‘ಪುಷ್ಪ 2’ ಚಿತ್ರದಲ್ಲಿ ಶೇಖಾವತ್​ನ ಬದುಕಿಸೋದು ಯಾರು? ಲೀಕ್ ಆಯ್ತು ವಿಡಿಯೋ

ಫಹಾದ್ ಫಾಸಿಲ್ ಅವರು ಬನ್ವರ್​ಸಿಂಗ್ ಶೇಖಾವತ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪರಾಜ್ ಎದುರು ಸೋಲುವ ಈ ವ್ಯಕ್ತಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರುತ್ತಾನೆ. ಗೋಡೌನ್​ಗೆ ಬೆಂಕಿ ಹಚ್ಚಿಕೊಂಡು ಸಾಯುವ ದೃಶ್ಯ ‘ಪುಷ್ಪ 2’ ಚಿತ್ರದಲ್ಲಿ ಇದೆ. ನಂತರ ಏನಾಯ್ತು ಎಂಬ ವಿಚಾರವನ್ನು ಸಿನಿಮಾದಲ್ಲಿ ತೋರಿಸಿಲ್ಲ. ಅದಕ್ಕೆ ಮೂರನೇ ಭಾಗದಲ್ಲಿ ಉತ್ತರ ಸಿಗಲಿದೆ.

‘ಪುಷ್ಪ 2’ ಚಿತ್ರದಲ್ಲಿ ಶೇಖಾವತ್​ನ ಬದುಕಿಸೋದು ಯಾರು? ಲೀಕ್ ಆಯ್ತು ವಿಡಿಯೋ
ಫಹಾದ್ ಫಾಸಿಲ್
Edited By:

Updated on: Dec 11, 2024 | 6:06 PM

‘ಪುಷ್ಪ 2’ ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಇದೆ. ಮೊದಲ ಭಾಗ ಹಿಟ್ ಆದ ಬಳಿಕ ಎರಡನೇ ಪಾರ್ಟ್​ನ ಸಾಕಷ್ಟು ಎಚ್ಚರಿಕೆಯಿಂದ ಮಾಡಲಾಯಿತು. ಎರಡನೇ ಭಾಗದ ಕೊನೆಯಲ್ಲಿ ‘ಪುಷ್ಪ 3’ ಬರಲಿದೆ ಎಂಬ ಸ್ಪಷ್ಟ ಸೂಚನೆಯೊಂದಿಗೆ ಸಿನಿಮಾ ಕೊನೆ ಮಾಡಲಾಗಿದೆ. ಅಲ್ಲದೆ, ಎರಡನೇ ಭಾಗದಲ್ಲಿ ಮೂರನೇ ಭಾಗದ ದೃಶ್ಯಗಳು ಕೂಡ ಬಂದು ಹೋಗುತ್ತವೆ. ಈಗ ‘ಪುಷ್ಪ 3’ ಚಿತ್ರದ ದ್ರಶ್ಯವೊಂದು ವೈರಲ್ ಆಗಿದೆ.

ಫಹಾದ್ ಫಾಸಿಲ್ ಅವರು ಬನ್ವರ್​ಸಿಂಗ್ ಶೇಖಾವತ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪರಾಜ್ ಎದುರು ಸೋಲುವ ಈ ವ್ಯಕ್ತಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರುತ್ತಾನೆ. ಗೋಡೌನ್​ಗೆ ಬೆಂಕಿ ಹಚ್ಚಿಕೊಂಡು ಸಾಯುವ ದೃಶ್ಯ ‘ಪುಷ್ಪ 2’ ಚಿತ್ರದಲ್ಲಿ ಇದೆ. ನಂತರ ಏನಾಯ್ತು ಎಂಬ ವಿಚಾರವನ್ನು ಸಿನಿಮಾದಲ್ಲಿ ತೋರಿಸಿಲ್ಲ. ಅದಕ್ಕೆ ಮೂರನೇ ಭಾಗದಲ್ಲಿ ಉತ್ತರ ಸಿಗಲಿದೆ.

ಶೇಖವಾತ್ ಸತ್ತಿರುವುದಿಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶೇಖಾವತ್ ಗೋಡೌನ್ ಒಳಗೆ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗುತ್ತಿರುವಾಗ ಆತನನ್ನು ರಕ್ಷಣೆ ಮಾಡಲಾಗುತ್ತದೆ. ಬೆಂಕಿ ಆರಿಸಿ ಆತನ ಬದುಕುಳಿಸಲಾಗುತ್ತದೆ. ಈ ವಿಡಿಯೋನ ಲೀಕ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಇನ್ನು, ‘ಪುಷ್ಪ 2’ ಕ್ಲೈಮ್ಯಾಕ್ಸ್​ನಲ್ಲಿ ಬಾಂಬ್ ಇಡೋ ಕೆಲಸ ಆಗುತ್ತದೆ. ದೂರದಲ್ಲಿ ನಿಂತು ಯಾರೋ ಒಬ್ಬ ಬಾಂಬ್ ಬಟನ್ ಪ್ರೆಸ್ ಮಾಡುತ್ತಾನೆ. ಇದು ಕೂಡ ಶೇಖಾವತ್ ಎನ್ನಲಾಗಿದೆ. ಬಾಂಬ್ ಒತ್ತುವ ಕೈಗಳಲ್ಲಿ ಸುಟ್ಟ ಕಲೆಗಳಿವೆ. ಈ ಎಲ್ಲಾ ಕಾರಣದಿಂದ ಇದು ಶೇಖಾವತ್​ನ ಕೆಲಸ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ‘ಪುಷ್ಪ 2’ ಅಬ್ಬರಿಸುವಾಗಲೇ ಚೀನಾದಲ್ಲಿ ಭರ್ಜರಿ ಗಳಿಕೆ ಮಾಡಿದ ದಕ್ಷಿಣದ ಮತ್ತೊಂದು ಸಿನಿಮಾ

‘ಪುಷ್ಪ 2’ ಸಿನಿಮಾ ಈಗಾಗಲೇ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಕ್ಲೈಮ್ಯಾಕ್ಸ್ ಕೆಲವರಿಗೆ ಇಷ್ಟ ಆಗಿಲ್ಲ. ಸದ್ಯ ಮೂರನೇ ಭಾಗದ ಶೂಟಿಂಗ್ ಆರಂಭ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:58 pm, Wed, 11 December 24