AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ದಿನ 140 ಕೋಟಿ ಗಳಿಸಿದ ‘ಟಾಕ್ಸಿಕ್’ ಇದರಲ್ಲಿ ನಿರ್ಮಾಪಕನಿಗೆ ಸಿಗುವುದೆಷ್ಟು?

Toxic movie collection: ‘ಟಾಕ್ಸಿಕ್’ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 140 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ದಾಖಲೆಯೇ ಆಗಿದೆ. ಆದರೆ ಮೊದಲ ದಿನ ಗಳಿಕೆಯಾದ ಈ 150 ಕೋಟಿಯಲ್ಲಿ ಅಸಲಿಗೆ ನಿರ್ಮಾಪಕರ ಜೇಬು ಸೇರುವ ಮೊತ್ತ ಎಷ್ಟು? 140 ಕೋಟಿ ರೂಪಾಯಿಯಲ್ಲಿ ಯಾರು-ಯಾರ ಪಾಲು ಎಷ್ಟೆಷ್ಟು ಕಟ್ ಆಗುತ್ತದೆ? ಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಮೊದಲ ದಿನ 140 ಕೋಟಿ ಗಳಿಸಿದ ‘ಟಾಕ್ಸಿಕ್’ ಇದರಲ್ಲಿ ನಿರ್ಮಾಪಕನಿಗೆ ಸಿಗುವುದೆಷ್ಟು?
Toxic Movie Profit
ಮಂಜುನಾಥ ಸಿ.
|

Updated on: Aug 27, 2026 | 2:06 PM

Share

ಮುಖ್ಯಾಂಶಗಳು

  • ‘ಟಾಕ್ಸಿಕ್’ ಸಿನಿಮಾ ಮೊದಲ ದಿನ 140 ಕೋಟಿ ಗಳಿಸಿದೆ.
  • ಬಾಕ್ಸ್ ಆಫೀಸ್​​ನಲ್ಲಿ ಇದೊಂದು ಹೊಸ ದಾಖಲೆ ಆಗಿದೆ.
  • ಆದರೆ ಆ 140 ಕೋಟಿಯಲ್ಲಿ ನಿರ್ಮಾಪಕನಿಗೆ ಸಿಗುವುದೆಷ್ಟು?

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಮೊದಲ ದಿನವೇ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 140 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲೇ 101 ಕೋಟಿ ರೂಪಾಯಿ ಗಳಿಕೆ ಮಾಡಿರುವ ಈ ಸಿನಿಮಾ ವಿದೇಶಗಳಲ್ಲಿ ಸುಮಾರು 39 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನವೇ ಸಿನಿಮಾ ದಾಖಲೆ ಮೊತ್ತದ ಗಳಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುವ ಸಂಭವ ಇದೆ. ಇನ್ನು ‘ಟಾಕ್ಸಿಕ್’ ಸಿನಿಮಾ ಮೊದಲ ದಿನ 140 ಕೋಟಿ ರೂಪಾಯಿಯೇನೊ ಗಳಿಕೆ ಮಾಡಿದೆ. ಆದರೆ ಈ ಮೊತ್ತದಲ್ಲಿ ನಿರ್ಮಾಪಕರ ಜೇಬಿಗೆ ಸೇರುವ ಮೊತ್ತ ಎಷ್ಟು? ಎಲ್ಲೆಲ್ಲಿ, ಎಷ್ಟೆಷ್ಟು ಕಟ್ ಆಗುತ್ತದೆ? ಮಾಹಿತಿ ಇಲ್ಲಿದೆ ನೋಡಿ…

ಸಂದರ್ಶನವೊಂದರಲ್ಲಿ ತೆಲುಗಿನ ಜನಪ್ರಿಯ ನಿರ್ಮಾಪಕ ಮತ್ತು ವಿತರಕ, ಬಲು ಬಿಚ್ಚುಮಾತಿನ ನಾಗವಂಶಿ ಮಾತನಾಡುತ್ತಾ ನಿರ್ಮಾಪಕರಿಗೆ ಬರುವ ಮೊತ್ತದ ಬಗ್ಗೆ ಮಾತನಾಡಿದರು. ಪ್ರೇಕ್ಷಕನೊಬ್ಬ 250 ರೂಪಾಯಿ ಕೊಟ್ಟು ಟಿಕೆಟ್ ಖರೀದಿ ಮಾಡಿದರೆ ನಿರ್ಮಾಪಕನಿಗೆ ಅದರಲ್ಲಿ ಬರುವುದು ಎಷ್ಟು ಎಂದು ಲೆಕ್ಕವನ್ನು ಸಹ ಅವರು ನೀಡಿದರು. ನಾಗವಂಶಿ ಹೇಳಿದಂತೆ, 250 ರೂಪಾಯಿ ಟಿಕೆಟ್ ಖರೀದಿ ಮಾಡಿದರೆ ಅದರಲ್ಲಿ 18% ತೆರಿಗೆ ಕಟ್ ಆಗುತ್ತದೆ. ಅಲ್ಲಿಗೆ 205 ರೂಪಾಯಿ ಉಳಿಯುತ್ತದೆ. ಇನ್ನು ಈ 205 ರೂಪಾಯಿಯಲ್ಲಿ ಥಿಯೇಟರ್ ಶೇರ್ ಅಥವಾ ಮಲ್ಟಿಪ್ಲೆಕ್ಸ್ ಶೇರ್ ಸಹ ಹೋಗಬೇಕಾಗುತ್ತದೆ. ಸಾಮಾನ್ಯವಾಗಿ ಇದು 50% ಇಂದ ಆರಂಭವಾಗುತ್ತದೆ. ಅದಾದ ಬಳಿಕ ಇದು ಕಡಿಮೆ ಆಗುತ್ತಲೇ ಬರುತ್ತದೆ. ಅಲ್ಲಿಗೆ 205 ರೂಪಾಯಿಗಳಲ್ಲಿ ನಿರ್ಮಾಪಕನಿಗೆ 100 ಅಥವಾ 90 ರೂಪಾಯಿ ಮಾತ್ರವೇ ಸಿಗುತ್ತದೆ.

