AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಸ್ಟ್ ಡೇ ಕಲೆಕ್ಷನ್: ದಾಖಲೆ ಬರೆದ ‘ಟಾಕ್ಸಿಕ್’ಗೆ ಎಷ್ಟನೇ ಸ್ಥಾನ

Toxic first day collection: ಮೊದಲ ದಿನ ‘ಟಾಕ್ಸಿಕ್’ ಸಿನಿಮಾ ಭಾರತದಲ್ಲಿ 117 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಇದು ಸಾಧಾರಣ ಮೊತ್ತವಲ್ಲ. ಮೊದಲ ದಿನ ಭರ್ಜರಿ ಗಳಿಕೆ ಮಾಡುವ ಮೂಲಕ ‘ಟಾಕ್ಸಿಕ್’ ಸಿನಿಮಾ ಮೊದಲ ದಿನ ದೊಡ್ಡ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಮಾತ್ರವಲ್ಲ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಹಿಂದಿಕ್ಕಿ ಉತ್ತಮ ಸ್ಥಾನವನ್ನೇ ಅಲಂಕರಿಸಿದೆ.

ಫಸ್ಟ್ ಡೇ ಕಲೆಕ್ಷನ್: ದಾಖಲೆ ಬರೆದ ‘ಟಾಕ್ಸಿಕ್’ಗೆ ಎಷ್ಟನೇ ಸ್ಥಾನ
ಟಾಕ್ಸಿಕ್
ಮಂಜುನಾಥ ಸಿ.
|

Updated on: Aug 27, 2026 | 4:23 PM

Share

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ
  • ಬಾಕ್ಸ್ ಆಫೀಸ್​​ ಗಳಿಕೆಯಲ್ಲಿ ದಾಖಲೆ ಮಾಡಿದೆ.
  • ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ ಟಾಕ್ಸಿಕ್​ಗೆ ಎಷ್ಟನೇ ಸ್ಥಾನ

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ನಿನ್ನೆ ಭಾರಿ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಮೊದಲ ದಿನ ವಿಶ್ವದಾದ್ಯಂತ 140 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಭಾರತದಲ್ಲಿ ಸಹ ಮೊದಲ ದಿನವೇ 100 ಕೋಟಿ ಗಳಿಕೆ ದಾಟಿದೆ ಈ ಸಿನಿಮಾ. ಮೊದಲ ದಿನ ‘ಟಾಕ್ಸಿಕ್’ ಸಿನಿಮಾ ಭಾರತದಲ್ಲಿ 117 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಇದು ಸಾಧಾರಣ ಮೊತ್ತವಲ್ಲ. ಮೊದಲ ದಿನ ಭರ್ಜರಿ ಗಳಿಕೆ ಮಾಡುವ ಮೂಲಕ ‘ಟಾಕ್ಸಿಕ್’ ಸಿನಿಮಾ ಮೊದಲ ದಿನ ದೊಡ್ಡ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಮಾತ್ರವಲ್ಲ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಹಿಂದಿಕ್ಕಿ ಉತ್ತಮ ಸ್ಥಾನವನ್ನೇ ಅಲಂಕರಿಸಿದೆ.

