Allu Arjun: ಗೆಲುವಿನ ನಗೆ ಬೀರಿ, ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ‘ಪುಷ್ಪ’; ಚಿತ್ರದ ಕಲೆಕ್ಷನ್ ಎಷ್ಟು?

Pushpa: The Rise Box Office Collection: ‘ಪುಷ್ಪ: ದಿ ರೈಸ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇದೀಗ ಹಲವು ದಾಖಲೆಗಳು ಚಿತ್ರದ ಪಾಲಾಗಿದ್ದು, ಚಿತ್ರತಂಡ ಸಖತ್ ಖುಷಿಯಾಗಿದೆ.

Allu Arjun: ಗೆಲುವಿನ ನಗೆ ಬೀರಿ, ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ‘ಪುಷ್ಪ’; ಚಿತ್ರದ ಕಲೆಕ್ಷನ್ ಎಷ್ಟು?
ಅಲ್ಲು ಅರ್ಜುನ್
Edited By:

Updated on: Jan 05, 2022 | 6:14 PM

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ: ದಿ ರೈಸ್’ ಗೆಲುವಿನ ನಗೆ ಬೀರಿದೆ. ಬಿಡುಗಡೆಗೂ ಮುನ್ನವೇ ಅಪಾರ ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ ಡಿಸೆಂಬರ್ 7ರಂದು ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಕೂಡ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಒಂದರ ಹಿಂದೊಂದು ದಾಖಲೆ ಚಿತ್ರದ ಪಾಲಾಗಿದೆ. ಹೌದು. ಪ್ರಸ್ತುತ ಮೂರನೇ ವಾರದ ಪ್ರದರ್ಶನ ಕಾಣುತ್ತಿರುವ ‘ಪುಷ್ಪ’ ಹೊಸ ಮೈಲಿಗಲ್ಲು ತಲುಪಿದೆ. ಇತ್ತೀಚೆಗೆ ಚಿತ್ರ ₹ 300 ಕೋಟಿ ಕ್ಲಬ್ ಸೇರಿದೆ. ಕುತೂಹಲದ ಸಂಗತಿಯೆಂದರೆ ಈ ಸಾಧನೆ ಮಾಡಿದ ದಕ್ಷಿಣ ಭಾರತದ ಕೇವಲ ಆರನೇ ಚಿತ್ರ ‘ಪುಷ್ಪ’. ಈ ಮೂಲಕ ಸುಕುಮಾರ್ ನಿರ್ದೇಶನದ ಚಿತ್ರತಂಡ ಅಪರೂಪದ ದಾಖಲೆ ಮಾಡಿದ್ದು, ಗೆಲುವಿನ ನಗೆ ಬೀರಿದೆ.

‘ಪುಷ್ಪ’ ಚಿತ್ರದ ಹಿಂದಿ ಅವತರಣಿಕೆ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದ್ದು, ರಣವೀರ್ ಸಿಂಗ್ ಹಾಗೂ ದೀಪಿಕಾ ನಟನೆಯ ‘83’ ಚಿತ್ರಕ್ಕೆ ಭರ್ಜರಿ ಪೈಪೋಟಿ ನೀಡುತ್ತಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಕಾಂಬಿನೇಷನ್ ಜನರಿಗೆ ಪ್ರಿಯವಾಗಿದ್ದು, ಉತ್ತರ ಭಾರತದಲ್ಲಿ ಗಳಿಕೆ ಏರಲು ಬಹುಮುಖ್ಯ ಕಾರಣ ಎನ್ನಲಾಗಿದೆ. ಇದರೊಂದಿಗೆ ಹೊಸ ವರ್ಷ ಹಾಗೂ ನಂತರದ ವೀಕೆಂಡ್ ಕೂಡ ಕಲೆಕ್ಷನ್ ಏರಲು ಕಾರಣವಾಗಿದೆ.

