AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಕ್ರವಾರವೂ ‘ಪುಷ್ಪ 2’ ಚಿತ್ರಕ್ಕೆ ಬಂಪರ್ ಗಳಿಕೆ; ಶನಿವಾರ-ಭಾನುವಾರ ಬಂಗಾರದ ಬೆಳೆ ಗ್ಯಾರಂಟಿ

ಮೊದಲ ದಿನ ಅಂದರೆ ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶುಕ್ರವಾರ ಈ ಸಿನಿಮಾ 90.1 ಕೋಟಿ ರೂಪಾಯಿ ಗಳಿಸಿದೆ. ಇದು ವಾರದ ದಿನ ಆದರೂ ಸಿನಿಮಾಗೆ ಒಳ್ಳೆಯ ಗಳಿಕೆ ಆಗಿದೆ.

ಶುಕ್ರವಾರವೂ ‘ಪುಷ್ಪ 2’ ಚಿತ್ರಕ್ಕೆ ಬಂಪರ್ ಗಳಿಕೆ; ಶನಿವಾರ-ಭಾನುವಾರ ಬಂಗಾರದ ಬೆಳೆ ಗ್ಯಾರಂಟಿ
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Dec 07, 2024 | 7:43 AM

Share

‘ಪುಷ್ಪ 2’ ಚಿತ್ರ ಮೊದಲ ದಿನ ಭರ್ಜರಿ ಗಳಿಕೆ ಮಾಡಿತ್ತು. ಮೊದಲ ದಿನವೇ 175 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಈಗ ಎರಡನೇ ದಿನದ (ಡಿಸೆಂಬರ್ 6) ಲೆಕ್ಕಾಚಾರ ಸಿಕ್ಕಿದೆ. ‘ಪುಷ್ಪ 2’ ಸಿನಿಮಾ ಬಂಪರ್ ಕಲೆಕ್ಷನ್ ಮಾಡುತ್ತಿದೆ. ಹೀಗೆಯೇ ಮುಂದುವರಿದರೆ ‘ಬಾಹುಬಲಿ 2’ ಚಿತ್ರದ ಒಟ್ಟಾರೆ ಕಲೆಕ್ಷನ್ ದಾಖಲೆಯನ್ನು ‘ಪುಷ್ಪ 2’ ಸಿನಿಮಾ ಮುರಿದರೂ ಅಚ್ಚರಿ ಏನಿಲ್ಲ.

ಮೊದಲ ದಿನ ಅಂದರೆ ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶುಕ್ರವಾರ ಈ ಸಿನಿಮಾ 90.1 ಕೋಟಿ ರೂಪಾಯಿ ಗಳಿಸಿದೆ. ಇದು ವಾರದ ದಿನ ಆದರೂ ಸಿನಿಮಾಗೆ ಒಳ್ಳೆಯ ಗಳಿಕೆ ಆಗಿದೆ. ಈ ಮೂಲಕ ಭಾರತದ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಗಳಿಕೆ 265 ಕೋಟಿ ರೂಪಾಯಿ ಆಗಿದೆ. ಇದರಿಂದ ಮೈತ್ರಿ ಮೂವೀ ಮೇಕರ್ಸ್ ಸಖತ್ ಖುಷಿ ಪಟ್ಟಿದೆ.

‘ಪುಷ್ಪ 2’ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ ಭಾಷಾವಾರು ಗಳಿಕೆಯೂ ಸಿಕ್ಕಿದೆ. ತೆಲುಗಿನಿಂದ 27 ಕೋಟಿ ರೂಪಾಯಿ, ತಮಿಳಿನಿಂದ 5.5 ಕೋಟಿ ರೂಪಾಯಿ, ಹಿಂದಿಯಿಂದ 55 ಕೋಟಿ ರೂಪಾಯಿ, ಮಲಯಾಳಂನಿಂದ 1.9 ಕೋಟಿ ರೂಪಾಯಿ, ಕನ್ನಡದಿಂದ 60 ಲಕ್ಷ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಹಿಂದಿ ಭಾಗದಲ್ಲಿ ಚಿತ್ರಕ್ಕೆ ಸಿಂಹ ಪಾಲು ಸಿಕ್ಕಿದೆ.

ಒಟ್ಟಾರೆ ಕಲೆಕ್ಷನ್ ಪೈಕಿ ತೆಲುಗಿನಿಂದ 118 ಕೋಟಿ ರೂಪಾಯಿ, ಹಿಂದಿಯಿಂದ 125.3 ಕೋಟಿ ರೂಪಾಯಿ, ತಮಿಳಿನಿಂದ 13.2 ಕೋಟಿ ರೂಪಾಯಿ, ಕನ್ನಡದಿಂದ 1.6 ಕೋಟಿ ರೂಪಾಯಿ ಹಾಗೂ ಮಲಯಾಳಂನಿಂದ 6.85 ಕೋಟಿ ರೂಪಾಯಿ ಗಳಿಕೆ ಆಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ‘ಪುಷ್ಪ 2’ ದಾಖಲೆಯ ಕಲೆಕ್ಷನ್; ತೆಲುಗು ಸಿನಿಮಾ ನಮ್ಮಲ್ಲಿ ಇಷ್ಟೊಂದು ಗಳಿಸಿದ್ದು ಇದೇ ಮೊದಲು  

ಶನಿವಾರ ಹಾಗೂ ಭಾನುವಾರ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ನೀರಿಕ್ಷೆ ಇದೆ. ಈ ಚಿತ್ರ ದಿನ ಕಳೆದಂತೆ ಗಳಿಕೆ ಹೆಚ್ಚಿಸಿಕೊಳ್ಳುತ್ತಿದೆ. ಈ ವಾರ ಕಳೆಯುವುದರೊಳಗಾಗಿ ಸಿನಿಮಾ ಭಾರತದಲ್ಲೇ ಅನಾಯಾಸವಾಗಿ 500 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್