ಹಿಂದಿ ಮಾರುಕಟ್ಟೆಗಳಿಂದ ಸಿಕ್ಕ ದೊಡ್ಡ ಕೊಡುಗೆಯೊಂದಿಗೆ ಮೊದಲ ದಿನವೇ ಭಾರತದಲ್ಲಿ 117 ಕೋಟಿ ರೂ. ಗಳಿಕೆ ಮಾಡಿದೆ ‘ಟಾಕ್ಸಿಕ್’. ಆ ಮೂಲಕ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ 6ನೇ ಅತಿ ದೊಡ್ಡ ಚಿತ್ರ ಎನಿಸಿಕೊಂಡಿದೆ ಟಾಕ್ಸಿಕ್. ವಿಶೇಷವೆಂದರೆ ಯಶ್ ಅವರೇ ನಟಿಸಿದ್ದ ‘ಕೆಜಿಎಫ್ 2’ ಸಿನಿಮಾವನ್ನು ‘ಟಾಕ್ಸಿಕ್’ಗೆ ಹಿಂದಿಕ್ಕಲು ಸಾಧ್ಯವಾಗಿಲ್ಲ. ‘ಕೆಜಿಎಫ್ 2’ ಸಿನಿಮಾ ಮೊದಲ ದಿನ 127 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ ‘ಟಾಕ್ಸಿಕ್’ ಸಿನಿಮಾ 117 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆ ಮೂಲಕ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಮೊದಲ ದಿನದ ಅತಿ ದೊಡ್ಡ ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಮೊದಲ ದಿನವೇ 191 ಕೋಟಿ ರೂ ಗಳಿಕೆ ಮಾಡಿತ್ತು. ಈ ದಾಖಲೆಯನ್ನು ಇನ್ಯಾವುದೇ ಸಿನಿಮಾ ಮುರಿಯುವುದು ಕಷ್ಟಸಾಧ್ಯ. ಇನ್ನು ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ‘ಧುಂಧರ್ 2’ ಇದೆ. ಇದು 138 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಹಾಗೂ ಈ ಪಟ್ಟಿಯಲ್ಲಿ ಇರುವ ಎರಡು ಹಿಂದಿ ಸಿನಿಮಾಗಳಲ್ಲಿ ಒಂದು ಇದಾಗಿದೆ.

ಇದನ್ನೂ ಓದಿ:‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ

ಮೂರನೇ ಸ್ಥಾನವು ಮತ್ತೊಂದು ಸೀಕ್ವೆಲ್ ಚಿತ್ರವಾದ ‘ಬಾಹುಬಲಿ: ದಿ ಕನ್‌ಕ್ಲೂಷನ್’ಗೆ ಸೇರಿದೆ. ಇದು 2017ರಲ್ಲಿ 133 ಕೋಟಿ ರೂ. ಗಳಿಕೆಯ ಆರಂಭವನ್ನು ಪಡೆದಿತ್ತು. 131 ಕೋಟಿ ರೂ. ಗಳಿಕೆಯೊಂದಿಗೆ ‘ಆರ್‌ಆರ್‌ಆರ್’ ನಾಲ್ಕನೇ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನದಲ್ಲಿ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಇದೆ. ಆರನೇ ಸ್ಥಾನದಲ್ಲಿ ‘ಟಾಕ್ಸಿಕ್’ ಅದಾದ ಬಳಿಕ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’, ಅದಾದ ಬಳಿಕ ಮತ್ತೆ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಇದೆ. ನಂತರದ ಸ್ಥಾನ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ್ದು. ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾಕ್ಕೆ ಹತ್ತನೇ ಸ್ಥಾನ ಸಿಕ್ಕಿದೆ.

ಈ ಪಟ್ಟಿಯ ಆರಂಭದ ಐದು ಸ್ಥಾನಗಳಲ್ಲಿ ಬಹುತೇಕ ಸೀಕ್ವೆಲ್ ಸಿನಿಮಾಗಳೇ ಇವೆ. ‘ಆರ್​​ಆರ್​​​ಆರ್’ ಸಿನಿಮಾ ಮಾತ್ರ ಇದಕ್ಕೆ ಹೊರತಾಗಿದೆ. ಆದರೆ ಸೀಕ್ವೆಲ್ ಅಲ್ಲದಿದ್ದರೂ ‘ಟಾಕ್ಸಿಕ್’ ಸಿನಿಮಾ ಮೊದಲ ದಿನ ಇಷ್ಟು ದೊಡ್ಡ ಗಳಿಕೆ ಮಾಡಿರುವುದು ವಿಶೇಷವಾದ ಸಾಧನೆಯಾಗಿದೆ. ಯಶ್ ಕೇವಲ ತಮ್ಮ ಜನಪ್ರಿಯತೆಯಿಂದ ದೊಡ್ಡ ಸಂಖ್ಯೆಯ ಜನರನ್ನು ಚಿತ್ರಮಂದಿರಕ್ಕೆ ಎಳೆದು ತಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us