
ಸೆಲೆಬ್ರಿಟಿಗಳ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇರುತ್ತದೆ. ಅವರು ಎಲ್ಲೇ ಹೋದರೂ, ಏನೇ ಮಾಡಿದರೂ ಆ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿರುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳ (Celebrity) ವೈಯಕ್ತಿಕ ವಿಚಾರಗಳ ಕುರಿತು ಮಾಹಿತಿ ಸಿಕ್ಕರೆ ಅಭಿಮಾನಿಗಳು ಮತ್ತಷ್ಟು ಖುಷಿಪಡುತ್ತಾರೆ. ಇನ್ನು, ಬಾಯ್ಫ್ರೆಂಡ್, ಮದುವೆ ವಿಚಾರದಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ದಕ್ಷಿಣ ಭಾರತದ ಈ ನಟಿಯರ ಮದುವೆಗಾಗಿ ಅಭಿಮಾನಿಗಳು ಕಾದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ರಶ್ಮಿಕಾ ಮಂದಣ್ಣ ಅವರು ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ರಿಲೇಶನ್ಶಿಪ್ನಲ್ಲಿ ಇದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ರಶ್ಮಿಕಾ ಹಾಗೂ ವಿಜಯ್ ಅಲ್ಲಗಳೆಯುತ್ತಲೇ ಬರುತ್ತಿದ್ದು, ತಾವು ಗೆಳೆಯರು ಎಂದು ಹೇಳಿಕೊಂಡಿದ್ದಾರೆ. ರಶ್ಮಿಕಾ ಯಾವಾಗ ಹಸೆಮಣೆ ಏರುತ್ತಾರೆ ಎಂದು ಅಭಿಮಾನಿಗಳು ಕಾದಿದ್ದಾರೆ.
ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಇದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಇವರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಆದರೆ, ಇದನ್ನು ಇವರು ಒಪ್ಪಿಕೊಂಡಿಲ್ಲ. ತಮನ್ನಾ ಹಾಗೂ ವಿಜಯ್ ವರ್ಮಾ ಯಾವಾಗ ಮದುವೆ ಆಗುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ.
ನಟಿ ರಕುಲ್ ಪ್ರೀತ್ ಸಿಂಗ್ ಅವರು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇವರು ಅನೇಕ ಬಾರಿ ಥೈಲ್ಯಾಂಡ್ಗೆ ಹೋಗಿ ಬಂದಿದ್ದಾರೆ. ರಕುಲ್ ಪ್ರೀತ್ ಸಿಂಗ್ ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ.
ನಟಿ ಪೂಜಾ ಹೆಗ್ಡೆ ಅವರು ಸಿನಿಮಾ ಕೆಲಸಗಳಿಂದ ದೂರವೇ ಇದ್ದಾರೆ. ಒಪ್ಪಿಕೊಂಡ ಸಿನಿಮಾಗಳಿಂದ ಅವರು ಹೊರ ನಡೆದಿದ್ದಾರೆ. ಅವರು ಮದುವೆ ಆಗುವ ಕಾರಣದಿಂದಲೇ ಒಪ್ಪಿಕೊಂಡ ಸಿನಿಮಾಗಳಿಂದ ಹೊರ ನಡೆದಿದ್ದಾರೆ ಎನ್ನುವ ಮಾತಿದೆ. ಆದರೆ, ಇದು ಸ್ಪಷ್ಟವಾಗಿಲ್ಲ.
ಅನುಷ್ಕಾ ಶೆಟ್ಟಿ ಅವರ ಬಗ್ಗೆ ಹುಟ್ಟಿಕೊಂಡ ವದಂತಿಗಳು ಒಂದೆರಡಲ್ಲ. ಅನುಷ್ಕಾ ಹಾಗೂ ಪ್ರಭಾಸ್ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಇದಕ್ಕೆ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಸದ್ಯಕ್ಕಂತೂ ಅನುಷ್ಕಾ ಶೆಟ್ಟಿ ಮದುವೆ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಅವರು ಸಿಂಗಲ್ ಆಗಿ ಜೀವನ ಕಳೆಯುತ್ತಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ವಿವಾಹವಾಗಿದ್ದರು. 10 ವರ್ಷಗಳ ಕಾಲ ಪ್ರೀತಿಸಿ ಮದುವೆ ಆದ ಹೊರತಾಗಿಯೂ ಇವರ ಸಂಬಂಧ ವಿಚ್ಛೇದನದಲ್ಲಿ ಕೊನೆ ಆಯಿತು. ಸಮಂತಾ ಅವರು ಎರಡನೇ ಮದುವೆ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ನಿತ್ಯಾ ಮೆನನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಹಲವು ಭಾಷೆ ಬರುತ್ತದೆ. ಅವರು ಮದುವೆ ವಿಚಾರದಲ್ಲಿ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಂತಿಲ್ಲ. ಕನ್ನಡದಲ್ಲಿ ಅವರು ಹಲವು ಸಿನಿಮಾ ಮಾಡಿದ್ದಾರೆ.
ಇದನ್ನೂ ಓದಿ: ಎಂಗೇಜ್ಮೆಂಟ್ ಮುರಿದುಕೊಂಡಿದ್ದ ತ್ರಿಶಾ ಕೊನೆಗೂ ಮದುವೆ ಆಗುತ್ತಿದ್ದಾರೆ; ಉದ್ಯಮಿ ಜೊತೆ ವಿವಾಹ?
ಸಾಯಿ ಪಲ್ಲವಿ ಅವರು ರಿಲೇಶನ್ಶಿಪ್ ವಿಚಾರದಲ್ಲಿ ಸುದ್ದಿ ಆಗಿಲ್ಲ. ಅವರು ಯಾವುದೇ ವಿವಾದ ಕೂಡ ಮಾಡಿಕೊಂಡಿಲ್ಲ. ಅವರು ಸದ್ಯ ಸಿನಿಮಾ ಕೆಲಸಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ.
ನಟಿ ತ್ರಿಶಾ ಅವರ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅವರು ಮಲಯಾಳಂ ನಿರ್ಮಾಪಕರೊಬ್ಬರನ್ನು ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ತ್ರಿಶಾ 2015ರಲ್ಲಿ ಉದ್ಯಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಇದು ಮುರಿದುಬಿದ್ದಿತ್ತು. ಆ ಬಳಿಕ ಅವರು ಮದುವೆ ಆಗುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ ರಚಿತಾ ರಾಮ್. ಅವರ ಮದುವೆ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಅವರು ಈ ವಿಚಾರದಲ್ಲಿ ಸುದ್ದಿ ಆಗಿದ್ದು ಕಡಿಮೆ. ಮದುವೆ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