2024ರ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ ‘ಪುಷ್ಪ 2’; ಬ್ರೇಕಿಂಗ್ ನ್ಯೂಸ್ ನೀಡಿದ ಅಲ್ಲು ಅರ್ಜುನ್
‘ದಿನಾಂಕ ಗುರುತು ಮಾಡಿಕೊಳ್ಳಿ. ವಿಶ್ವಾದ್ಯಂತ 2024ರ ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಗಲ್ಲಾಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲು ಪುಷ್ಪರಾಜ್ ಮತ್ತೆ ಬರುತ್ತಿದ್ದಾನೆ’ ಎಂಬ ಕ್ಯಾಪ್ಷನ್ ಜೊತೆಗೆ ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಆ ಮೂಲಕ ‘ಪುಷ್ಪ 2’ ಸಿನಿಮಾದ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ನಟ ಅಲ್ಲು ಅರ್ಜುನ್ (Allu Arjun) ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಭರದಿಂದ ಶೂಟಿಂಗ್ ನಡೆಯುತ್ತಿದೆ. ರಿಲೀಸ್ ದಿನಾಂಕ ತಿಳಿಯಲು ಫ್ಯಾನ್ಸ್ ಕಾತರದಿಂದ ಕಾದಿದ್ದರು. ‘ಪುಷ್ಪ 2’ ಸಿನಿಮಾ (Pushpa 2) ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.. 2024ರ ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ರಿಲೀಸ್ ಡೇಟ್ (Pushpa 2 Release Date) ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್’ ಸಿಹಿ ಸುದ್ದಿ ನೀಡಿದೆ. ಅಲ್ಲು ಅರ್ಜುನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾಗೆ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ.
‘ದಿನಾಂಕವನ್ನು ಗುರುತು ಮಾಡಿಕೊಳ್ಳಿ. ವಿಶ್ವಾದ್ಯಂತ 2024ರ ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಗಲ್ಲಾಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲು ಪುಷ್ಪರಾಜ್ ಮತ್ತೆ ಬರುತ್ತಿದ್ದಾನೆ’ ಎಂಬ ಕ್ಯಾಪ್ಷನ್ ಜೊತೆಗೆ ಹೊಸ ಪೋಸ್ಟ್ ಹಂಚಿಕೊಳ್ಳಲಾಗಿದೆ. ಆ ಮೂಲಕ ‘ಪುಷ್ಪ 2’ ಸಿನಿಮಾದ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
‘ಮೈತ್ರಿ ಮೂವೀ ಮೇಕರ್ಸ್’ ಪೋಸ್ಟ್:
Mark the Date ❤️🔥❤️🔥
15th AUG 2024 – #Pushpa2TheRule Grand Release Worldwide 🔥🔥
PUSHPA RAJ IS COMING BACK TO CONQUER THE BOX OFFICE 💥💥
Icon Star @alluarjun @iamRashmika @aryasukku #FahadhFaasil @ThisIsDSP @SukumarWritings @TSeries pic.twitter.com/LWbMbk3K5c
— Mythri Movie Makers (@MythriOfficial) September 11, 2023
2021ರ ಡಿಸೆಂಬರ್ 17ರಂದು ‘ಪುಷ್ಪ’ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಯಿತು. ಅದರ ಸೀಕ್ವೆಲ್ ಆಗಿ ಮೂಡಿಬರುತ್ತಿರುವ ‘ಪುಷ್ಪ 2’ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ಸಿನಿಮಾ ಮೂಡಿಬರಬೇಕು ಎಂಬ ಕಾರಣದಿಂದ ಸುಕುಮಾರ್ ಅವರು ಬಹಳ ಕಾಳಜಿ ವಹಿಸಿ ಶೂಟಿಂಗ್ ಮಾಡುತ್ತಿದ್ದಾರೆ. ಆದ್ದರಿಂದ ಈ ಸಿನಿಮಾದ ಕೆಲಸಗಳಿಗೆ ಸಮಯ ಹಿಡಿಯುತ್ತಿದೆ. ಈ ಮೊದಲೇ ಬಿಡುಗಡೆ ಆಗಿರುವ ಫಸ್ಟ್ ಲುಕ್ ಪೋಸ್ಟರ್ ಮತ್ತು ಫಸ್ಟ್ ಗ್ಲಿಂಪ್ಸ್ ವಿಡಿಯೋ ಸಖತ್ ಕ್ರೇಜ್ ಸೃಷ್ಟಿ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