ಇದನ್ನೂ ಓದಿ:‘ಟಾಕ್ಸಿಕ್’ 2 ಸಾವಿರ ಕೋಟಿ ಕಲೆಕ್ಷನ್ ಮಾಡದಿದ್ದರೆ ಮೀಸೆ ಬೋಳಿಸಿಕೊಳ್ಳುವೆ; ಯಶ್ ಅಭಿಮಾನಿ

ಸಿನಿಮಾದ ಒಟ್ಟು ಗಳಿಕೆಯ 35 ರಿಂದ 40% ಮೊತ್ತವಷ್ಟೆ ನಿರ್ಮಾಪಕನ ಜೇಬು ತಲುಪುತ್ತದೆ. ಅಲ್ಲಿಗೆ ‘ಟಾಕ್ಸಿಕ್’ ಸಿನಿಮಾ ಮೊದಲ ದಿನ 140 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅದರ 40% ಎಂದರೆ ಸುಮಾರು 56 ಕೋಟಿ ರೂಪಾಯಿ ಮೊದಲ ದಿನ ನಿರ್ಮಾಪಕರ ಜೇಬು ಸೇರಿದೆ. ಉಳಿದ 84 ಕೋಟಿ ರೂಪಾಯಿ ಸರ್ಕಾರದ ತೆರಿಗೆ, ಮಲ್ಟಿಪ್ಲೆಕ್ಸ್ ಶೇರುಗಳ ರೂಪದಲ್ಲಿ ಹಂಚಿಕೆ ಆಗಿದೆ. ಸಿನಿಮಾದ ಬಜೆಟ್ 500 ಕೋಟಿ ಎನ್ನಲಾಗುತ್ತಿದ್ದು, ನಿರ್ಮಾಪಕರು ಹೂಡಿರುವ ಬಂಡವಾಳ ಮರಳಿ ಬರಬೇಕೆಂದರೆ ಮುಂದಿನ 9 ದಿನಗಳ ವರೆಗೆ ‘ಟಾಕ್ಸಿಕ್’ ಸಿನಿಮಾ ಪ್ರತಿದಿನವೂ 140 ಕೋಟಿ ಗಳಿಸಬೇಕು. ಅದು ಬಹುತೇಕ ಅಸಾಧ್ಯ ಅಥವಾ ಕನಿಷ್ಟ ಒಂದು ತಿಂಗಳಾದರೂ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಬೇಕಾಗುತ್ತದೆ.

ಆದರೆ ನಿರ್ಮಾಪಕರು ಕೇವಲ ಚಿತ್ರಮಂದಿರಗಳಿಂದ ಬರುವ ಲಾಭದ ಮೇಲೆ ಮಾತ್ರವೇ ಅವಲಂಭಿತರಾಗಿರಬೇಕಿಲ್ಲ. ‘ಟಾಕ್ಸಿಕ್’ ಸಿನಿಮಾದ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಈಗಾಗಲೇ ಮಾರಾಟ ಆಗಿವೆ. ಒಟಿಟಿ ಹಕ್ಕಿಗೆ ದೊಡ್ಡ ಬೇಡಿಕೆ ಇದೆ. ಟಿವಿ ಹಕ್ಕುಗಳು ಇತರೆ ಕೆಲವು ಹಕ್ಕುಗಳ ಮಾರಾಟದಿಂದಲೂ ಉತ್ತಮ ಮೊತ್ತವೇ ಸೇರ್ಪಡೆ ಆಗಲಿದೆ. ಅಲ್ಲಿಗೆ ‘ಟಾಕ್ಸಿಕ್’ ಸಿನಿಮಾ ಕನಿಷ್ಟ ಒಂದು ವಾರ ತುಂಬಿದ ಗೃಹಗಳ ಪ್ರದರ್ಶನ ಕಂಡರೆ ನಿರ್ಮಾಪಕರುಗಳು ಭರ್ಜರಿ ಲಾಭವನ್ನೇ ಗಳಿಸಲಿದ್ದಾರೆ.

‘ಟಾಕ್ಸಿಕ್’ ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ನಟ ಯಶ್ ಅವರುಗಳು ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಈ ಸಿನಿಮಾಕ್ಕೆ ಸುಮಾರು 500 ಕೋಟಿ ರೂಪಾಯಿ ಬಜೆಟ್ ಹೂಡಿಕೆ ಮಾಡಲಾಗಿದೆ ಎಂಬ ಸುದ್ದಿ ಇದೆ. ಯಶ್ ಅವರು ಕಳೆದ ನಾಲ್ಕು ವರ್ಷಗಳ ಕಾಲ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಅಂಥಹಾ ಸ್ಟಾರ್ ನಟಿಯರು ನಟಿಸಿದ್ದಾರೆ. ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!