಲೇ ಲಕ್ಷ ಲಕ್ಷ ರೂಪಾಯಿ ಬಾಡಿಗೆ ನೀಡಿ ಆಫೀಸ್​ ಮಾಡಿಕೊಂಡು, ಅದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ಆದರೆ ‘ಲೈಗರ್​’ ಸಿನಿಮಾ ಸೋತ ಬಳಿಕ ಅವರು ಅಲ್ಲಿಂದ ಕಾಲು ಕೀಳುವುದು ಅನಿವಾರ್ಯ ಆಯಿತು.

ದುಬಾರಿ ಬಾಡಿಗೆ ನೀಡುವ ಆ ಆಫೀಸ್​ ಬಾಗಿಲು ಮುಚ್ಚಿಕೊಂಡು, ಪುರಿ ಜಗನ್ನಾಥ್​ ಅವರು ಸದ್ದಿಲ್ಲದೇ ಮುಂಬೈ ತೊರೆದಿದ್ದಾರೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಅವರೀಗ ಗೋವಾದಲ್ಲಿದ್ದಾರೆ. ಅಲ್ಲಿ ತಮ್ಮ ತಂಡದ ಜೊತೆ ಸೇರಿಕೊಂಡು ಹೊಸ ಚಿತ್ರಕ್ಕಾಗಿ ಸ್ಕ್ರಿಪ್ಟ್​ ಬರೆಯುತ್ತಿದ್ದಾರೆ. ತಮ್ಮ ಮಗ ಆಕಾಶ್​ ನಟಿಸಲಿರುವ ಹೊಸ ಚಿತ್ರಕ್ಕಾಗಿ ಅವರು ಕಥೆ ಸಿದ್ಧಪಡಿಸುತ್ತಿದ್ದಾರೆ ಎಂಬ ಗಾಸಿಪ್​ ಹರಡಿದೆ.

ಇದನ್ನೂ ಓದಿ
‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ
Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Vijay Devarakonda: ಒಂದೇ ದಿನದಲ್ಲಿ 5 ಕೋಟಿ​ಗಿಂತ ಹೆಚ್ಚು ಬಾರಿ ವೀಕ್ಷಣೆ ಕಂಡ ‘ಲೈಗರ್​’ ಟ್ರೇಲರ್​

ಚಿತ್ರರಂಗದಲ್ಲಿ ಪುರಿ ಜಗನ್ನಾಥ್​ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಾಗಿದ್ದರೂ ಕೂಡ ಅವರು ‘ಲೈಗರ್​’ ಸಿನಿಮಾದಲ್ಲಿ ಎಡವಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅದ್ದೂರಿ ಮೇಕಿಂಗ್​ ಇದ್ದರೂ, ಕಥೆ ಚೆನ್ನಾಗಿಲ್ಲದಿದ್ದರೆ ಜನರು ಮೆಚ್ಚಿಕೊಳ್ಳುವುದಿಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಮುಂದಿನ ಚಿತ್ರಕ್ಕೆ ಕಥೆ ಬರೆಯುವಾಗ ಪುರಿ ಜಗನ್ನಾಥ್​ ಅವರು ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ.

‘ಲೈಗರ್’​ ಸಿನಿಮಾಗೆ ಪುರಿ ಜಗನ್ನಾಥ್​, ಕರಣ್​ ಜೋಹರ್​, ಚಾರ್ಮಿ ಕೌರ್​ ಕೂಡ ನಿರ್ಮಾಪಕರಾಗಿದ್ದರು. ಸಿನಿಮಾ ಸೋತ ಬಳಿಕ ಎಲ್ಲರೂ ಸೈಲೆಂಟ್​ ಆಗಿದ್ದಾರೆ. ತಮ್ಮ ಮುಂದಿನ ನಡೆ ಏನು ಎಂಬ ಬಗ್ಗೆ ಪುರಿ ಜಗನ್ನಾಥ್​ ಅವರು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.