ಜನವರಿಯಲ್ಲಿ ಮೂರು ಬಿಗ್ ಬಜೆಟ್ ಚಿತ್ರಗಳು ತೆರೆ ಕಾಣುವುದು ಮುಂದೂಡಲ್ಪಟ್ಟಿವೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​​ಆರ್​’, ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಹಾಗೂ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರಗಳು ಕೊರೊನಾ ಕಾರಣದಿಂದ ಪೋಸ್ಟ್​ಪೋನ್ ಆಗಿವೆ. ಇಲ್ಲದಿದ್ದರೆ ಈ ಚಿತ್ರಗಳ ಬುಕಿಂಗ್ ಹಾಗೂ ಚಿತ್ರಮಂದಿರಗಳ ಲಭ್ಯತೆಯಲ್ಲಿ ‘ಪುಷ್ಪ’ದ ಕಲೆಕ್ಷನ್ ಡೌನ್ ಆಗುತ್ತಿತ್ತು. ಈಗ ಯಾವುದೇ ಅಡೆತಡೆಯಿಲ್ಲದೇ ‘ಪುಷ್ಪ’ ಪ್ರದರ್ಶನ ಕಾಣುತ್ತಿದೆ. ಬಹುತೇಕ ಕಡೆ ಅರ್ಧಪ್ರತಿಶತ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಚಿತ್ರ ಒಳ್ಳೆಯ ಪ್ರದರ್ಶನವನ್ನೇ ಕಾಣುತ್ತಿರುವುದು ತಂಡದ ಸಂತಸ ಹೆಚ್ಚಾಗಲು ಕಾರಣವಾಗಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಎರಡನೇ ಭಾಗಕ್ಕೆ ಸಿದ್ಧತೆ ನಡೆಸುತ್ತಿದ್ದು, ಫೆಬ್ರವರಿಯಿಂದ ಚಿತ್ರೀಕರಣ ಆರಂಭಿಸುವ ನಿರೀಕ್ಷೆ ಇದೆ.

ಓಟಿಟಿಯಲ್ಲಿ ಪುಷ್ಪ, ಜನವರಿ 7ರಿಂದ ಪ್ರಸಾರ:
ದೇಶಾದ್ಯಂತ ಕೊರೊನಾ​ ಪ್ರಕರಣಗಳು ಏರುತ್ತಿರುವುದರಿಂದ ಒಂದು ವರ್ಗದ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಲು ಹಿಂಜರಿದಿದ್ದರು. ಅವರೆಲ್ಲರೂ ಈಗ ಮನೆಯಲ್ಲೇ ‘ಪುಷ್ಪ’ ಚಿತ್ರ ನೋಡಬಹುದು. ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಜನವರಿ 7ರಿಂದ ಪುಷ್ಪ ಪ್ರಸಾರವಾಗಲಿದೆ. ಈ ಕುರಿತು ಅಧಿಕೃತ ಮಾಹಿತಿಯನ್ನು ಅಮೆಜಾನ್ ನೀಡಿದೆ.

ಇದನ್ನೂ ಓದಿ:

ಮನೆಯಲ್ಲಿ ಕುಳಿತು ನೋಡಬಹುದು ‘ಪುಷ್ಪ’ ಚಿತ್ರ; ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್​ಗೆ ದಿನಾಂಕ ನಿಗದಿ

Sonu Nigam: ಕುಟುಂಬವೇ ಕೊವಿಡ್​ಗೆ ತುತ್ತಾದರೂ ಮರೆಯಾಗಿಲ್ಲ ಸೋನು ನಿಗಮ್ ಹಾಸ್ಯಪ್ರಜ್ಞೆ; ಅಷ್ಟಕ್ಕೂ ಗಾಯಕ ಹೇಳಿದ್ದೇನು? 

Shubha Poonja: ಸಿಂಪಲ್ ಆಗಿ ಗೆಳೆಯ ಸುಮಂತ್ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಟಿ ಶುಭಾ ಪೂಂಜ