‘ಟಾಕ್ಸಿಕ್’ ಸಿನಿಮಾ ಬಗ್ಗೆ ಆರ್ ಚಂದ್ರು ಟ್ವೀಟ್, ನಿರ್ದೇಶಕ ಹೇಳಿದ್ದೇನು?

R Chandru film: ಯಶ್, ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಾಗಾಗಿಯೇ ಇದನ್ನು ಕೇವಲ ಸಿನಿಮಾ ಎಂದು ನೋಡದೆ, ಕನ್ನಡದ ಹೆಮ್ಮೆ ಎಂಬಂತೆ ನೋಡಲಾಗುತ್ತಿದೆ. ಆದರೆ ಅಲ್ಲಲ್ಲಿ ಕೆಲವರು ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೆ ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು, ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.

‘ಟಾಕ್ಸಿಕ್’ ಸಿನಿಮಾ ಬಗ್ಗೆ ಆರ್ ಚಂದ್ರು ಟ್ವೀಟ್, ನಿರ್ದೇಶಕ ಹೇಳಿದ್ದೇನು?
R Chandru Toxic

Updated on: Aug 27, 2026 | 5:45 PM

ಟಾಕ್ಸಿಕ್’ (Toxic) ಸಿನಿಮಾ ಮೊದಲ ದಿನ ಅದ್ಧೂರಿ ಗಳಿಕೆ ಮಾಡಿದೆ. ‘ಟಾಕ್ಸಿಕ್’ ಕೇವಲ ಸಿನಿಮಾ ಅಲ್ಲ, ಕನ್ನಡಗರ ಹೆಮ್ಮೆ ಎಂಬ ಮಾತುಗಳು, ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ. ‘ಟಾಕ್ಸಿಕ್’ ಕನ್ನಡದಲ್ಲಿ ನಿರ್ಮಾಣವಾದ ಈ ವರೆಗಿನ ಅತಿ ದೊಡ್ಡ ಬಜೆಟ್​ನ, ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾದ ಸಿನಿಮಾ ಎನಿಸಿಕೊಂಡಿದೆ. ಯಶ್, ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಾಗಾಗಿಯೇ ಇದನ್ನು ಕೇವಲ ಸಿನಿಮಾ ಎಂದು ನೋಡದೆ, ಕನ್ನಡದ ಹೆಮ್ಮೆ ಎಂಬಂತೆ ನೋಡಲಾಗುತ್ತಿದೆ. ಆದರೆ ಅಲ್ಲಲ್ಲಿ ಕೆಲವರು ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೆ ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು, ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.

‘ಪ್ರೀತಿಯ ಯಶ್, ‘ಟಾಕ್ಸಿಕ್’, ಇದು ಕೇವಲ ಸಿನಿಮಾ ಅಲ್ಲ. ಕನ್ನಡಿಗನೊಬ್ಬ ಜಗತ್ತನ್ನೇ ಗೆಲ್ಲುವ ಪ್ರಯತ್ನ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗನೂ ಇದಕ್ಕೆ ಪ್ರಶಂಸಿಸಬೇಕು, ಜೊತೆಗೆ ನಿಲ್ಲಬೇಕು. ನಿಮ್ಮ ಪ್ರಯತ್ನಕ್ಕೆ ಶಭಾಷ್’ ಎಂದಿದ್ದಾರೆ ಆರ್ ಚಂದ್ರು. ಆ ಮೂಲಕ, ‘ಟಾಕ್ಸಿಕ್’ ಸಿನಿಮಾ ಕನ್ನಡಿಗನೊಬ್ಬನ ಅದ್ಭುತ ಸಾಹಸ, ಈ ಸಾಹಸಕ್ಕೆ ನಾವೆಲ್ಲ ಬೆಂಬಲ ನೀಡಬೇಕು, ಪ್ರತಿಯೊಬ್ಬ ಕನ್ನಡಿಗನೂ ಸಿನಿಮಾ ಅನ್ನು ಪ್ರಶಂಸಿಸಬೇಕು ಎಂದಿದ್ದಾರೆ.

ಹಿರಿಯ ನಿರ್ದೇಶಕ ಆರ್ ಚಂದ್ರು, ಸಹ ಕನ್ನಡ ಸಿನಿಮಾ ಅನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹಿಂದೆಲ್ಲ ಮಾತನಾಡಿದ್ದರು. ಅವರು ತಮ್ಮ ‘ಕಬ್ಜ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​​​ನಲ್ಲಿ ನಿರ್ದೇಶನ ಮತ್ತು ನಿರ್ಮಾಣ ಸಹ ಮಾಡಿದ್ದರು. ‘ಕಬ್ಜ’ ಸಿನಿಮಾಕ್ಕೆ ಯಶ್ ಅವರ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾವನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದರು. ಆ ವಿಷಯವನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಅವರು ಹೇಳಿಕೊಂಡಿದ್ದರು ಸಹ. ಇದೀಗ ಅವರು ಮತ್ತೊಮ್ಮೆ ‘ಟಾಕ್ಸಿಕ್’ ಬೆಂಬಲಕ್ಕೆ ನಿಂತಿದ್ದು, ಇದು ಕರ್ನಾಟಕದ ಹೆಮ್ಮೆಯ ಸಿನಿಮಾ ಎಂದಿದ್ದಾರೆ. ಚಂದ್ರು ಮಾತ್ರವೇ ಅಲ್ಲದೆ ಕನ್ನಡದ ಹಲವು ಸಿನಿಮಾ ನಟ, ನಿರ್ದೇಶಕರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದರು. ಇದೀಗ ಸಿನಿಮಾಕ್ಕೆ ಸಾಕಷ್ಟು ಪ್ರಶಂಸೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ಅವರುಗಳಲ್ಲಿ ಆರ್ ಚಂದ್ರ ಸಹ ಒಬ್ಬರು.

ಇದನ್ನೂ ಓದಿ:ಮೊದಲ ದಿನ 140 ಕೋಟಿ ಗಳಿಸಿದ ‘ಟಾಕ್ಸಿಕ್’ ಇದರಲ್ಲಿ ನಿರ್ಮಾಪಕನಿಗೆ ಸಿಗುವುದೆಷ್ಟು?

‘ಟಾಕ್ಸಿಕ್’ ಸಿನಿಮಾ ನಿನ್ನೆಯಷ್ಟೆ (ಆಗಸ್ಟ್ 26) ಬಿಡುಗಡೆ ಆಗಿದ್ದು, ಸಿನಿಮಾ ಮೊದಲ ದಿನವೇ ವರ್ಲ್ಡ್ ಬಾಕ್ಸ್ ಆಫೀಸ್​​ನಲ್ಲಿ 140 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರವೇ 117 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಸಿನಿಮಾ ಅನ್ನು ಗೀತೂ ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us